ಕಡಕೋಳ ಅವರ ಸನ್ಮಾನ ಸಮಾರಂಭ
Kadakola's felicitation ceremony
ಸವದತ್ತಿ 24: ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರ ದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಬಿ. ಕಡಕೋಳ ಅವರಿಗೆ ಡಾಕ್ಟರೇಟ್ ದೊರೆತ ಪ್ರಯುಕ್ತ ಧಾರವಾಡ ಹಾಗೂ ಹುಬ್ಬಳ್ಳಿ ಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.ಆದರ್ಶ ಶಿಕ್ಷಕ, ವಿರಳಯುವ ಬರಹಗಾರ ಡಾ. ವೈ.ಬಿ. ಕಡಕೋಳ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಬಿಡುವಿನ ದಿನಗಳನ್ನು ಈ ಕಾಯಕಕ್ಕೆ ಸದುಪಯೋಗಪಡಿಸಿಕೊಂಡು ಇತೀಚಿಗಷ್ಟೇ ಡಾಕ್ಟರೇಟ್ ಪಡೆದ ಸಾತ್ವಿಕ ವ್ಯಕ್ತಿ. ಬೆಳಗಾವಿಯ ವಿಧಾನಸೌದದ ಸೆಂಟ್ರಲ್ ಹಾಲ್ ನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 14 ನೇ ಘಟಿಕೋತ್ಸವದಲ್ಲಿ ಕಡಕೋಳ ಅವರು ಮಹೇಶ ಗಾಜಪ್ಪನವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು ಸಮಗ್ರ ಅಧ್ಯಯನ ಸಮಗ್ರ ಅಧ್ಯಯನ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದ ನಿಜಕ್ಕೂ ಸಂತಸದ ಸಂಗತಿ ಎಂದು ಶಿಕ್ಷಕ ಎಲ್. ಐ. ಲಕ್ಕಮ್ಮನವರ ಹೇಳಿದರು.
ಹುಬ್ಬಳ್ಳಿ ಯ ಪವರ್ ಆಫ್ ಯೂತ್ಸ ಫೌಂಡೇಶನ್ , ಧಾರವಾಡ ಅಪ್ನಾದೇಶ ಫೌಂಡೇಶನ್ ಮಹಾಪೊಷಕರಾದ ಎಲ್ ಐ ಲಕ್ಕಮ್ಮನವರ ನೇತೃತ್ವದ, ಫೌಂಡೇಶನ್ ರಾಜ್ಯ ಕಾರ್ಯಾಧ್ಯಕ್ಸರು ಬಸವರಾಜ ಕುಡುಒಕ್ಕಲಿಗೇರ ಹಾಗು ಪವರ್ ಆಫ್ ಯುಥ್ಸ ಫೌಂಡೇಶನ್ ಕರ್ನಾಟಕ ಅಧ್ಯಕ್ಷ ರವಿಚಂದ್ರನ್ ದೊಡ್ಡಿಹಾಳ ಸತ್ಕರಿಸಿ ಗೌರವಿಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಅಪ್ನಾದೇಶ್ ಫೌಂಡೇಶನ್ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಕುಡುವಕ್ಕಲಿಗೇರ, ಡಾ ವೈ ಬಿ ಕಡಕೋಳ ಅವರ ಸಾಹಿತ್ಯ ತುಂಬಾ ಜನ ಮನ್ನಣೆ ಗಳಿಸಿದೆ ಧಾರವಾಡದ ಅಕ್ಷರ ತಾಯಿ ಲೂಸಿ ಸಾಲ್ದಾನಾರವರ 17ಪುಸ್ತಕಗಳನ್ನು ಹೊರತರುವಲ್ಲಿ ಕಡಕೋಳ ಅವರ ಪ್ರಯತ್ನ ಮೆಚ್ಚುಗೆ ಪಡೆದಿದೆ ಇವರ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ ಎಂದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 