ಅಭಿವೃದ್ಧಿಯ ಹರಿಕಾರ, ಹಿರಿಯ ರಾಜಕೀಯ ಮುತ್ಸದ್ದಿ ಎಚ್ ಕೆ ಪಾಟೀಲರಿಗೆ ಸಚಿವ ಸ್ಥಾನ ನೀಡದಿರುವದು ಘೋರ ಅನ್ಯಾಯ

ಅಭಿವೃದ್ಧಿಯ ಹರಿಕಾರ, ಹಿರಿಯ ರಾಜಕೀಯ ಮುತ್ಸದ್ದಿ ಎಚ್ ಕೆ ಪಾಟೀಲರಿಗೆ ಸಚಿವ ಸ್ಥಾನ ನೀಡದಿರುವದು ಘೋರ ಅನ್ಯಾಯ It is a grave injustice not to give a ministerial position to HK Patil, a pioneer of development and

ಲೋಕದರ್ಶನ ವರದಿ 

ಗದಗ 10:- ರಾಜಕೀಯ ಇತಿಹಾಸದಲ್ಲಿಯೇ ತಮ್ಮ ಬದ್ಧತೆ, ಪಕ್ಷನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರಾದ ಹಿರಿಯ ರಾಜಕೀಯ ಮುತ್ಸದ್ದಿ, ಡಾಕ್ಟರ್ ಎಚ್ ಕೆ ಪಾಟೀಲ್ ರವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಆಧಾರಸ್ಥಠವಾಗಿ  ಹಲವು ದಶಕಗಳಿಂದ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಸಿದ್ಧಾಂತಗಳಿಗೆ ನಿಷ್ಠತೆಯ ಪ್ರತಿಬಿಂಬವಾಗಿ ಕಾರ್ಯನಿರ್ವಹಿಸಿರುವರು.  

ಕರ್ನಾಟಕ ಸರಕಾರದ ಮಂತ್ರಿಮಂಡಲದಲ್ಲಿ ಸಚಿವರಾಗಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಕಾನೂನು ಖಾತೆಗಳಂತಹ ಮಹತ್ವದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಪ್ರಾಮಾಣಿಕತೆ ಮತ್ತು ಜನಪರ ಕಾಳಜಿ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಎತ್ತಿಹಿಡಿದ ಇವರು, ಯಾವುದೇ ವಿವಾದಗಳಿಗೆ ಆಸ್ಪದವಿಲ್ಲದೇ ಜನಪ್ರಿಯತೆಯನ್ನು ಗಳಿಸಿದ್ದಾರೆ. 

ಇವರ ನೇತೃತ್ವದಲ್ಲಿ ಜಾರಿಗೆ ಬಂದ ಅನೇಕ ಯೋಜನಗಳಾದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಯೋಜನೆಗಳು ರಾಜ್ಯದಲ್ಲಿ ಕಾನೂನು ಸಚಿವರಾಗಿಯೂ ಕೂಡ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಾಗೂ ಕಾನೂನು ಸುಧಾರಣೆಯಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅದರಂತೆ ಪ್ರವಾಸೋದ್ಯಮ ಸಚಿವರಾಗಿ ಸಮಸ್ತ ನಾಡಿನ ಹಲವಾರು ಧಾರ್ಮಿಕ, ಪೌರಾಣಿಕ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸಿ ಪ್ರವಾಸೋಧ್ಯಮ ಒಂದು ನವ ಚೈತನ್ಯವನ್ನು ನೀಡಿರುವರು. 

ಉದಾಹರಣೆಗೆ ಸುಪ್ರಸಿದ್ದ ವೀರನಾರಾಯಣ ದೇವಸ್ಥಾನ, ಲಕ್ಕುಂಡಿಯ ಪ್ರಾಚೀನತೆಯನ್ನು ಕಾಯ್ದುಕೊಳ್ಳಲು ಅಗತ್ಯ ಕ್ರಮ, ಸೋಮೇಶ್ವರ ದೇವಸ್ಥಾನ, ರಾಮೇಶ್ವರ ದೇವಸ್ಥಾನದ ಪುನಃರುಜ್ಜಿವನ, ನಗರದಲ್ಲಿನ ರಸ್ತೆ, ಉದ್ಯಾನವನ ಹಾಗೂ ಬಯಲು ಮುಕ್ತ ಸೌಚಾಲಯಕ್ಕಾಗಿ ಗೌರವ ಘಟಕಗಳ ಅನುಷ್ಠಾನ, ಸ್ಥಳೀಯವಾಗಿ ಮತ್ತು ರಾಜ್ಯ ಮಟ್ಟದಲ್ಲಿ ಇವರು ಕೈಗೊಂಡ ಜನಪರ ನಿರ್ಧಾರಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಇವರನ್ನು ಜನಪ್ರಿಯ ನಾಯಕರನ್ನಾಗಿ ಮಾಡಿವೆ.  

ಪಕ್ಷದ ಕಾರ್ಯಕರ್ತರು ಬೆಂಬಲಿಗರನ್ನು ಅಭಿಮಾನಿಗಳನ್ನು ನಿರಂತರ ಸಂಪರ್ಕದಲ್ಲಿದ್ದುಕೊಂಡು ಕಾರ್ಯಕರ್ತರಲ್ಲಿಯೂ ಪಕ್ಷನಿಷ್ಠೆ ಮತ್ತು ಅರ್ಹತೆ, ಯೋಗ್ಯತೆ ಚತುರತೆಯನ್ನು ಗುರುತಿಸಿ ಕಾರ್ಯಕರ್ತರನ್ನು ಅವರ ಅರ್ಹತೆಗೆ ತಕ್ಕ ಹುದ್ದೆಯನ್ನು ನೀಡಿ ಸದಾ ಪ್ರೋತ್ಸಾಹಿಸುವ ಮೂಲಕ ಸಮಸ್ತ ಗದಗ ಜಿಲ್ಲೆಯ ನಾಗರಿಕರ ಜನಸ್ನೇಹಿ ನಾಯಕತ್ವವನ್ನು ವಹಿಸಿರುವರು. 

ಇಂತಹ ದೂರದೃಷ್ಟಿ, ಚಾಣಾಕ್ಷ ಅನುಭವಿ ರಾಜಕಾರಣಿಗಳಾದ ಸನ್ಮಾನ್ಯ ಡಾಕ್ಟರ್ ಎಚ್ ಕೆ ಪಾಟೀಲ್ ರವರಿಗೆ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ ಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ಮಂತ್ರಿ ಸ್ಥಾನ ನೀಡದಿರುವದು ಸಮಸ್ತ ಗದಗ ಜಿಲ್ಲೆಯಷ್ಟೇ ಅಲ್ಲದೇ ಉತ್ತರ ಕರ್ನಾಟಕ ಭಾಗದ ನಾಗರೀಕ ಬಂಧುಗಳಿಗೆ ಅನ್ಯಾಯ ಎಸಗಿದಂತಾಗಿದೆ ಎಂದು ಗದಗ ಬೆಟಗೇರಿ ಶಹರ ಕಾಂಗ್ರೇಸ್  ಮಾಧ್ಯಮ ವಕ್ತಾರರಾದ ರಾಘವೇಂದ್ರ ಪಾಲನಕರ ರವರು ತೀವ್ರ ವಿಷಾದವನ್ನು ವ್ಯಕ್ತಪಡಿಸಿರುತ್ತಾರೆ.