ಜು,27 ರಂದು ಜಮಖಂಡಿ ಅರ್ಬನ್ ಬ್ಯಾಂಕನ 14ನೇ ನೂತನ ಶಾಖೆ ಉದ್ಘಾಟನೆ
Jamkhandi Urban Bank's 14th new branch inaugurated on July 27th
ಜಮಖಂಡಿ 26: ಬಾಗಲಕೋಟ ಜಿಲ್ಲೆಯಲ್ಲಿ ನೂತನವಾಗಿ ದಿ, ಜಮಖಂಡಿ ಅರ್ಬನ್ ಬ್ಯಾಂಕನ 14ನೇ ಶಾಖೆಯನ್ನು ಜು,27 ರಂದು ಬೆಳಿಗ್ಗೆ 10 ಗಂಟೆಗೆ ಐ.ವಿ.ಎಸ್. ಕಾಂಪ್ಲೆಕ್ಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹತ್ತಿರ, ವಿದ್ಯಾಗಿರಿಯಲ್ಲಿ ಉದ್ಘಾಟನೆಗೊಳ್ಳಲಿದೆಂದು ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ ತಿಳಿಸಿದರು.
ನಗರದ ಅರ್ಬನ್ ಬ್ಯಾಂಕ್ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರೇಳು ತಿಂಗಳಿನಿಂದ 5 ಶಾಖೆಗಳನ್ನು ಉದ್ಘಾಟನೆಯನ್ನು ಮಾಡುತ್ತಾ ಬಂದಿದ್ದೇವೆ, ಬ್ಯಾಂಕಿಗೆ ಪ್ರತಿ ತಿಂಗಳು 10 ರಿಂದ 15 ಕೋಟಿ ಅಷ್ಟು ಠೇವಣಿ ಬರುತ್ತಿದೆ ಮತ್ತು ಬ್ಯಾಂಕಿನ ಗ್ರಾಹಕರಿಗೆ 48 ಕೋಟಿ ಸಾಲವನ್ನು ನೀಡುವಷ್ಟು ಹಣವನ್ನು ನಾವು ಹೂಡಿಕೆ ಮಾಡಿದ್ದೇವೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಮ.ನಿ.ಪ್ರ.ಪ್ರ.ಶ್ರೀ ಪ್ರಭುಸ್ವಾಮಿಜೀ ಚರಂತಿಮಠ ವಹಿಸಿವರು, ಬಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಉದ್ಘಾಟನೆ ಮಾಡುವರು, ಅಧ್ಯಕ್ಷತೆ ದಿ, ಜಮಖಂಡಿ ಅರ್ಬನ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ ವಹಿಸಿವರು, ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಪಿ.ಸಿ ಗದ್ದಿಗೌಡರ, ಶಾಸಕ ಎಚ್.ವಾಯ್.ಮೇಟಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಸಚಿವ ಎಸ್. ಆರ್.ಪಾಟೀಲ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಎಸ್. ಜಿ. ನಂಜಯ್ಯನಮಠ, ಬಸವೇಶ್ವರ ಸಹಕಾರಿ ಬ್ಯಾಂಕ್ ನಿಯಮಿತ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಸವಪ್ರಭು ಸರನಾಡಗೌಡ, ಹೊನ್ಯಾಳ ದೇಸಾಯಿ, ನಗರಸಭೆ ಅಧ್ಯಕ್ಷ ಸವಿತಾ ಅಣ್ಣಪ್ಪ ಲೆಂಕೆನ್ನವರ, ಗಣ್ಯ ವ್ಯಾಪಾರಸ್ಥ ಕುಮಾರ ಎಳ್ಳಿಗುತ್ತಿ, ಭಾಗವಹಿಸವರು ಎಂದರು.
ಇದೇ ಸಂದರ್ಭದಲ್ಲಿ ಜಿ.ಎಸ್, ನ್ಯಾಮಗೌಡ ಮಾತನಾಡಿದರು, ಪಕೀರಸಾಬ ಬಾಗವಾನ, ವಿರುಪಾಕ್ಷಯ್ಯ ಕಂಬಿ, ಕಾಡು ಮಾಳಿ,ಅಪಾಸಾಬ ಮನಗೂಳಿ, ಅಪಾಸಾಭ ಶಿಂಧೆ, ಧರೇಪ್ಪ ತೇಲಿ, ಬಸವರಾಜ ಕಲೂತಿ, ಬಸವರಾಜ ಮಠಪತಿ, ಕಿರಣ್ ಪಿಸಾಳ, ಪ್ರಭು ಜನವಾಡ, ನಂದೇಪ್ಪ ತಳವಾರ, ವೈಶಾಲಿ ಗೊಂದಿ, ಶೋಭಾ ಅರಕೇರಿ ಹಾಗೂ ಸಿಬಂದಿಗಳು ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 