ಜವಹರ್‌ಲಾಲ್ ಅವರ ಕೊಡುಗೆ ಅಪಾರ : ಶಾಲಾ ಸಂಸತ್‌ನ ಸಿಎಂ ರಂಜಿತ
Jawaharlal's contribution is immense: CM Ranjith of the School Parliament
ಕಂಪ್ಲಿ 14: ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲೆಯಲ್ಲಿ ಮಾಜಿ ಪ್ರಧಾನಮಂತ್ರಿ ಜವಹರ್‌ಲಾಲ್ ನೆಹರು ಜನ್ಮದಿನದ ಪ್ರಯುಕ್ತದ ಮಕ್ಕಳ ದಿನಾಚರಣೆ ಅಂಗವಾಗಿ ಪೋಷಕರ ಮತ್ತು ಶಿಕ್ಷಕರ ಮಹಾಸಭೆ ಶುಕ್ರವಾರ ನಡೆಯಿತು. ಮಕ್ಕಳ ಸಭೆಯ ಉದ್ಘಾಟಿಸಿ ಶಾಲಾ ಸಂಸತ್‌ನ ಮುಖ್ಯಮಂತ್ರಿ ವಿದ್ಯಾರ್ಥಿನಿ ರಂಜಿತ ಮಾತನಾಡಿ, ನಾಡಿನಲ್ಲಿ ಜವಹರ್‌ಲಾಲ್ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಮಕ್ಕಳ ಶಿಕ್ಷಣವನ್ನು ನೀಡಿದ ಮೊದಲ ಶಿಕ್ಷಕ ಎಂಬ ಹೆಗ್ಗಳಿಗೆ ಜವಹರ್‌ಲಾಲ್ ನೆಹರು ಅವರದ್ದಾಗಿದೆ. ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂಬಂತೆ ನಾವು ಶಿಕ್ಷಕರು ನೀಡುವ ಪಾಠ, ಪ್ರವಚನ ಸೇರಿದಂತೆ ಪ್ರತಿಯೊಂದು ಜೀವನ ಮೌಲ್ಯದ ವಿಷಯಗಳನ್ನು ಆಲಿಸಿ, ಉತ್ತಮ ಪ್ರಜೆಗಳಾಗಿ ಹೊರಹೊಮ್ಮುವುದು ನಮ್ಮ ಕರ್ತವ್ಯವಾಗಿದೆ.
ಕಲಿಕಾ ಹಂತದಲ್ಲಿ ಒಳ್ಳೆಯ ಶಿಕ್ಷಣ ಪಡೆದು, ಪೋಷಕರ ಆಸೆ, ಆಕಾಂಸೆಯಂತೆ ದೊಡ್ಡ ದೊಡ್ಡ ಹುದ್ದೆಗಳೊಂದಿಗೆ ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ ಎಂದರು. 1ರಿಂದ 9ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡೆಗಳಲ್ಲಿ ವಿಜಯಶಾಲಿಯಾದ ವಿದ್ಯಾರ್ಥಿಗಳಿಗೆ ಪೆನ್ನು, ಪೆನ್ಸಿಲ್ ಸೇರಿದಂತೆ ಬಹುಮಾನಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಹುಲುಗಪ್ಪ, ಉಪಾಧ್ಯಕ್ಷೆ ಅಂಬಿಕಾ ಬಸವರಾಜ, ಮುಖ್ಯಗುರುಗಳಾದ ವಿ.ಆರ್.ಮೂರ್ತಿ, ನಿರ್ಮಲಾ, ಸಹ ಶಿಕ್ಷಕರಾದ ಚಂದ್ರ್ಪ ಕಂಬಳಿ, ರೇಖಾ, ಮಡಿವಾಳಪ್ಪ, ಅನುಸೂಯ, ಶಿಲ್ಪ, ರಾಜೇಶ್ವರಿ, ಕಾವ್ಯ, ಶಿಕ್ಷಣ ಪ್ರೇಮಿ ಹಂಪಾರೆಡ್ಡಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 