ಸಮಾಜದ ಹಿತ ಕಾಪಾಡುವ ಹೊಣೆ ಪತ್ರಕರ್ತರ ಮೇಲಿದೆ - ತಹಶೀಲ್ದಾರ್ ಎಂ.ವಿ. ಗುಂಡಪ್ಪಗೌಳ

ಸಮಾಜದ ಹಿತ ಕಾಪಾಡುವ ಹೊಣೆ ಪತ್ರಕರ್ತರ ಮೇಲಿದೆ - ತಹಶೀಲ್ದಾರ್ ಎಂ.ವಿ. ಗುಂಡಪ್ಪಗೌಳ Journalists bear the responsibility of safeguarding the interests of society – Tahsildar M.V. Gundap

ಲೋಕದರ್ಶನ ವರದಿ 

  ಯರಗಟ್ಟಿ 2: ಪತ್ರಕರ್ತರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಸಮಾಜದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತಹಶೀಲ್ದಾರ್ ಎಂ.ವಿ. ಗುಂಡಪ್ಪಗೌಳ ಹೇಳಿದರು.  ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ಕಣ್ಣು ಮತ್ತು ಕಿವಿಯಾಗಿದ್ದು, ಸತ್ಯವನ್ನು ನಿರ್ಭೀತಿಯಿಂದ ಜನರ ಮುಂದಿಡುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಸುದ್ದಿಗಳ ಪ್ರಸಾರದಲ್ಲಿ ಸತ್ಯ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಹೊಣೆಗಾರಿಕೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು. ಚುನಾವಣಾ ಇಲಾಖೆ ಶಿರಸ್ತೇದಾರ ಎಸ್‌.ಬಿ. ಕುಲಕರ್ಣಿ ಮಾತನಾಡಿ, ಪತ್ರಕರ್ತರು ರಾಜಕೀಯ, ಆರ್ಥಿಕ ಅಥವಾ ವೈಯಕ್ತಿಕ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತವಾಗಿ ವರದಿ ಮಾಡಿದಾಗ ಮಾತ್ರ ಸಮಾಜದಲ್ಲಿ ಮಾಧ್ಯಮಗಳ ಮೇಲಿನ ವಿಶ್ವಾಸ ಉಳಿಯುತ್ತದೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ.ವಿ. ಗುಂಡಪ್ಪಗೌಳ, ವೈದ್ಯರಾದ ಡಾ. ಸಚಿನ್ ಉಪ್ಪಿನ, ಡಾ. ವಿಜಯ ಬೆಣಕಟ್ಟಿ ಹಾಗೂ ಪತ್ರಕರ್ತರಾದ ಶಿವಾನಂದ ಬಳಿಗಾರ, ಕೆ.ಎಫ್‌. ನದಾಫ್, ಈರಣ್ಣ ಹೂಲೂರ, ರವಿಕುಮಾರ ಅಣ್ಣಿಗೇರಿ, ಫಿರೋಜ್ ಖಾದ್ರಿ, ಶಶಿಧರ ಪಾಟೀಲ, ಬಸವರಾಜ ದಳವಾಯಿ, ಮಹಾಂತೇಶ ಗಿಲಾಕಿ, ಜಗದೀಶ ಕೌಜಲಗಿ, ಮಲ್ಲೇಶ ದಳವಾಯಿ ಹಾಗೂ ಪ್ರದೀಪ್ ಮಠಪತಿ ಅವರನ್ನು ಸನ್ಮಾನಿಸಲಾಯಿತು.  ಗ್ರಾಮ ಆಡಳಿತಾಧಿಕಾರಿಗಳಾದ ಎಲ್‌.ಬಿ. ದಳವಾಯಿ, ಯಲ್ಲಪ್ಪ ಬಾಗಿ, ಕೆ.ಎಂ. ಗಡಕರಿ, ಸ್ವರೂಪ ಹಪ್ಪಳಿ, ಲಖನ್ ಪೂಜೇರಿ, ವಿಜಯ ಉಪ್ಪಿನ, ರಾಜು ಜೀವಾಪೂರ, ಮಂಜು ಬಡಿಗೇರ, ರವಿ ತಳವಾರ, ಎಲ್‌.ಸಿ. ತಳವಾರ ಸೇರಿದಂತೆ ಸಿಬ್ಬಂದಿ ಹಾಗೂ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.