ಕಂಠಿ ಕಾಲೇಜಿನ ಟಾಪರ್ಸ್‌

ಮುಧೋಳ 29: ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು 2022-23 ನೇ ಸಾಲಿನ ಬಿ.ಎ 6 ನೇ ಸೆಮ್ ಗೆ ನಡೆಸಿದ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ. 

ಬಾಗಲಕೋಟ ಬಿವ್ಹಿವ್ಹಿ ಸಂಘದ ಮುಧೋಳ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಕಲಾ ವಿಭಾಗದ ಐಚ್ಚಿಕ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ 6 ನೇ ಸೆಮ್ ಪ್ರಥಮ ಪತ್ರಿಕೆ ಪೋಟೋ ಜರ್ನಾಲಿಜಂ ಆಂಡ್ ಸಿನೇಮಾ ವಿಷಯದಲ್ಲಿ ಮತ್ತು ಬುದ್ನಿ100 ಕ್ಕೆ 88, ವೈಷ್ಣವಿ ಬಡಿಗೇರ 100 ಕ್ಕೆ 87, ಮಾಯಾ ಆಲೂರ 100 ಕ್ಕೆ 87, ಸಾಗರ ಸೋನ್ಯಾಳ 100 ಕ್ಕೆ 87, ಶಂಕರ ಗಡ್ಡೆಪ್ಪಗೋಳ 100 ಕ್ಕೆ 85 ಅಂಕಗಳನ್ನು ಪಡೆದುಕೊಂಡಿದ್ದಾರೆ ಅದರಂತೆ 6 ನೇ ಸೆಮ್ ದ್ವಿತೀಯ ಪತ್ರಿಕೆ ಟೆಲಿವಿಷನ್ ಜರ್ನಾಲಿಜಂ ಆಂಡ್ ಇಂಟರನೆಟ್ ವಿಷಯದಲ್ಲಿ ಮುತ್ತು ಬುದ್ನಿ 100 ಕ್ಕೆ 87, ವೈಷ್ಣವಿ ಬಡಿಗೇರ 100 ಕ್ಕೆ 87, ಗೋಪಾಲ ಚಿಕ್ಕೂರ 100 ಕ್ಕೆ 86 ಅಂಕಗಳನ್ನು ಪಡೆದು ಉತ್ತೀರ್ಣ ರಾಗಿ ಮಹಾವಿದ್ಯಾಲಯಕ್ಕೆ ಮತ್ತು ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗಕ್ಕೆ ಕೀರ್ತಿ ತಂದಿರುವದಕ್ಕೆ ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಎನ್‌. ಅಥಣಿ, ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾ ಧ್ಯಕ್ಷ ಗುರುಬಸವ ಸೂಳಿಭಾವಿ ಹಾಗೂ ಸದಸ್ಯರು, ಕಾಲೇಜಿನ ಪ್ರಾಚಾರ್ಯ ಪ್ರೊ.ಮಲ್ಲಣ್ಣ ವ್ಹಿ. ಜಿಗಬಡ್ಡಿ ಹಾಗೂ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ವಿಶ್ವನಾಥ ಮುನವಳ್ಳಿ, ಸಹ ಪ್ರಾಧ್ಯಾಪಕ ಆನಂದ ತುಳಸಿಕಟ್ಟಿ ಅವರು ಅಭಿನಂದಿಸಿದ್ದಾರೆ.