ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿರುವುದು ಶ್ಲಾಘನೀಯ: ರುದ್ರ​‍್ಪ ಲಮಾಣಿ

 ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿರುವುದು ಶ್ಲಾಘನೀಯ: ರುದ್ರ​‍್ಪ ಲಮಾಣಿ  It is praiseworthy that students are pursuing their studies in large numbers: Rudrappa Lamani

ಹಾವೇರಿ 11 : ಖಾಸಗಿ ಕಾಲೇಜುಗಳ ಪೈಪೋಟಿಯ ನಡುವೆಯೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಮೂಲಸೌಕರ್ಯಗಳ ಲಭ್ಯತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ರುದ್ರ​‍್ಪ ಲಮಾಣಿ ಹೇಳಿದರು.  

ಇಲ್ಲಿನ ಬಸವೇಶ್ವರ ನಗರದ ಸಿ ಬ್ಲಾಕ್ನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜಿಗೆ ಒಂದು ಕೋಟಿ ರೂ. ಅನುದಾನದಲ್ಲಿ ನಾಲ್ಕು ಕೊಠಡಿಗಳನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ 15 ಕಂಪ್ಯೂಟರ್ಗಳು, ಹೈಮಾಸ್ಟ್‌ ವಿದ್ಯುತ್ ಸೌಲಭ್ಯ ಹಾಗೂ ನೀರು ಶುದ್ಧೀಕರಣ ಘಟಕವನ್ನು ಅಳವಡಿಸಲಾಗಿದೆ ಎಂದರು.  

ದಾನಿಗಳ ಸಹಕಾರದಿಂದ ಕಾಲೇಜಿನ ಮೈದಾನ ಅಭಿವೃದ್ಧಿಪಡಿಸುವುದರ ಜೊತೆಗೆ ಸೋರುವ ಕೊಠಡಿಗಳಿಗೆ ಮೇಲ್ಚಾವಣಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡಿ ಕಾಲೇಜಿಗೆ ಹಾಗೂ ಪಾಲಕರಿಗೆ ಹೆಸರನ್ನು ತರುವಂತೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.  

ಅಗ್ನಿವೀರ ಹುದ್ದೆಗೆ ಆಯ್ಕೆಯಾದ ಹಳೆಯ ವಿದ್ಯಾರ್ಥಿಗೆ ಸನ್ಮಾನ  

ಇದೇ ಸಂದರ್ಭದಲ್ಲಿ ಅಗ್ನಿವೀರ ಹುದ್ದೆಗೆ ಆಯ್ಕೆಯಾಗಿರುವ ಕಾಲೇಜಿನ ಹಳೆಯ ವಿದ್ಯಾರ್ಥಿ ವಿರೇಶ ಮರೋಳಕೊಪ್ಪ ಅವರನ್ನು ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.  

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಫ್‌.ಎನ್‌. ಗಾಜಿಗೌಡ್ರ, ಕಾಲೇಜು ಸುಧಾರಣಾ ಸಮಿತಿಯ ಉಪಾಧ್ಯಕ್ಷ ಸಂಜೀವಕುಮಾರ ನೀರಲಗಿ, ಪಿಯು ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್‌.ಎಸ್‌. ನಿಸ್ಸೀಮಗೌಡ್ರ, ಪ್ರಾಚಾರ್ಯ ಆರ್‌.ಕೆ. ಅಂಬೋರೆ, ಮುಖಂಡ ರಮೇಶ ಆನವಟ್ಟಿ, ಕಾಲೇಜು ಸುಧಾರಣಾ ಸಮಿತಿಯ ನಿಂಗಪ್ಪ ಚಾವಡಿ, ಶಿವಬಸಪ್ಪ ಹುಲಗಣ್ಣನವರ, ಬಸವರಾಜ ಡೊಳ್ಳಿನ, ವೈಶಾಲಿ ಕರಿಸಿದ್ದೇಶ್ವರಮಠ, ಸಂಜನಾ ಮೋರೆ, ಉಪನ್ಯಾಸಕರಾದ ಪ್ರಮೋದ ನಲವಾಗಲ್ ಹಾಗೂ ಪಿ.ಬಿ. ಬಾರಕೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಉಪನ್ಯಾಸಕ ಎ.ಎನ್‌. ಗುಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ.ಬಿ. ಕಣಕಿ ಕಾಲೇಜು ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಗಾಯತ್ರಿ ನಾಯಕ್ ನಿರೂಪಿಸಿದರು. ಎಲ್‌.ಡಿ. ಕೊರಗರ ಸ್ವಾಗತಿಸಿದರು.