ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಜೈ ಶ್ರೀರಾಮ್ ಹಾಡು: ಗಲಾಟೆ ಮಾಡಿದ: ಮುಸ್ಲಿಂ ವಿದ್ಯಾರ್ಥಿಗಳು: ಬ್ಬ ಹಿಂದೂ ವಿದ್ಯಾರ್ಥಿಗೆ ಥಳಿತ

ಮೈಸೂರು 09: ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭಕ್ಕೆ ಗಾಯಕ ಶ್ರೀಹರ್ಷ ಅವರನ್ನು ಕರೆಸಲಾಗಿತ್ತು. ವೇದಿಕೆ ಮೇಲೆ ಶ್ರೀ ಹರ್ಷ ಜಯತು ಜಯತು ಜೈ ಶ್ರೀರಾಮ್ ಎಂದು ಹಾಡಿದರು. ಈ ವೇಳೆ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ ಮುಸ್ಲಿಂ ವಿದ್ಯಾರ್ಥಿಗಳು ಗಲಾಟೆ ಮಾಡಿದ್ದಾರೆ.

ಕಾರ್ಯಕ್ರಮವನ್ನು ಹಾಳುಗೆಡವಿದ್ದಲ್ಲದೆ ಒಬ್ಬ ಹಿಂದೂ ವಿದ್ಯಾರ್ಥಿಗೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಗಲಾಟೆ ಶುರುವಾಗುತ್ತಿದಂತೆ ಪೊಲೀಸರು ಸ್ಟೇಡಿಯಂಗೆ ಬಂದು ವಿದ್ಯಾರ್ಥಿಗಳನ್ನು ಅಲ್ಲಿಂದ ಕಳುಹಿಸಿದ್ದಾರೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ನಾವು ಕರ್ನಾಟಕದಲ್ಲಿದ್ದೇವಾ ಅಥವಾ ಪಾಕಿಸ್ತಾನದಲ್ಲಿ ಇದ್ದೇವಾ. ಇವರ ಹಾವಳಿ ಜಾಸ್ತಿಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.