ಬಜೆಟ್‍ನಲ್ಲಿ ಪತ್ರಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ: ಅಡಿಹುಡಿ

ಮೂಡಲಗಿ ಪ್ರೆಸ್‍ಕ್ಲಬ್ ಕಚೇರಿಯಲ್ಲಿ ಜರುಗಿದ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ ಪತ್ರಕರ್ತರಿಗೆ ಅನ್ಯಾಯವಾಗಿರುವ ಕುರ

ಮೂಡಲಗಿ 10: ಮುಖ್ಯಮಂತ್ರಿ ಯಡಿಯೂರಪ್ಪನವರು ಸೋಮವಾರ ಮಂಡಿಸಿದ ಬಜೆಟ್‍ನಲ್ಲಿ ಪತ್ರಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಪ್ರೆಸ್‍ಕ್ಲಬ್ ಅಧ್ಯಕ್ಷ ಎಲ್ ವಾಯ್ ಅಡಿಹುಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರದಂದು ಪ್ರೆಸ್‍ಕ್ಲಬ್ ಕಚೇರಿಯಲ್ಲಿ ಜರುಗಿದ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ ಪತ್ರಕರ್ತರಿಗೆ ಅನ್ಯಾಯವಾಗಿರುವ ಕುರಿತು ಮಾತನಾಡಿದರು.

ಈ ಹಿಂದೆ ಮಂಡಿಸಿದ ಬಜೆಟ್‍ಗಳಲ್ಲಿ ಪತ್ರಕರ್ತರನ್ನು ಗಮನದಲ್ಲಿಟ್ಟುಕೊಂಡು ಅನುದಾನ ಹಾಗೂ ವಿವಿಧ ಯೋಜನೆಗಳನ್ನು ಸರಕಾರದಿಂದ ನೀಡಲಾಗುತ್ತಿತ್ತು. ಆದರೆ ಈಗ ಮಂಡಿಸಿದ ಬಜೆಟ್‍ನಲ್ಲಿ ಪತ್ರಕರ್ತರಿಗೆ ಯಾವುದೇ ಅನುದಾನ ಹಾಗೂ ವಿಶೇಷ ಸೌಲಭ್ಯ ನೀಡದಿರುವುದು ವಿಷಾದನೀಯವಾಗಿದೆ. ಪ್ರವಾಹ ಸಂದರ್ಭ, ಕೊರೋನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿದಾಗ ಅಷ್ಟೇ ಅಲ್ಲದೇ ಪ್ರತಿ ನಿತ್ಯ ಜರುಗುವ ಘಟನಾವಳಿಗಳನ್ನು ಸುದ್ದಿ ಹಾಗೂ ಸಮೂಹ ಮಾಧ್ಯಮಗಳ ಮೂಲಕ ಜನತೆ ತಲುಪಿಸುವ ಕಾರ್ಯ ಮಾಡಿದ್ದಾರೆ. ಕೊರೋನಾ ರಣಕೇಕೆಗೆ ಸಿಲುಕಿ ಪತ್ರಿಕೆಗಳು ಶೇ 50% ರಷ್ಟು ಕಡಿಮೆಯಾಗಿದ್ದು ಪತ್ರಿಕೆ ನಡೆಸುವದು ಕಷ್ಟಕರವಾಗಿದೆ ಎಂದರು.

 ಪ್ರಮುಖವಾಗಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ, ಕುಟುಂಭ ಜೀವ ವಿಮೆ, ವಸತಿ, ಮಕ್ಕಳ ಶಿಕ್ಷಣ ಸೌಲಭ್ಯ, ಪತ್ರಕರ್ತರ ಭವನ, ಕೊರೋನಾ ವಾರಿಯರ್ಸ್ ಎಂದು ಕೊಡಲೇ ಸರಕಾರ ಕ್ರಮ ಕೈಗೊಳ್ಳಬೇಕು. ವಿಶೇಷ ಅನುದಾನದಲ್ಲಿ ಪತ್ರಕರ್ತರಿಗೆ ದೊರಕಬೇಕಾದ ಸೌಲಭ್ಯಗಳನ್ನು ರಾಜ್ಯ ಸರಕಾರ ಒದಗಿಸಿಕೊಡಬೇಕು. ಕೊಡಲೇ ಎಚ್ಚೆತ್ತುಕೊಂಡು ಪರಿಹಾರ ದೊರಕಿಸಿ ಕೊಡದಿದ್ದಲ್ಲಿ ರಾಜ್ಯಾದ್ಯಂತ ಪತ್ರಕರ್ತರು ಹೋರಾಟ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದ್ದಾರೆ.

ಪತ್ರಕರ್ತರಾದ ಚಂದ್ರಶೇಖರ ಪತ್ತಾರ, ಮಲ್ಲು ಬೊಳನವರ ಮಾತನಾಡಿ, ಪ್ರತಿ ಬಾರಿಯ ಬಜೆಟ್‍ಗಳಲ್ಲಿ ಪತ್ರಕರ್ತರಿಗೆ ವಿಶೇಷ ಯೋಜನೆಗಳನ್ನು ಮಂಡಿಸುತ್ತಾ ಬಂದಿರುತ್ತಾರೆ. ಪ್ರಸಕ್ತ ಬಜೆಟ್‍ನಲ್ಲಿ ಯಾವುದೇ ರೀತಿಯಾಗಿ ಪತ್ರಕರ್ತರಿಗೆ ಪ್ರಯೋಜನಕ್ಕೆ ಬಾರದಿರುವದು ಖಂಡನಾರ್ಯವಾಗಿದೆ. ಈ ಕೊಡಲೇ ರಾಜ್ಯ ಸರಕಾರ ಪತ್ರಕರ್ತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ತ್ರಕರ್ತ ಕೃಷ್ಣಾ ಗಿರೆಣ್ಣವರ, ಅಲ್ತಾಪ್ ಹವಾಲ್ದಾರ, ಸುಭಾಸ ಗೊಡ್ಯಾಗೋಳ, ಎಸ್.ಎಮ್ ಚಂದ್ರಶೇಖರ, ಕೆಂಚಪ್ಪ ಮೀಶಿ, ಶಿವಾನಂದ ಹಿರೇಮಠ, ಭೀಮಶಿ ತಳವಾರ, ಹನಮಂತ ಕಂಕಣವಾಡಿ, ಯಾಕೂಬ ಸಣ್ಣಕ್ಕಿ, ಸಚಿನ ಪತ್ತಾರ ಮತ್ತಿತರರು ಉಪಸ್ಥಿತರಿದ್ದರು.