ಜಪಾನ್; ಹಡಗಿನಲ್ಲಿ ಆಗಮಿಸಿದ 10 ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಪತ್ತೆ

ಟೋಕಿಯೋ, ಫೆ 6  ಜಪಾನ್ ನ ಬಂದರಿಗೆ ಆಗಮಿಸಿದ ಹಡಗಿನಲ್ಲಿದ್ದ 10 ಜನರನ್ನು  ಕೊರೋನಾ ವೈರಾಣು ಸೋಂಕಿನ ತಪಾಸಣೆಗಾಗಿ ಪ್ರತ್ಯೇಕವಾಗಿರಿಸಲಾಗಿದೆ ಎಂದು ಜಪಾನ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಸೋಮವಾರ ಯೊಕೊಹಾಮ ಬಂದರಿಗೆ ಆಗಮಿಸಿದ ಡೈಮಂಡ್ ಪ್ರಿನ್ಸೆಸ್  ಹಡಗಿನ ಓರ್ವ ಪ್ರಯಾಣಿಕನಲ್ಲಿ ಸೋಂಕು ದೃಢಪಟ್ಟಿತ್ತು. ಆದ್ದರಿಂದ ಉಳಿದವರನ್ನು ಕೂಡ ತಪಾಸಣೆಗೊಳಪಡಿಸಲಾಗಿತ್ತು. ಅವರಲ್ಲಿ ಎಲ್ಲಾ 10 ಜನರಲ್ಲೂ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಕಟ್ಸುನೋಬು ಕಾಟು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.