ಕೆಎಂಎಫ್ ನಿರ್ದೇಶಕ ಸ್ಥಾನದ ಚುನಾವಣೆ: ಮಹಾದೇವ ಬಿಳಿಕುರಿಯವರಿಗೆ ಭರ್ಜರಿ ಗೆಲವು

ಅಥಣಿ 18: ಕೆಎಂಎಫ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬೆಂಬಲಿತ ಅಭ್ಯರ್ಥಿ ಮಹಾದೇವ ಬಿಳಿಕುರಿಯವರಿಗೆ ಭರ್ಜರಿ ಗೆಲವು  

ಉತ್ತರ ಕರ್ನಾಟಕದ ಹುಲಿ ಶಾಸಕ ಲಕ್ಷ್ಮಣ ಸವದಿ ಕೊಟ್ಟ ಮಾತು ಇಟ್ಟ ಗುರಿ ಎಂದಿಗೂ ತಪ್ಪಿಲ್ಲಾ. ಏಕೆಂದರೆ ಯಾರನ್ನು ತೇಲಿಸಬೇಕು ಯಾರನ್ನು ಮುಳುಗಿಸಬೇಕೆನ್ನುವುದು ಅವರಿಗೆ ಚೆನ್ನಾಗಿ ಗೊತ್ತು. ಹುಲಿ ಬೇಟೆಯಾಡಲು ನಿಂತಿದೆ ಅಂದರೆ ಶಿಕಾರಿ ಫಿಕ್ಸ್‌. ಲಕ್ಷ್ಮಣ ಸವದಿಯವರು ಚುನಾವಣೆ ಅಖಾಡಕ್ಕೆ ಇಳಿದ ಮೇಲೆ ಎದುರಾಳಿಗಳಿಗೆ ನಡುಕ ಹುಟ್ಟುತ್ತದೆ. ಏಕೆಂದರೆ ಅವರು ಯಾವ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುತ್ತಾರೋ ಆ ಚುನಾವಣೆಯ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿರುತ್ತದೆ. ಅನ್ನುವುದಕ್ಕೆ ಉದಾಹರಣೆ ಇದೆ ಕೆಎಂಎಫ್ ಚುನಾವಣೆಯಾಗಿದೆ.  

17 ರಂದು ನಡೆದ  ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಬೆಳಗಾವಿ ಇದರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಾಜಿ ಡಿಸಿಎಂ ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸಂಗಪ್ಪ ಸವದಿ ಅವರ ಬೆಂಬಲಿತ ಅಭ್ಯರ್ಥಿ ಮಹಾದೇವ ಬಿಳಿಕುರಿ ಅವರು 49 ಮತಗಳನ್ನು ಪಡೆದು 14 ಮತಗಳ ಅಂತರದಿಂದ ವಿಜಯಶಾಲಿಯಾದರು. ಪ್ರತಿಸ್ಪರ್ಧಿ ಅಭ್ಯರ್ಥಿ 35 ಮತಗಳನ್ನು ಪಡೆದು ಹೀನಾಯವಾಗಿ ಸೋತಿದ್ದಾರೆ. 

ಭರ್ಜರಿ ಗೆಲುವು ಸಾಧಿಸಿದ ಮಹಾದೇವ ಬಿಳಿಕುರಿಯವರ ಗೆಲುವಿಗೆ ಮಾನ್ಯ ಲಕ್ಷ್ಮಣ ಸವದಿ ಅವರು ಹರ್ಷ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿದರು.    

ಕೆಎಂಎಫ್ ನಿರ್ದೇಶಕರ ನೂತನವಾಗಿ ಆಯ್ಕೆಯಾದ ಮಹಾದೇವ ಬಿಳಿಕುರಿ ಮಾತನಾಡಿ, ನಾನು  ಲಕ್ಷ್ಮಣ ಸವದಿಯವರ  ಕಟ್ಟಾ ಅಭಿಮಾನಿ, ಈ ಚುನಾವಣೆಗೆ ನನ್ನನ್ನು ಅಭ್ಯರ್ಥಿಯಾಗಿ ನಿಲ್ಲಿಸಿ ನನಗೆ ಅದ್ಭುತ ಪೂರ್ವವಾಗಿ ಗೆಲುವು ತಂದುಕೊಟ್ಟ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಪರ​‍್ಪ ಸವದಿ, ಚಿದಾನಂದ ಸವದಿ,ಮತ್ತು ಎಲ್ಲಾ ನಿರ್ದೇಶಕ ಮಂಡಳಿ ಹಾಗೂ ಮುಖಂಡರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಲಕ್ಷ್ಮಣ ಸವದಿಯವರ ನನಗೆ ಗೆಲುವು ನೀಡಿ ನಿರ್ದೇಶಕನನ್ನಾಗಿ ಮಾಡಿದ್ದಾರೆ, ಅವರ ಹೆಸರಿಗೆ ಚುತೆ ಬರದ ಹಾಗೆ ಕಾರ್ಯನಿರ್ವಹಿಸಿ ಇನ್ನಷ್ಟು ಹಾಲಿನ ಪ್ರಮಾಣವನ್ನು ಹೆಚ್ಚಿಸಿ ರೈತಾಪಿ ವರ್ಗದ ಜನರಿಗೆ ಅನುಕೂಲವಾಗುವ ದೃಷ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದರು. 

ಈ ಸಂದರ್ಭದಲ್ಲಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ  ಪರ​‍್ಪ ಸವದಿ, ಗ್ರಾಮ ಅದ್ಯಕ್ಷ ಶ್ರೀಕಾಂತ ದರೂರ, ಸುರೇಶ ಮಾಯನ್ನವರ, ಶಾಂತಿನಾಥ ನಂದೇಶ್ವರ, ಶಿವು ಗುಡ್ಡಾಪೂರ, ಶ್ರೀಶೈಲ ನಾಯಿಕ, ಚಿದಾನಂದ ಮುಕಣಿ, ಪ್ರಶಾಂತ ಅಕ್ಕೋಳ, ಮಲ್ಲೇಶ ಸವದಿ, ಮಲ್ಲಪ್ಪ ದರೂರ, ಅನೀಲ ಬೋಸಲೆ, ಮುಖಂಡರು ಕಾರ್ಯಕರ್ತರು ಅನೇಕರು ಉಪಸ್ಥಿತರಿದ್ದರು.