ಜ್ಯೋತಿರ್ಲಿಂಗ ವಿವಿಧ ಉದ್ದೇಶಗಳ ಸಹಕಾರಿ ಸಂಘ ಲಾಭದತ್ತ

ಮೂಡಲಗಿ 27: ಕಡಿಮೆ ಅವಧಿಯಲ್ಲಿ ಜ್ಯೋತಿರ್ಲಿಂಗ ವಿವಿಧ ಉದ್ದೇಶಗಳ ಸಹಕಾರಿ ಸಂಘವು 2023-24ನೇ ಸಾಲಿನ ಹಣಕಾಸು ವರ್ಷದ ಅಂತ್ಯಕ್ಕೆ 50.25 ಲಕ್ಷ ಲಾಭ ಗಳಿಸಿ ಪ್ರಗತಿಯ ಪಥದಲ್ಲಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಲಕ್ಷ್ಮಣ ಭೀ.ಮಾಲಗಾರ ತಿಳಿಸಿದರು. 

ಅವರು ಶುಕ್ರವಾರದಂದು ಪಟ್ಟಣದ ಜ್ಯೋತಿರ್ಲಿಂಗ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಸಭಾ ಭವನದಲ್ಲಿ ಸಂಘದ ಪ್ರಗತಿಯ ಕುರಿತು ಕರೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘವು ಅಲ್ಪಾವಧಿಯಲ್ಲಿ 25.93 ಲಕ್ಷ ರೂ ಶೇರು ಬಂಡವಾಳ ಹೊಂದಿ, 1.34 ಕೋಟಿ ರೂ ಕಾಯ್ದಿಟ್ಟ ನಿಧಿಗಳು, 11.53 ಕೋಟಿ  ಠೇವು ಸಂಗ್ರಹಿಸಿ, ಠೇವುದಾರ ಭದ್ರತೆಗಾಗಿ  3.84 ಕೋಟಿ ರೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ  ಗುಂತಾವಣಿಗಳನ್ನು ಮಾಡಿ  ಸಂಘದ ಗ್ರಾಹಕರಿಗೆ ವಿವಿಧ ತೆರನಾದ 8.75 ಕೋಟಿ ರೂ ಸಾಲ ವಿತರಣೆ, ಒಟ್ಟು  13.88 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿ 50.25 ಲಕ್ಷ ರೂ ಲಾಭ ಗಳಿಸಿದೆ ಎಂದರು.  

ಸಂಘದ ಉಪಾಧ್ಯಕ್ಷ ಮಲ್ಲಪ್ಪಾ ಮುತಾರಿ, ನಿರ್ದೇಶಕರಾದ  ಈರಾ​‍್ಪ  ಬನ್ನೂರ, ಪರಮಾನಂದ  ಬಡ್ಡಿ, ನಿಂಗಪ್ಪಾ ಈರ​‍್ಪನವರ,  ಭೀಮಪ್ಪಾ ಅವರಾದಿ,  ಪ್ರಕಾಶ ಈರ​‍್ಪನವರ, ಮಲ್ಲಪ್ಪಾ  ಮಾಲಗಾರ, ಈರ​‍್ಪ ಬಾಗಿ, ಬಸವ್ವಾ ಮಾಲಗಾರ,  ಲಕ್ಷ್ಮೀ ಕೊತಂಬರಿ,  ಅನಿತಾ ಪೋಳ ಹಾಗೂ ಸಂಘದ ಮಾರ್ಗದರ್ಶಕರಾದ ಚನ್ನಬಸು ಬಡ್ಡಿ, ಶಂಕರ  ಕೊತಂಬರಿ, ಬಸವರಾಜ ಮಾಲಗಾರ, ಪ್ರಧಾನ ಕಾರ್ಯದರ್ಶಿ ವಿಠ್ಠಲ ಕಮತೆ ಮತ್ತು ಸಂಘದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.