ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ: ಛಬ್ಬಿ


ಹುನಗುಂದ03:  ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನಾಡು ಕಾವೇರಿಯಿಂದ ಗೋದಾವರಿವರಿಗೆ ಇರುವ ವಿಶಾಲ ಪ್ರದೇಶವೇ ಕನ್ನಡ ನಾಡು ಎಂದು ಕೂಡಲಸಂಗಮ ಗ್ರಾಮ ಪಂಚಾಯತಿಯ ಪಿಡಿಓ ಶಿವುಕುಮಾರ ಛಬ್ಬಿ ಹೇಳಿದರು.                                               

ತಾಲೂಕಿನ ಸಮೀಪದ ಕೂಡಲಸಂಗಮ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ 66ನೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. 

 ಕನ್ನಡ ನಾಡಿನ ಏಕೀಕರಣಕ್ಕಾಗಿ ಸಾಕಷ್ಟು ಮಹನೀಯರು ಶ್ರಮಿಸಿದ ಫಲವಾಗಿ ಮೊಟ್ಟ ಮೊದಲು ಮೈಸೂರ ರಾಜ್ಯ ಉದಯವಾಯಿತು ನಂತರ ಅದಕ್ಕೇ ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಲಾಯಿತು. ಕನ್ನಡ ಭಾಷೆ ಸುಲಿದ ಬಾಳೆ ಹಣ್ಣಿನಂತೆ, ಸಿಗುರು ತಗೆದ ಕಬ್ಬಿನಂತೆ, ಉಷ್ಣ ಅಳೆದ ಹಾಲನಂತೆ ಸುಲಭ ಮತ್ತು ಸರಳ ಭಾಷೆಯಾಗಿದೆ.ಕನ್ನಡ ಭಾಷೆ ಪ್ರಾಚೀನ ಗ್ರಂಥಗಳಲ್ಲಿಯು ಕೂಡಾ ಇದರ ಇರುವಿಕೆಯ ಬಗ್ಗೆ ಅನೇಕ ಪುರಾವೆಗಳು ಸಿಕ್ಕಿವೆ.ಕನ್ನಡ ನಾಡು ನುಡಿ,ನೆಲ,ಜಲ ವಿಷಯ ಬಂದಾಗ ಕನ್ನಡಿಗರು ಜಾತಿ, ಮತ, ಪಂಥವನ್ನು ಮರೆತು ಸರ್ವರೂ ಹೋರಾಟ ಮಾಡಿ ಕನ್ನಡ ಭಾಷೆಯನ್ನು ಅಭಿವೃದ್ದಿಗೊಳಿಸುವ ಕಾರ್ಯದಲ್ಲಿ ಸದಾ ಮಗ್ನರಾಗಿರುತ್ತಾರೆ ಎಂದರು. ಗ್ರಾ,ಪಂ ಅಧ್ಯಕ್ಷೆ ಯಲ್ಲವ್ವ ಭಜಂತ್ರಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿದರು.  

 ಗ್ರಾ.ಪಂ ಸದಸ್ಯರಾದ ಸಿದ್ದಣ್ಣ ಇಜಾರದಾರ, ಪ್ರಭು ಹಿರೇಮಠ, ಅನೀಲಕುಮಾರ ಗೌಡರ, ಮುಖಂಡರಾದ ಅಖಂಡೇಶ ಪತ್ತಾರ, ಮಂಜು ನಂದಕೇಶ್ವರ ಸೇರಿದಂತೆ ಗ್ರಾ.ಪಂ ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.