ಬಾಲಮಂದಿರಗಳಿಗೆ ಭೇಟಿ ನೀಡಿ ಪರೀಶೀಲಿಸಿದ ಜಗನ್ನಾಥ ಹಲಮಡಗಿ
Jagannatha Halamadagi visited and inspected children's homes
ಲೋಕದರ್ಶನ ವರದಿ
ಧಾರವಾಡ 06: ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಅವರು ಅಗಸ್ಟ್ 06. 2026 ರಂದು ಮಹಿಳೆಯರ ಅನುಪಾಲನಾ ಗೃಹ, ಬಾಲಕರ ಸರಕಾರಿ ಬಾಲಮಂದಿರ ಹಾಗೂ ಉಣಕಲ್ ಮನೋವಿಕಲ ಸರ್ಕಾರಿ ಬಾಲಮಂದಿರ ಹುಬ್ಬಳ್ಳಿಗೆ ಭೇಟಿ ನೀಡಿ ಸಂಸ್ಥೆಯ ಮಕ್ಕಳು, ಸಂಸ್ಥೆಯ ಅಧೀಕ್ಷಕರುಗಳು ಹಾಗೂ ಪರೀವೀಕ್ಷಣಾಧಿಕಾರಿಗಳನ್ನು ಭೇಟಿ ನೀಡಿ ಸಂಸ್ಥೆಯ ಎಲ್ಲ ವ್ಯವಸ್ಥೆಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಪರೀಶೀಲಿಸಿದರು.
ಬಾಲಕರ ಬಾಲಮಂದಿರದ ಮಕ್ಕಳ ಸಂಸ್ಥೆಯಲ್ಲಿ ಮಕ್ಕಳ ಹಾಜರಾತಿಯನ್ನು ಪರೀಶೀಲಿಸಿದರು. ಎಲ್ಲ ಅಧಿಕಾರಿಗಳೊಂದಿಗೆ ಸಂಸ್ಥೆಯ ಕಟ್ಟಡವನ್ನು, ಮಕ್ಕಳ ಊಟದ ಕೊಠಡಿ ಸ್ವಚ್ಛತೆಯನ್ನು ಪರೀಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳಿಗೆ ನೀಡುವ ಪ್ರತಿದಿನದ ಆಹಾರದ ಬಗ್ಗೆ ವಿಚಾರಿಸಿದರು, ಮಕ್ಕಳ ಪ್ರತಿದಿನದ ಚಟುವಟಿಕೆಯ ಕುರಿತು ಮಕ್ಕಳೊಂದಿಗೆ ಮಾತನಾಡಿದರು.
ಬಾಲಕರ ಬಾಲಮಂದಿರ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ಜಿಟಿಟಿಸಿ ತರಬೇತಿಯಲ್ಲಿ ಭಾಗವಹಿಸುವಂತೆ ತಿಳಿಸಿದರು. ಮಕ್ಕಳ ಚಟುವಟಿಕೆಗಳ ಕೈಪಿಡಿಯನ್ನು ವೀಕ್ಷಿಸಿ, 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಫಲಿತಾಂಶದ ವಿವರ ನೋಡಿ ಹರ್ಷ ವ್ಯಕ್ತಪಡಿಸಿದರು. ಮಕ್ಕಳ ಉಜ್ವಲ್ ಜೀವನ ರೂಪಿಸಲು ಈಗಿನಿಂದಲೇ ಎಲ್ಲ ಸಿಬ್ಬಂದಿಯವರು ಶ್ರಮಿಸಬೇಕೆಂದು ಸೂಚನೆ ನೀಡಿದರು.
ಮನೋವಿಕಲ ಬಾಲಕಿಯರ ಬಾಲಮಂದಿರ ಸಂಸ್ಥೆಯನ್ನು ಭೇಟಿ ನೀಡಿ, ಮಕ್ಕಳು ಮಾಡಿದ ಹೂಗುಚ್ಚವನ್ನು ಸ್ವೀಕರಿಸಿದರು. ಸಂಸ್ಥೆಯ ಸ್ವಚ್ಚತೆ, ಮಕ್ಕಳಿಗೆ ನೀಡುತ್ತಿರುವ ಆಹಾರದ ಪದಾರ್ಥಗಳ ಪಟ್ಟಿ ಹಾಗೂ ಮಕ್ಕಳ ಚಟುವಟಿಕೆಯನ್ನು ಪರೀಶೀಲಿಸಿದರು. ಮಕ್ಕಳು ಪ್ರದರ್ಶಿಸಿದ ನೃತ್ಯವನ್ನು ವೀಕ್ಷಿಸಿ, ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಬ. ಜಾವೂರ ಅವರು ಉಪಸ್ಥಿತರಿದ್ದರು.
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ 