ರಾಜ್ಯ ವಕೀಲರ ಪರಿಷತ್ತಿಗೆ ಇಸ್ಮಾಯಿಲ್ ಜಬಿವುಲ್ಲಾ ಆಯ್ಕೆ: ಅಹ್ಮದ್ ಪಟೇಲ್ ಹರ್ಷ

ರಾಜ್ಯ ವಕೀಲರ ಪರಿಷತ್ತಿಗೆ ಇಸ್ಮಾಯಿಲ್ ಜಬಿವುಲ್ಲಾ ಆಯ್ಕೆ: ಅಹ್ಮದ್ ಪಟೇಲ್ ಹರ್ಷ Ismail Zabiullah's election to the State Bar Council: Ahmed Patel happy

  ಕೊಪ್ಪಳ 30: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ನ್ಯಾಯವಾದಿ ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಸ್‌. ಇಸ್ಮಾಯಿಲ್ ಜಬಿವುಲ್ಲಾ ಆಯ್ಕೆಯಾಗಿರುವುದಕ್ಕೆ ಕೊಪ್ಪಳ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡ ಹಾಗೂ ನಗರಸಭೆಯ ಮಾಜಿ ಅಧ್ಯಕ್ಷ ಅಹ್ಮದ್ ಪಟೇಲ್ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.  

ಈ ಕುರಿತು ಪ್ರಕಟಣೆ ನೀಡಿರುವ ಅವರು, ಇಸ್ಮಾಯಿಲ್ ಜಬಿವುಲ್ಲಾ ಅವರ ಆಯ್ಕೆಯಿಂದ ವಕೀಲರ ಪರಿಷತ್ತಿಗೆ ಮತ್ತಷ್ಟು ಬಲ ಸಿಗಲಿದ್ದು, ಅವರ ಅನುಭವ ಮತ್ತು ಸೇವೆಯಿಂದ ನ್ಯಾಯಾಂಗ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

ಚುನಾವಣೆಯ ಸಂದರ್ಭದಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅವರ ಪರ ಪ್ರಚಾರ ನಡೆಸಿ ಬೆಂಬಲ ಕೋರಿದ ನೆನಪನ್ನು ಹಂಚಿಕೊಂಡ ಅಹ್ಮದ್ ಪಟೇಲ್, ಜಬಿವುಲ್ಲಾ ಅವರ ಗೆಲುವು ನ್ಯಾಯವಾದಿಗಳ ಸಮುದಾಯದ ಗೆಲುವಾಗಿದ್ದು, ಮುಂದಿನ ದಿನಗಳಲ್ಲಿ ವಕೀಲರ ಪರಿಷತ್ತು ಹಾಗೂ ಸಮಾಜದ ಅಭಿವೃದ್ಧಿಗೆ ಅವರು ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಿದರು.  ಅವರ ಗೆಲುವಿಗೆ ಶ್ರಮಿಸಿದ ಎಲ್ಲಾ ಬೆಂಬಲಿಗರು, ಕಾರ್ಯಕರ್ತರು ಹಾಗೂ ಮತದಾರರಿಗೂ ಅಹ್ಮದ್ ಪಟೇಲ್ ಅಭಿನಂದನೆ ಸಲ್ಲಿಸಿದ್ದಾರೆ.