ಯರಗಟ್ಟಿ ಸಂಚಾರಿ ನ್ಯಾಯಾಲಯವನ್ನು ನ್ಯಾ. ಮಂಜುನಾಥ ನಾಯಕ ಅವರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ

ಯರಗಟ್ಟಿ ಸಂಚಾರಿ ನ್ಯಾಯಾಲಯವನ್ನು ನ್ಯಾ. ಮಂಜುನಾಥ ನಾಯಕ ಅವರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ Justice Manjunatha Nayak inaugurated the Yaragati Traffic Court by cutting the ribbon

ಲೋಕದರ್ಶನ ವರದಿ 

 ಯರಗಟ್ಟಿ 15 :  ಪಟ್ಟಣದ ಸಂಚಾರಿ ನ್ಯಾಯಾಲಯವನ್ನು ಖಾಯಂ ನ್ಯಾಯಾಲಯ ಸ್ಥಾಪನೆಗೆ ಆದೇಶ ಹಿನ್ನೆಲೆಯಲ್ಲಿ ಸೋಮವಾರ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶ ಮಂಜುನಾಥ ನಾಯಕ ಅವರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ತಾಲೂಕಿನ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ಉಚ್ಚ ನ್ಯಾಯಾಲಯವು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರಿ ನ್ಯಾಯಾಲಯ (ಸರ್ಕ್ಯೂಟ್ ಕೋರ್ಟ್‌) ವ್ಯವಸ್ಥೆಯನ್ನು ಸ್ಥಗಿತಗೊಳಿಸಿ, ಖಾಯಂ ನ್ಯಾಯಾಲಯ ಸ್ಥಾಪನೆಗೆ ಆದೇಶ ಹೊರಡಿಸಿದೆ ಎಂದು ಹೇಳಿದರು. 

ಆದೇಶದ ಅನ್ವಯ, ಇನ್ಮುಂದೆ ಯರಗಟ್ಟಿಯಲ್ಲಿ ಕಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಹಾಗೂ ನ್ಯಾಯಾಂಗ ದಂಡಾಧಿಕಾರಿ ಪ್ರಥಮ ದರ್ಜೆ (ಜೆಎಂಎಫ್) ನ್ಯಾಯಾಲಯಗಳ ದೈನಂದಿನ ನಿಯಮಿತ ಕಲಾಪಗಳು ನಡೆಯಲಿವೆ ಎಂದು  ತಿಳಿಸಿವೆ. ಇದರೊಂದಿಗೆ ತಾಲೂಕಿನ ಜನತೆಗೆ ನ್ಯಾಯಾಂಗ ಸೇವೆಗಳು ಸ್ಥಳೀಯ ಮಟ್ಟದಲ್ಲೇ ನಿರಂತರವಾಗಿ ಲಭ್ಯವಾಗಲಿದ್ದು, ನ್ಯಾಯ ಸಿಗುವುದು ಇನ್ನಷ್ಟು ಸುಗಮವಾಗಲಿದೆ. ಯರಗಟ್ಟಿ ನ್ಯಾಯಾಂಗ ಇತಿಹಾಸದಲ್ಲಿ ಇದು ಮಹತ್ವದ ಮೈಲುಗಲ್ಲು. ಸಂಚಾರಿ ನ್ಯಾಯಾಲಯದ ಅನಿಶ್ಚಿತತೆಗೆ ಅಂತ್ಯವಾಗಿದ್ದು, ಖಾಯಂ ನ್ಯಾಯಾಲಯದ ಸ್ಥಾಪನೆಯಿಂದ ನ್ಯಾಯ ವಿತರಣಾ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್‌. ಆರ್‌. ರೆಬ್ಬನ್ನವರ ಹೇಳಿದರು.