5 ಗಂಟೆಗಳಲ್ಲಿ ಕಂಬಿ ಮಲ್ಲಯ್ಯ ಆಂಧ್ರದ ಶ್ರೀಶೈಲಂದಿಂದ ಮುಧೋಳ ಪಟ್ಟಣಕ್ಕೆ ಆಗಮನ

ಮಹಾಲಿಂಗಪುರ  16: ಕಡು ಬಿಸಿಲು ಹಾಗೂ ರಾತ್ರಿಯನ್ನು ಲೆಕ್ಕಿಸದೆ ಮಹಾಲಿಂಗಪುರ ಪಟ್ಟಣದ ಕಂಬಿ ಮಲ್ಲಯ್ಯ ಸೋಮವಾರ ಮುಧೋಳ ಪಟ್ಟಣಕ್ಕೆ ಆಗಮಿಸಿದೆ. 

ಪಟ್ಟಣದ ಶ್ರೀ ಗುರು ಮಹಾಲಿಂಗೇಶ್ವರ ದೇವಸ್ಥಾನದಿಂದ ಹೋಳಿ ಹಬ್ಬದ ಕರಿ ದಿವಸ ಬೆಳ್ಳಗಿನ ಜಾವ ಆಂಧ್ರದ ಶ್ರೀಶೈಲಂ ಸುಕ್ಷೇತ್ರ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪಾದಯಾತ್ರೆ ಬೆಳೆಸಿದ್ದರು. 

ಯುಗಾದಿ ಹಬ್ಬದ ದಿನದಂದು ಶ್ರೀಶೈಲ ಮಲ್ಲಿಕಾರ್ಜುನನ ತೇರು ಮತ್ತು ಭ್ರಮರಾಂಭ ದೇವಿ ಜಾತ್ರಾ ಮಹೋತ್ಸವ ಮುಗಿಸಿಕ್ಕೊಂಡು ಕಂಬಿ ಮಲ್ಲಯ್ಯ ಹಾಗೂ ಕೆಲವು ಭಕ್ತರು ಪರತ ಐದು ದಿವಸಗಳು ಮತ್ತು 18 ಗಂಟೆಗಳಲ್ಲಿ ಅವಿರತವಾಗಿ ಪಾದಯಾತ್ರೆಯನ್ನು ಬೆಳೆಸಿ ಅತಿ ಕಡಿಮೆ ಅವಧಿಯಲ್ಲಿ ಸೋಮವಾರ ರಾತ್ರಿ 10 ಗಂಟೆಗೆ ಮುಧೋಳ ಪಟ್ಟಣದ ಶ್ರೀ ಗುರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುರಕ್ಷಿತವಾಗಿ ಬಂದು ತಲುಪಿದ್ದು ಇಲ್ಲಿಯೇ 11ದಿವಸಗಳ ವಾಸ್ತವ್ಯ ನಡೆಯಲಿದೆ. 

ನಂತರ ಎಪ್ರಿಲ್ 27ರಂದು ಮುಧೋಳದಿಂದ ಬೆಳಗಲಿಯ ಶ್ರೀ ಗುರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ 28ರಂದು ಮಹಾಲಿಂಗಪುರ ಪುರ ಪ್ರವೇಶ ನಡೆಯುವುದು. ಮೇ 2 ನೇ ತಾರಿಖಿನಂದು ಮಹಾಲಿಂಗೇಶ್ವರ ಕಾರ್ತಿಕೋತ್ಸವ ಬಹಳ ವಿಜೃಂಭಣೆಯಿಂದ ಜರುಗುತ್ತದೆ. 

ಪಾದಯಾತ್ರೆಯಲ್ಲಿ ಸಿದ್ದಯ್ಯ ಮಠಪತಿ, ಮಾಂತಯ್ಯ ಮಠಪತಿ, ಶ್ರೀಶೈಲ ಮಠಪತಿ, ಮಹಾಲಿಂಗಪ್ಪ ಕುರಿ, ಅರುಣ ಬೆಳಗಲಿ,ರಮೇಶ ಹುದ್ದಾರ, ಚೆನ್ನಪ್ಪ ಅವಟಗಿ, ಮಲಕಯ್ಯ ಬಸರಗಿ, ಸುಭಾಸ ಭಾಗೋಜಿ, ಮಲ್ಲು ಆಲಬಾಳ, ವಿಠ್ಠಲ್ ಮಾಳಿ, ಆನಂದ ಮುರುಗೋಡ, ಮತ್ತು ಇನ್ನೂ ಅನೇಕ ಸೇವಕರು ಭಾಗಿಯಾಗಿದ್ದರು.