ತಂದೆ ತಾಯಿಗಳನ್ನು ಜೋಪಾನ ಮಾಡುವುದು ಮಕ್ಕಳ ಕರ್ತವ್ಯ

ಶಿಗ್ಗಾವಿ 28: ಇಂದು ಮಕ್ಕಳು ವಿದ್ಯಾವಂತರಾಗಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇದ್ದರು ತಂದೆ ತಾಯಿಗಳನ್ನು ವ್ರದ್ಧಾಶ್ರಮದಲ್ಲಿ ಬಿಡುವ ಪರಂಪರೆ ಇದೆ ಎಂದು ಬಂಕಾಪುರದ ಅರಳೆಲೆಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ನಡೆದ ಗ್ರಾಮದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಇಂದು ಶ್ಯಾಡಂಬಿ ಗ್ರಾಮದಲ್ಲಿ ಬರಗಾಲದ ಸಂದರ್ಭದಲ್ಲಿಯೂ ಇಂತಹ ದೊಡ್ಡ ಕಾರ್ಯಕ್ರಮ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಬರ ಇರುವುದು ಕೇವಲ ಜನರ ಬಾಯಲ್ಲಿ ಬರದ ನಡುವೆಯೂ ಇಂತಹ ಜಾತ್ರಾ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಇದೆಲ್ಲ ದೇವಿಯ ಮಹಿಮೆ ಇಂದು ನಾವು ದೇವರನ್ನು ಕಂಡಿಲ್ಲ ಆದರೆ ತಂದೆ ತಾಯಿಗಳಲ್ಲಿಯೆ ದೇವರನ್ನು ಕಾಣಬೇಕಿದೆ ಎಂದರು. 

ಶಶಿಧರ ಯಲಿಗಾರ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿ ಇಂದು ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲುಹಾ ಜೋಪಾನ ಮಾಡಿದ ತಂದೆ ತಾಯಿಯನ್ನು ಇಂದು ನಾವು ಅನಾಥ ಆಶ್ರಮದಲ್ಲಿ ಬಿಡುತ್ತಿದ್ದೇವೆ ಇದು ನಮ್ಮ ಸಂಸ್ರ್ಕತಿಯಲ್ಲ ತಂದೆ ತಾಯಿಯನ್ನು ಜೋಪಾನ ಮಾಡುವುದು ನಮ್ಮ ಜವಾಬ್ದಾರಿ ಇಂದು ಸನಾತನ ಸಂಸ್ಕೃತಿಯು ಮರೆಯಾಗುತ್ತಿದೆ ಎಂದು ಕೆಲವರು ಹೇಳುತ್ತಾರೆ ಆದರೆ ಈ ಜಾತ್ರೆ ನೋಡಿದರೆ ಸನಾತನ ಪರಂಪರೆ ಇನ್ನು ಜೀವಂತವಾಗಿದೆ ಎಂಬುದು ಸತ್ಯ ಎಂದರು. ಸೋಮಣ್ಣ ಬೇವಿನಮರದ  ಮಾತನಾಡಿ ಇಂದು ದ್ಯಾಮವ್ವ ದುರ್ಗವ್ವ ಕೊರವ್ವ ಕೆಮ್ಮವ್ವ ಅನೇಕ ದೇವರುಗಳ ಇವೆ ಅವು ಯಾವು ನಿಜವಾದ ದೇವರುಗಳಲ್ಲ ನಿಜವಾದ ದೇವರುಗಳು ತಂದೆ ತಾಯಿ ಅವರನ್ನು ಇಂದು ಗೌರವಿಸಬೇಕಿದೆ ಎಂದರು. ಯಾಶೀರಖಾನ್ ಪಠಾಣ ಹಾಗೂ ತಿಪ್ಪಣ್ಣ ಸಾತಣ್ಣವರ, ಕೊಟ್ರೇಶ ಮಾಸ್ತರ ಬೆಳಗಲಿ,  ಪಕ್ಕಿರೇಶ ಮಾಸ್ತರ ಕೊಂಡಾಯಿ  ಮಾತನಾಡಿದರು. ಗ್ರಾಮದ ಧರ್ಮ ಕಾರ್ಯದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು ನಂತರ ಬೆಳಗಲಿ ಗ್ರಾಮದ ಕಲಾವಿದರಿಂದ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.ಈ ಸಂದರ್ಭದಲ್ಲಿ ಮಾಂತೇಶ ಮಾಸ್ತರ ಬೆಳಗಲಿ, ಸುರೇಶ ಯಲಿಗಾರ, ನೀಲಪ್ಪ ಮಾಕಪ್ಪನವರ, ಚಂದ್ರು ಹುಬ್ಬಳ್ಳಿ, ಬಿ.ಎಸ್‌. ಹಿರೇಮಠ, ಬಸವರಾಜ ಹಿರೇಮಠ, ಪ್ರಭಾಕರ ಬಡಿಗೇರ, ಮಲ್ಲಿಕಾರ್ಜುನ ಅಗಸರ, ರುದ್ರ​‍್ಪ ಕಾಳೆ, ಶಿವಪ್ಪ ಈಟಿ, ಶಿವರಾಜ ಸಂಜೀವಣ್ಣವರ ಹಾಗೂ ಇತರರು ಉಪಸ್ಥಿತರಿದ್ದರು.