ಕುಕನೂರ ಅನ್ನದಾನೀಶ್ವರ ಶಾಖಾಮಠದಲ್ಲಿ ಕಾರ್ತಿಕೋತ್ಸವ ಹೃದಯದಲ್ಲಿ ಮಾನವೀಯತೆ ತುಂಬಿರಲಿ: ವೀರಯ್ಯ ತೋಂಟದಾರ್ಯಮಠ

ಕುಕನೂರ ಡಿ 14 : ಮನುಷ್ಯ ಎಷ್ಟೇ ದೊಡ್ಡವನಾದರೂ ಮಾನವೀಯತೆ ಇಲ್ಲದಿದ್ದರೆ ಅವನ ಜೀವನ ವ್ಯರ್ಥ, ಮನುಷ್ಯ ಮನುಷ್ಯನನ್ನ ಗೌರವಿಸುವುದನ್ನ ಕಲಿಯಬೇಕು ಎಂದು ಕುಕನೂರಿನ ದಳಪತಿ ವೀರಯ್ಯ ತೋಂಟದಾರ್ಯಮಠ ಹೇಳಿದರು. .   ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ಕಾರ್ತಿಕೋತ್ಸವ, 180 ನೇ ಶಿವಾನುಭವ ಮತ್ತು ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸಂಗೀತಕ್ಕೆ ಸೋಲದ ಮನಸ್ಸುಗಳಿಲ್ಲ, ಸಂಗೀತ ಕೇಳುವುದರಿಂದ ಮನಸ್ಸು ಹಗುರವಾಗುತ್ತದೆ, ಸಂಗೀತ ಕ್ಷೇತ್ರಕ್ಕೆ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕೊಡುಗೆ ಅಪಾರ ಮತ್ತು ಕುಕನೂರ ಬಾಬಣ್ಣ ಕಲ್ಮನಿ ಯವರ ನಿಧನ ಕಲಾರಂಗಕ್ಕೆ ತುಂಬಲಾರದ ನಷ್ಟ, ಅವರ ಸಾಧನೆ ಅನನ್ಯವಾದದ್ದು ಅವರ ಕುಟುಂಬವೇ ಕಲಾಕ್ಷೇತ್ರಕ್ಕೆ ಮೀಸಲಾಗಿತ್ತು ಎಂದರು. 

ನಂತರ ಮಾತನಾಡಿದ ವಕೀಲರಾದ ಶಿರೂರ ಗ್ರಾಮದ ಚಿನ್ನಪ್ಪ ತಳವಾರ ಶಿವಾನುಭವ ಕಾರ್ಯಕ್ರಮಗಳು ಮನುಷ್ಯನ ಬದುಕಿಗೆ ಸಹಕಾರಿಯಾಗಿವೆ ಪ್ರತಿ ಹಳ್ಳಿಗಳಲ್ಲಿ ಕೂಡ ಧರ್ಮಚಿಂತನಾ ಕಾರ್ಯಗಳು ನಡೆಯಬೇಕು, ಮನುಷ್ಯ ಹಣವಂತನಾಗಿ ಬಾಳುವದಕ್ಕಿಂತ ಗುಣವಂತನಾಗಿ ಸಂಸ್ಕಾರವಂತನಾಗಿ ಬದುಕು ನಡೆಸಬೇಕು ಎಂದರು. 

 ಹಿರಿಯರಾದ ವಿ ಆರ್ ಉಳ್ಳಾಗಡ್ಡಿಮಠ ಮಾತನಾಡಿ ಕುಕನೂರ ಅನ್ನದಾನೀಶ್ವರ ಮಠವು ಸಾಕಾಷ್ಟು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ, ಶಿವುಕುಮಾರ ಭಜಂತ್ರಿ ಸೇರಿದಂತೆ ಹಲವಾರು ಕಲಾವಿದರು ಶ್ರೀಮಠದಲ್ಲಿ ಸಂಗೀತ ಸೇವೆ ಸಲ್ಲಿಸಿದ್ದಾರೆ, ಕುಕನೂರ ಮೆಲೋಡಿಸ ತಂಡದವರು ಕೂಡ ಶ್ರೀಮಠದ ಆಶ್ರಯದಲ್ಲಿ ಬೆಳೆದವರು ವಿಶೇಷವಾಗಿ ಪೂಜ್ಯರ ನೆಚ್ಚಿನ ಕಲಾವಿದರಾಗಿ ಗುರುತಿಸಿಕೊಂಡವರು ಇಂತಹ ಹಲವಾರು ಕಲಾವಿದರೂ ಕೂಡ ಶ್ರೀಮಠಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದರು. 

 ಕಾರ್ತಿಕೊತ್ಸವ ನಿಮಿತ್ಯ ಅಭಿಷೇಕ, ಪ್ರಸಾದ ಸೇವೆ ಸಂಜೆ ಕಲಾವಿದರಾದ ಶಿವಶರಣಯ್ಯ ಮ್ಯಾಗಲಮಠ, ಅಶೋಕ ಬಂಗಿ, ಶ್ರೀಮತಿ ಭಾರತಿ ಬಂಗಿ, ಅನಿಲಕುಮಾರ, ಮಂಜುನಾಥ ಮುಂಡರಗಿ ಸೇರಿದಂತೆ ಹಲವಾರು ಕಲಾವಿದರು ಸಂಗೀತ ಸಂಜೆ ನಡೆಸಿಕೊಟ್ಟರು.  ಈ ಸಂಧರ್ಭದಲ್ಲಿ ಶ್ರೀಮಠದ ಪೂಜ್ಯ ಡಾ ಮಹಾದೇವ ಮಹಾಸ್ವಾಮಿಗಳು, ಪೂಜ್ಯ ನಿರಂಜನ ಮಹಾಸ್ವಾಮಿಗಳು, ಗದಿಗೆಪ್ಪ ಪವಾಡಶೆಟ್ಟಿ, ಜಗದೀಶಯ್ಯ ಕಳ್ಳಿಮಠ, ಪ್ರಭು ಶಿವಶಿಂಪರ, ಮೇಘರಾಜ ಜಿಡಗಿ, ಆನಂದ ಮಡಿವಾಳರ, ಮತ್ತು ಅಕ್ಕನ ಬಳಗದ ಸದಸ್ಯರು ಇದ್ದರು.