ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಖಿಜ್ರಾ ರಟ್ಟಿಹಳ್ಳಿ ತಾಲೂಕಿಗೆ ಪ್ರಥಮ ಸ್ಥಾನ

Khijra Rattihalli Taluk ranks first in SSLC examination

ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಖಿಜ್ರಾ ರಟ್ಟಿಹಳ್ಳಿ ತಾಲೂಕಿಗೆ ಪ್ರಥಮ ಸ್ಥಾನ 

ಶಿಗ್ಗಾವಿ06 : ಪಟ್ಟಣದ ಜೆ.ಎಂ.ಜೆ ಶಾಲೆ ಪ್ರತಿಭಾವಂತ ವಿದ್ಯಾರ್ಥಿನಿ ಖಿಜ್ರಾ ಹಿದಾಯತ್ ಉಲ್ಲಾ ರಟ್ಟೀಹಳ್ಳಿ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ 625/619 ಅಂಕಗಳು (99.04ಅ) ಗಳಿಸಿ, ತಾಲೂಕಿಗೆ ಪ್ರಥಮ ಸ್ಥಾನ, ಜಿಲ್ಲಾ ಮಟ್ಟದಲ್ಲಿ 3 ನೇ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 74 ನೇ ಸ್ಥಾನ ಗಳಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಪ್ರಭಾವಶಾಲಿ ನಕ್ಷತ್ರವು ಉದಯವಾಗಿದೆ.   ಶಾಸಕ ಯಾಶೀರಖಾನ ಪಠಾಣ ಅವರು ಖಿಜ್ರಾ ಅವರ ಸಾಧನೆಗೆ ಅಭಿನಂದನೆ ಸಲ್ಲಿಸುತ್ತಾ 

ಅವಳ ಪರಿಶ್ರಮ, ಸ್ಥೈರ್ಯ ಹಾಗೂ ವಿದ್ಯಾಭ್ಯಾಸದ ತವಕ ಶ್ಲಾಘನೀಯವಾಗಿದೆ. ಭಗವಂತ ಅವಳ ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ಮತ್ತು ಸಂತೋಷ ನೀಡಲಿ. ಅವರಂತಹ ಪ್ರತಿಭೆಗಳು ದೇಶದ ಆಸ್ತಿ ಎಂದು ಶುಭ ಹಾರೈಸಿದರು.  ತಾಲೂಕಾ ತಹಶೀಲ್ದಾರ ರವಿ ಕೊರವರ ಮಾತನಾಡಿ ಈ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ. ಪರಿಶ್ರಮವು ಎಂದಿಗೂ ವ್ಯರ್ಥವಾಗುವುದಿಲ್ಲ. ಅವರ ಶೈಕ್ಷಣಿಕ ಪಯಣ ಯಶಸ್ಸಿನಿಂದ ತುಂಬಿರಲಿ ಎಂದು ಶುಭ ಹಾರೈಸಿದರು.  ಕ್ಷೇತ್ರ ಶಿಕ್ಷಣಾಧಿಕಾರಿ ಎಮ್‌.ಬಿ. ಅಂಬಿಗೇರ ಮಾತನಾಡಿ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಶ್ರೇಷ್ಠ ಸಾಧನೆ , ತೋರಿದ ಶ್ರಮ ಮತ್ತು ಬದ್ಧತೆಗೆ ಪ್ರತಿಫಲವಾಗಿದೆ. ಈ ಸಾಧನೆ ನಮ್ಮ ಶಿಕ್ಷಣ ವ್ಯವಸ್ಥೆಯ ಮಟ್ಟ, ಶಿಕ್ಷಕರ ಪರಿಶ್ರಮ ಹಾಗೂ ಪೋಷಕರ ಪ್ರೋತ್ಸಾಹದ ಪ್ರತಿಫಲವಾಗಿದೆ. ಇಂಥ ಪ್ರತಿಭಾವಂತ ವಿದ್ಯಾರ್ಥಿಗಳು ಸಮುದಾಯದ ಆಸ್ತಿ. ಭವಿಷ್ಯದಲ್ಲಿ ದೇಶದ ಸೇವೆಯಲ್ಲಿ ಪ್ರಮುಖ ಪಾತ್ರವಹಿಸಲು ಅರ್ಹರು ಎಂದರು.  ಜೆ.ಎಂ.ಜೆ ಶಾಲೆ ಪ್ರಾಂಶುಪಾಲೆ ಅನೆ ಜಾರ್ಜ್‌ ಮಾತನಾಡಿ ನಮ್ಮ ಶಾಲೆಗೆ ಹೆಮ್ಮೆ ತರುವ ಕ್ಷಣವಾಗಿದೆ. ಖಿಜ್ರಾ ರಟ್ಟೀಹಳ್ಳಿ ಅವರು ಕೇವಲ ವಿದ್ಯಾಭ್ಯಾಸದ ಜೊತೆಗೆ ನೈತಿಕ ಮೌಲ್ಯಗಳಲ್ಲಿಯೂ ಅತ್ಯುತ್ತಮ ಮಟ್ಟವನ್ನು ತೋರಿಸಿದ್ದಾರೆ. ಅವರ ಸಾಧನೆ ಎಲ್ಲರಿಗೂ ಹರ್ಷ ತಂದಿದೆ ಎಂದರು.ಈ ಯಶಸ್ಸಿಗೆ ನಾನು ನನ್ನ ಪೋಷಕರ ಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ನನ್ನ ಅಟೋಟ ಶ್ರಮ ಕಾರಣ. ನಾನು ಪ್ರತಿಯೊಂದು ವಿಷಯದಲ್ಲಿಯೂ ಪೂರ್ಣ ಸಿದ್ಧತೆಯಿಂದ ಪರೀಕ್ಷೆ ಬರೆದೆ, ನನ್ನ ಆಶಯಗಳಿಗೆ ಯಶಸ್ಸು ದೊರೆಯಿತು. ಭವಿಷ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುತ್ತಾಳೆ ಮತ್ತು ದೇಶದ ಹಾಗೂ ಸಮುದಾಯದ ಸೇವೆಯಲ್ಲಿ ತೊಡಗಲು ಉತ್ಸುಕರಾಗಿದ್ದಾಳೆ.ಖಿಜ್ರಾ ರಟ್ಟಿಹಳ್ಳಿ ವಿಧ್ಯಾರ್ಥಿನಿ 

 ಜಿಲ್ಲೆಯ ಹಾಗೂ ಶಿಕ್ಷಣ ವಲಯ, ವಿವಿಧ ಸಂಘಟನೆಗಳು, ಸಂಬಂಧಿಕರು ಮತ್ತು ಸ್ನೇಹಿತರಿಂದ ಖಿಜ್ರಾ ರಟ್ಟೀಹಳ್ಳಿ ಇವಳಿಗೆ ಅಭಿನಂದನೆಗಳ ಸುರಿಮಳೆಯೇ ಹರಿದಿದೆ. ಅವರ ಪೋಷಕರು 

ನಮ್ಮ ಮಗಳ ಈ ಸಾಧನೆ ನಮ್ಮ ದೈವ. ನಾವು ಪ್ರಾರ್ಥಿಸುತ್ತೇವೆ ಅವಳು ಜೀವನದ ಪ್ರತಿಯೊಂದು ಹಂತದಲ್ಲಿಯೂ ಯಶಸ್ವಿಯಾಗಲಿ. 

  ಈ ಸಂದರ್ಭದಲ್ಲಿ ತಾಲೂಕಾ ಬಿಆರ್‌ಸಿ ಗೀತಾಂಜಲಿ ತೆಪ್ಪದ, ಉರ್ದು ಶಿಕ್ಷಣ ಸಂಯೋಜಕರಾದ ಅಬ್ದುಲ್‌ಖಾದರ್ ಕಡೇಮನಿ, ಉಮೇಶ್ ಎಸ್, ಗುರುರಾಜ ಎಚ್, ರಮೇಶ್ ಹೆಸರೂರ, ಶಕೀಲ ಅಹ್ಮದ್ ಚುಹೆ, ಮಹಮ್ಮದ್ ಜಾಫರ್ ನದಾಫ್, ಸಯ್ಯದ್ ಹುಸೇನ್, ಮಹಬೂಬ್ ಅಲಿ ಪಟ್ನಿ, ನೂರ್ ಅಹ್ಮದ್ ಮತ್ತುಬಾಯಿ, ಇಸ್ಮಾಯಿಲ್ ಖಾನ್ ಶಿಗುಫ್ತಾ, ಶಮಾ ಪರವೀನ್, ಮಹಮ್ಮದ್ ಇಸ್ಹಾಕ್ ಸೌದಾಗರ್, ಜೆ.ಎಂ.ಜೆ ಶಾಲೆಯ ಸಿಬ್ಬಂದಿ, ಕೆ.ಜಿ.ಎನ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಅಹ್ಮದ್ ಬಾಶಾ ಗುಲಾಮುದ್ದೀನ್ ಮತ್ತು ಸದಸ್ಯರು, ಸೂಫಿಯೇ ಮಿಲ್ಲತ್ ಮಿಷನ್ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರು, ಸಂಬಂಧಿಕರು ಹಾಗೂ ಅನೇಕ ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.