ಧೃತಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಭಿವೃದ್ಧಿಗೆ ಕೈಜೋಡಿಸಿ : ಐ.ವಿಜಯ
Join hands for the development of Dhruthi Pattina Souharda Sahakari Sangha: I. Vijaya
ಲೋಕದರ್ಶನ ವರದಿ
ಧೃತಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಭಿವೃದ್ಧಿಗೆ ಕೈಜೋಡಿಸಿ : ಐ.ವಿಜಯ
ಕಂಪ್ಲಿ 11: ಪಟ್ಟಣದ ಗ್ರಾಮ ದೇವತೆ ಶ್ರೀ ಮಾರೆಮ್ಮ ದೇವಸ್ಥಾನದ ಎದುರುಗಡೆ ಮೇಲ್ಮಹಡಿಯಲ್ಲಿರುವ ಧೃತಿ ಪತ್ತಿನ ಸೌಹಾರ್ದ ಸಹಕಾರಿ ಸಂಘ(ಬ್ಯಾಂಕ್)ದ ಕಛೇರಿಯಲ್ಲಿ 6ನೇ ವಾರ್ಷಿಕ ಸಾಮಾನ್ಯ ಸಭೆಯ ನಡೆಯಿತು. ಸಂಘದ ಅಧ್ಯಕ್ಷ ಐ.ವಿಜಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘವು ಕಳೆದ ಆರು ವರ್ಷಗಳಿಂದ ಗ್ರಹಕರಿಗೆ ತಕ್ಕಂತೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ವಹಿವಾಟಿನ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಖುಷಿ ವಿಚಾರವಾಗಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಬ್ಯಾಂಕಿನಲ್ಲಿ ವ್ಯವಹಾರ ಮಾಡುವ ಮೂಲಕ ಅಭಿವೃದ್ಧಿಗೆ ಕೈಜೋಡಿಸುವ ಜೊತೆಗೆ ಬ್ಯಾಂಕ್ ಸೌಲಭ್ಯಗಳನ್ನು ಪಡೆದು, ಆರ್ಥಿಕವಾಗಿ ಸಬಲರಾಗಬೇಕು ಎಂದರು. ನಂತರ ಮುಖ್ಯ ಕಾರ್ಯನಿರ್ವಾಹಕ ಐ.ಚಂದ್ರಶೇಖರರೆಡ್ಡಿ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘದಲ್ಲಿ 1373 ಜನ ಸದಸ್ಯರನ್ನು ಒಳಗೊಂಡಿದ್ದು, ಇದರಲ್ಲಿ ಸುಮಾರು 14 ಲಕ್ಷ 35 ಸಾವಿರ 400 ರೂ.ಗಳ ಷೇರು ಬಂಡವಾಳ ಹೊಂದಿದೆ. ಸುಮಾರು 2 ಕೋಟಿ 24 ಲಕ್ಷ ಠೇವಣಿ ಸಂಗ್ರಹವಿದೆ. ಸುಮಾರು 4 ಲಕ್ಷ 7 ಸಾವಿರ 838 ರೂ.ಗಳ ನಿವ್ವಳ ಲಾಭಗಳಿಸಿದೆ. ಶೇರು ಸದಸ್ಯರಿಗೆ ಶೇ.6ರಷ್ಟು ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಿ.ಉಮೇಶ, ವ್ಯವಸ್ಥಾಪಕ ವಿಶ್ವನಾಥ, ನಿರ್ದೇಶಕರಾದ ರಾಜಶೇಖರ, ಐ.ಶರಣಗೌಡ, ಜೆ.ವೀರೇಶಗೌಡ, ವಿ.ಪುಷ್ಪಾವತಿ, ಬಿ.ಬಸವರಾಜ, ಉಮಾಕಾಂತ್, ಶ್ರೀಶೈಲ, ವ್ಯವಸ್ಥಾಪಕ ವಿಶ್ವನಾಥ, ಸಿಬ್ಬಂದಿ ಐಶ್ವರ್ಯ ಸೇರಿದಂತೆ ಮುಖಂಡರು, ಗ್ರಾಹಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 