ನಾಳೆಯಿಂದ ಖಾಸ್ಗತೇಶ್ವರ ಜಾತ್ರಾ ಮಹೋತ್ಸವ ಆರಂಭ
Khasgateshwara Jatra Mahotsava begins tomorrow
ತಾಳಿಕೋಟೆ 18 : ಪಟ್ಟಣದ ಆರಾದ್ಯ ದೈವ, ಹಿಂದು-ಮುಸ್ಲಿಂ ಭಾವೈಕ್ಯತೆಯ ಸಂಕೇತದ ಸ್ಥಳೀಯ ಖಾಸ್ಗತೇಶ್ವರ ಮಹಾ ಶಿವಯೋಗಿಗಳ ಜಾತ್ರಾ ಮಹೋತ್ಸವವು ನಾಳೆ ಭಾನುವಾರ ಸಪ್ತ ಭಜನಾ ಪ್ರಾರಂಭದೊಂದಿಗೆ ಅಜ್ಜನ ಜಾತ್ರೆಗೆ ಚಾಲನೆ ದೊರೆಯಲಿದೆ. ಸಪ್ತ ಭಜನಾ ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ನೂರಾರು ಭಕ್ತಾದಿಗಳು, ಭಜನಾ ತಂಡಗಳು ಹಗಲು ರಾತ್ರಿ ಅವಿರತವಾಗಿ ಭಜನಾ ಸೇವೆ ಸಲ್ಲಿಸುವರು. ಮಠದ ಪೀಠಾಧಿಕಾರಿ ಸಿದ್ದಲಿಂಗ ದೇವರ ಅಧ್ಯಕ್ಷತೆಯಲ್ಲಿ ನಿತ್ಯ ಬೆಳಿಗ್ಗೆ 6 ಘಂಟೆಗೆ ಖಾಸ್ಗತೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾ ಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮವನ್ನು ವೇ.ವಿಶ್ವನಾಥ ವಿರಕ್ತಮಠ ನೆರವೇರಿಸುವರು.
ಮೊಸರು ಗಡಿಗೆ ಒಡೆಯುವುದು:ಜು.26ರಂದು ಶುಕ್ರವಾರ ಬೆಳಿಗ್ಗೆ 5.30 ಘಂಟೆಗೆ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮದೊಂದಿಗೆ ಸಪ್ತ ಭಜನಾ ಕಾರ್ಯಕ್ರಮ ಮಂಗಲಗೊಳ್ಳುವುದು. ಮ.12ಕ್ಕೆ ಮಹಾಪ್ರಸಾದ ವಿತರಣೆಯಾಗುವುದು. ಜುಲೈ27 ರಂದು ಸೋಮವಾರ ಬೆ. 8 ಗಂಟೆಯಿಂದ ಮಠದ ಪೀಠಾಧಿಕಾರಿ ಸಿದ್ಧಲಿಂಗದೇವರ ನೇತೃತ್ವದಲ್ಲಿ ಆನೆ ಅಂಬಾರಿ ಮೆರವಣಿಗೆಯು ಮಠದಿಂದ ಸಕಲ ವಾಧ್ಯ ವೈಭವಗಳೊಂದಿಗೆ ರಾಜವಾಡೆಯ ಭೀಮನ ಭಾವಿಯಲ್ಲಿ ಗಂಗಸ್ಥಳ ಪೂರೈಸಿ ಮರಳಿ ಪ್ರಮುಖ ಬೀದಿಗಳಲ್ಲಿ ಆನೆ ಅಂಬಾರಿ ಉತ್ಸವದೊಂದಿಗೆ ಮಠಕ್ಕೆ ತಲುಪುವುದು. ಅಂದೇ ಸಂಜೆ 4 ಗಂಟೆಗೆ ಖಾಸ್ಗತ ಮಹಾಶಿವಯೋಗಿಗಳ ಮಹಾರಥೋತ್ಸವ ಜರುಗುವುದು. ನಂತರ ಮಠದ ಸಿದ್ದಲಿಂಗ ದೇವರಿಂದ ಆಶೀರ್ವಚನ ಹಾಗೂ ರಾತ್ರಿ ಶಿವಭಜನೆ ಜರುಗುವುದು. ಜು. 29 ರಂದು ಬುಧವಾರ ಸಂಜೆ 4 ಘಂಟೆಗೆ ರಥದ ಕಳಸ ಇಳಿಸುವುದರೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಗುವುದು ಎಂದು ಮಠದ ಪ್ರಕಟಣೆ ತಿಳಿಸಿದೆ.
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ 