ಕನ್ನಡ ಸಾಹಿತ್ಯ ಸಮ್ಮೇಳನ: ಚಿತ್ರಕಲಾ ಶಿಬಿರಕ್ಕೆ ಚಾಲನೆ

ಧಾರವಾಡ 01: ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಚಿತ್ರಕಲಾ ಸಮಿತಿಯು ಇಂದು ನಗರದ ಸಕರ್ಾರಿ ಆರ್ಟ ಗ್ಯಾಲರಿಯಲ್ಲಿ ಹಿರಿಯ ಹಾಗೂ ಯುವ ಕಲಾವಿದರ ಚಿತ್ರಕಲಾ ಶಿಬಿರವನ್ನು ಏರ್ಪಡಿಸಿತ್ತು. 

ಶಿಬಿರ ಉದ್ಘಾಟಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಕಲಾವಿದರು ಸುಪ್ತವಾದ  ಪ್ರತಿಭೆಯನ್ನು ಕಲಾಕೃತಿಗಳ ಮೂಲಕ ಅಭಿವ್ಯಕ್ತಿ ಪಡಿಸುತ್ತಾರೆ. ಇದಕ್ಕೆ ಪೂರಕವಾಗಿ ನೈಸಗರ್ಿಕ ಅನುಸಂಗತಿಗಳನ್ನು ಬಳಸಿಕೊಳ್ಳುತ್ತಾರೆ. ಮಕ್ಕಳಲ್ಲಿ ಕಲೆ ಬೆಳೆಸಲು ಪಾಲಕರು ಪ್ರೋತ್ಸಾಹಿಸಬೇಕು, ಚಿತ್ರಕಲೆಯನ್ನು ಕೇವಲ ಹವ್ಯಾಸವನ್ನಾಗಿಸಿದೆ. ಮುಖ್ಯ ವೃತ್ತಿಯನ್ನಾಗಿ ಪರಿಗಣಿಸಬೇಕು ಎಂದರು. ಈ ಶಿಬಿರದಲ್ಲಿ ರಚಿತವಾದ ಕಲಾಕೃತಿಗಳನ್ನು ಆಸಕ್ತರು ಖರೀದಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಕಲಾವಿದ ಎಂ.ಆರ್ ಬಾಳಿಕಾಯಿ ಮಾತನಾಡುತ್ತಾ, ಧಾರವಾಡ ಜಿಲ್ಲೆಯಲ್ಲಿ ಚಿತ್ರಕಲೆಯ ಬೆಳವಣಿಗೆಗೆ ತನ್ನದೇ ಆದ ಇತಿಹಾಸವಿದೆ. ಡಿ.ವಿ. ಹಾಲಭಾವಿ.   ದಂಡಾವತಿಮಠ, ಡಾ. ಮಿಣಜಿಗಿಯವರಂತಹ ಮಹನೀಯರು ಕಲೆ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು ಎಂದರು. 

  ಮುಖ್ಯ ಅತಿಥಿಗಳಾದ ಗಾಯತ್ರಿ ದೇಸಾಯಿ ಅವರು ಮಾತನಾಡುತ್ತಾ ಸಾಂಸ್ಕೃತಿಕ ನಗರವಾದ ಧಾರವಾಡವು ಚಿತ್ರಕಲೆ, ಸಾಹಿತ್ಯ, ಸಂಗೀತ ಕಲೆಗಳಿಗೆ ರಾಷ್ಟ್ರೀಯ ಮನ್ನಣೆಯನ್ನು ತಂದು ಕೊಟ್ಟಿದೆ.      .ಚಿತ್ರಕಲೆ ಹಾಗೂ ಸಾಹಿತ್ಯ ಜೊತೆ ಜೊತೆಯಾಗಿಯೇ ಬೆಳೆಯಬೇಕು ಎಂದರು.

ಜಿ.ಪಂ. ಮುಖ್ಯಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ ಸತೀಶ, ಡಿಸಿಪಿ ಬಿ.ಎಸ್. ನೇಮಗೌಡ,   ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಉಪಸ್ಥಿತರಿದ್ದರು.

ಸುರೇಶ ಹಾಲಭಾವಿ ಸ್ವಾಗತಿಸಿದರು, ಬಸವರಾಜ ಕುರಿ ನಿರೂಪಿಸಿದರು. ಎಸ್.ಕೆ. ಪತ್ತಾರ ವಂದಿಸಿದರು. ಚಿತ್ರಕಲಾ ಸಮಿತಿಯ ಸದಸ್ಯರು, ಹಿರಿಯ ಕಲಾವಿದರು, ಕಲಾಸಕ್ತರು ಉಪಸ್ಥಿತರಿದ್ದರು.

ಸರಕಾರಿ ಆರ್ಟ ಗ್ಯಾಲರಿಯಲ್ಲಿ 30 ಜನ ಹಿರಿಯ ಕಲಾವಿದರು ಹಾಗೂ 30 ಜನ ಯುವ ಕಲಾವಿದರು ಮೂರು ದಿನಗಳ ಕಾಲ ಕಲಾಕೃತಿಗಳನ್ನು ರಚಿಸುವರು. ಕಲಾಸಕ್ತರು ಆಗಮಿಸಿ ಪ್ರೋತ್ಸಾಹಿಸಲು ಕೋರಿದ್ದಾರೆ .