ಸಂಭ್ರಮದಿಂದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ

ಸಂಭ್ರಮದಿಂದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ Kalyana Karnataka Utsava celebrated with great enthusiasm

ಲೋಕದರ್ಶನ ವರದಿ 

ಕಂಪ್ಲಿ 17:   ಹೈದರಾಬಾದ್ ನಿಜಾಮರ ಕಪಿಮುಷ್ಠಿಯಿಂದ ಮುಕ್ತಿ ಪಡೆದ ಐತಿಹಾಸಿಕ ದಿನವನ್ನು "ಕಲ್ಯಾಣ ಕರ್ನಾಟಕ ಉತ್ಸವ ದಿನ"ವನ್ನಾಗಿ ಆಚರಿಸಲಾಗುತ್ತಿದೆ ಎಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ಹೇಳಿದರು.    ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಗುರುವಾರ  ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಶಿಕ್ಷಣ, ಸಂಶೋಧನೆ, ಉದ್ಯೋಗ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಯುವಜನತೆ ಮಹತ್ವದ ಪಾತ್ರವಹಿಸಬೇಕು. ಈ ಭಾಗದ ಜನರು ತಮ್ಮ ಮಕ್ಕಳಿಗೆ  ಉತ್ತಮ ಶಿಕ್ಷಣ ನೀಡುವ ಮೂಲಕ ಸರ್ಕಾರಿ ಉದ್ಯೋಗಗಳಲ್ಲಿ  ಸೇರುವಂತೆ ಎಲ್ಲಾ  ಪಾಲಕರು ಪ್ರಯತ್ನಿಸಬೇಕು. ಕಲ್ಯಾಣ ಕರ್ನಾಟಕದ ಯೋಜನೆಗಳನ್ನು ಪಡೆದುಕೊಂಡು ಉತ್ತಮ ಜೀವನದ ಕಡೆಗೆ ಸಾಗಬೇಕು ಎಂದರು.  ಈ ಸಂದರ್ಭದಲ್ಲಿ ಪ್ರಭಾರ ಉಪ ತಹಶೀಲ್ದಾರ್ ರಮೇಶ, ಶಿರಸ್ತೇದಾರ ಪಂಪಾಪತಿ, ಕಂದಾಯ ನೀರೀಕ್ಷಕ ಸುರೇಶ, ನಿಲಯ ಪಾಲಕ ಕೆ.ವಿರುಪಾಕ್ಷಿ, ವಿಎಗಳಾದ ಮಂಜುನಾಥ, ಲಕ್ಷ್ಮಣನಾಯ್ಕ್‌, ರಾಘವೇಂದ್ರ, ಗೀರೀಶ್, ಮುಖಂಡ ಕರೇಕಲ್ ಮನೋಹರ, ವಿವಿಧ ಇಲಾಖೆ ಸಿಬ್ಬಂದಿಗಳು, ಮುಖಂಡರು, ಮಕ್ಕಳು ಇದ್ದರು.