ಹಳಗುಣಕಿ ಪ್ರೌಢಶಾಲೆಯಲ್ಲಿಕಾರ್ಗಿಲ್ ವಿಜಯೋತ್ಸವ ಆಚರಣೆ
Kargil Victory Day Celebration at Halagunaki High School
ಇಂಡಿ 26: ತಾಲೂಕಿನ ಹಳಗುಣಕಿ ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಉಪ ಪ್ರಾಂಶುಪಾಲ ಎಸ್ ಎಸ್ ಕರಜಗಿ ಅಧ್ಯಕ್ಷತೆ ವಹಿಸಿ ಮಾತನಾಡಿ ಇಡೀ ವಿಶ್ವದಲ್ಲಿ ಭಾರತೀಯ ಸೈನ್ಯ ಅಗಾಧ ಶಕ್ತಿ ಸಾಮರ್ಥ್ಯ ಹೊಂದಿದೆ. ಸೈನಿಕರ ಕುಟುಂಬಕ್ಕೆ ಇಡೀ ದೇಶವೇ ಬೆನ್ನೆಲುಬಾಗಿ ನಿಲ್ಲಬೇಕು. ಅವರ ಶೌರ್ಯ, ಬಲಿದಾನಕ್ಕೆ ಗೌರವ ನೀಡಬೇಕು ಎಂದು ಹೇಳಿದರು.ಮಾಜಿ ಸೈನಿಕ ಅಣ್ಣಾರಾಯಗೌಡ ಬಿರಾದಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ನಮ್ಮ ದೇಶದಲ್ಲಿ ಸೈನಿಕರಿಗೆ ಅಪಾರ ಗೌರವ ಇದೆ. ಸೈನಿಕರ ತ್ಯಾಗ, ಧೈರ್ಯ ನಿಜಕ್ಕೂ ಎಲ್ಲರಿಗೂ ಪ್ರೇರಣೆ. ಇಂದಿನ ಮಕ್ಕಳು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ ಸದಾಶಿವ ಮಾದರ ಉಪಸ್ಥಿತರಿದ್ದರು.ಶಾಲಾ ಸ್ಕೌಟ್ ಮಾಸ್ಟರ್ ಸಂಗಮೇಶ ಬಂಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳು ಹುತಾತ್ಮರಾದ ವೀರಯೋಧರ ಜೀವನವನ್ನು ಆದರ್ಶವಾಗಿಟ್ಟುಕೊಳ್ಳಬೇಕು.ಅವರ ದೇಶಪ್ರೇಮದ ಮನೋಭಾವ ಎಲ್ಲರಿಗೂ ಅತ್ಯಗತ್ಯ ಎಂದು ಹೇಳಿದರು.
ಕನ್ನಡ ಭಾಷಾ ಶಿಕ್ಷಕ ಬಸವರಾಜ ದಶವಂತ ಹಾಗೂ ಅಪ್ಪಾಸಾಹೇಬ ಇಂಡಿ ನಿರೂಪಿಸಿದರು. ಚಿತ್ರಕಲಾ ಶಿಕ್ಷಕ ಸುಖದೇವ ಕಾಂಬ್ಳೆ ವಂದಿಸಿದರು.ಶಾಲೆಯ ಶಿಕ್ಷಕರಾದ ಶಿವಲೀಲಾ ಪಾಟೀಲ,ಮಹೇಶ್ವರಿ ಜವಳಗಿ, ಸುನಿತಾ ದೊಡಮನಿ, ಗೀತಾಂಜಲಿ ಕೋಳಿ,ಅರ್ಚನಾ ಜಹಗೀರದಾರ,ವಿದ್ಯಾಧರ ಬಿರಾದಾರ, ಶಂಸುದ್ದೀನ್ ನದಾಫ್, ದುರ್ಗೇಶ ಪ್ರಭಾಕರ ಸಿಂಘೆ, ಪ್ರಮೋದ ಬಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮೇಣದ ಬತ್ತಿ ಬೆಳಗಿಸುವ ಮೂಲಕ ಹುತಾತ್ಮರಿಗೆ ಗೌರವ ಸಲ್ಲಿಸಿದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 