ಜಗದ್ಗುರು ಶ್ರೀ ಸಿದ್ಧಾರೂಢರ ಪುಣ್ಯಾರಾಧನೆ: ಜಲರಥೋತ್ಸವ ಸಂಭ್ರಮ

ಜಗದ್ಗುರು ಶ್ರೀ ಸಿದ್ಧಾರೂಢರ ಪುಣ್ಯಾರಾಧನೆ: ಜಲರಥೋತ್ಸವ ಸಂಭ್ರಮ Jagadguru Sri Siddharudha's Punyaradhana: Celebrations of the Jalarathotsava (Water Chariot Festival

ಲೋಕದರ್ಶನ ವರದಿ 

  ಮಹಾಲಿಂಗಪುರ 30: ಸ್ಥಳೀಯ ಸಿದ್ಧಾರೂಢ ನಗರದಲ್ಲಿರುವ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಜಗದ್ಗುರು ಸಿದ್ಧಾರೂಢರ 97ನೇ ಪುಣ್ಯಾರಾಧನೆ ನಿಮಿತ್ತ 44ನೇ ವರ್ಷದ ಜಲರಥೋತ್ಸವ ಶನಿವಾರ ಸಂಜೆ ಸಂಭ್ರಮದಿಂದ ನಡೆಯಿತು. ಜಲರಥೋತ್ಸವದ ಅಂಗವಾಗಿ ಬೆಳಿಗ್ಗೆ ಸಿದ್ಧಾರೂಢರ ಮೂರ್ತಿಗೆ ಅಭಿಷೇಕ ನೆರವೇರಿಸಲಾಯಿತು. ಬಳಿಕ ವಿವಿಧ ಗ್ರಾಮಗಳ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮಗಳು ಜರುಗಿದವು. ಸಂಜೆ ಅಲಂಕೃತ ರಥದಲ್ಲಿದ್ದ ಶ್ರೀ ಸಿದ್ಧಾರೂಢರ ಮೂರ್ತಿಗೆ ಪೂಜೆ ಸಲ್ಲಿಸಿ ಜಲರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ನಿಂಬೆಹಣ್ಣು, ಉತ್ತತ್ತಿ, ಹೂವು, ಬೆಂಡೆ ಹಾಗೂ ಬೆತ್ತಾಸುಗಳನ್ನು ರಥದ ಮೇಲೆ ಅರ​‍್ಿಸಿ ಜಲರಥೋತ್ಸವವನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸ್ವಾಮೀಜಿಗಳು, ಗಣ್ಯರು, ಸಿದ್ಧಾರೂಢ ಟ್ರಸ್ಟ್‌ ಕಮಿಟಿ ಪದಾಧಿಕಾರಿಗಳು, ಭಕ್ತರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.