ಸಮಾಜದಲ್ಲಿ ಆಟಿಸಂ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ: ಮನೋವೈದ್ಯ ಡಾ. ಚಂದ್ರಶೇಖರ ಹಳಿಂಗಳೆ
It is very important to create awareness about autism in society: Psychiatrist Dr. Chandrashekar Hal
ಲೋಕದರ್ಶನ ವರದಿ
ಕಾಗವಾಡ 18 : ಆಟಿಸಂ ಒಂದು ರೋಗವಲ್ಲ, ಬದಲಾಗಿ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಗೆ ಸಂಬಂಧಿಸಿದ ನರ ಅಭಿವೃದ್ಧಿಯ ಅಸ್ವಸ್ಥತೆಯಾಗಿದೆ. ಸರಿಯಾದ ಮಾರ್ಗದರ್ಶನ, ಚಿಕಿತ್ಸೆ ಮತ್ತು ತರಬೇತಿಯೊಂದಿಗೆ, ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ಆದ್ದರಿಂದ ಪಾಲಕರು ತಿಳುವಳಿಕೆ, ಸ್ವೀಕಾರ ಮತ್ತು ಸಹಕಾರದ ಪಾತ್ರ ವಹಿಸಬೇಕೆಂದು ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ, ಪುನರವಸತಿ ಮತ್ತು ಆಟಿಸಂ ಕೇಂದ್ರದ ಮನೋವೈದ್ಯ ಡಾ. ಚಂದ್ರಶೇಖರ್ ಹಳಿಂಗಳೆ ಪಾಲಕರಿಗೆ ಮನವಿ ಮಾಡಿದ್ದಾರೆ.
ಅವರು, ಇತ್ತಿಚಿಗೆ ಮಿರಜ ಪಟ್ಟಣದ ನಿರ್ಮಲ ಆಟಿಸಂ ಮತ್ತು ಕಲಿಕಾ ಅಂಗವೈಕಲ್ಯ ಶಿಕ್ಷಣ ಕೇಂದ್ರದಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಪಾಲಕರಿಗಾಗಿ ಆಟಿಸ್ಟಿಕ್ ಪ್ರೈಡ್ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ತಪಾಸಣೆ ಮತ್ತು ಮಾರ್ಗದರ್ಶನ ಶಿಬಿರದಲ್ಲಿ ಮಾತನಾಡುತ್ತಿದ್ದರು.
ಆಟಿಸಂ ಕೇಂದ್ರದ ಪ್ರಾಂಶುಪಾಲೆ ಡಾ. ಮಾಧುರಿ ವಾಂಗಪತಿ ಮಾತನಾಡಿ, ಆಟಿಸಂ ಎಂದರೇನು.. ಅದರ ಲಕ್ಷಣಗಳು ಮತ್ತು ಕಾರಣಗಳ ಕುರಿತು ಹಾಗೂ ರೋಗ ನಿರ್ಣಯ ಮತ್ತು ಸಕಾಲಿಕ ಚಿಕಿತ್ಸೆಯಿಂದ, ಮಕ್ಕಳು ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯವಿದೆ ಎಂದು ಪಾಲಕರಿಗೆ ತಿಳಿಸಿದರು.
ಸಿಇಒ ವಿನಾಯಕ್ ಕವಡೆ ನಿರ್ಮಲ್ ಆಸ್ಪತ್ರೆಯ ಆಟಿಸಂ ಕೇಂದ್ರದ ಕುರಿತು ಮಾತನಾಡುತ್ತ, ಪಾಲಕರಲ್ಲಿ ಜಾಗೃತಿ ಮೂಡಿಸುವುದು. ಮಕ್ಕಳು ಸರಿಯಾದ ಸಮಯದಲ್ಲಿ ಚಿಕಿತ್ಸೆ ಮತ್ತು ಮಾರ್ಗದರ್ಶನ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.
ಶಿಬಿರದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಬುದ್ಧಿಮತ್ತೆ ಪರೀಕ್ಷೆ, ಮಾತು ಮತ್ತು ಭಾಷಾ ಮೌಲ್ಯಮಾಪನ, ಬೆಳವಣಿಗೆಯ ತಪಾಸಣೆ ಮತ್ತು ನಡವಳಿಕೆಯ ಮೌಲ್ಯಮಾಪನ ಸೇರಿದಂತೆ ವಿಶೇಷ ಪರೀಕ್ಷೆಗಳ ಪ್ರಯೋಜನವನ್ನು ಪಡೆದರು. ಈ ವೇಳೆ ಮಿರಜ, ಸಾಂಗಲಿ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಪಾಲಕರು, ನಿರ್ಮಲ್ ಆಸ್ಪತ್ರೆ ಮತ್ತು ಆಟಿಸಂ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 