ಮಹಲಿಂಗಪುರ

ಸುದ್ದಿಮನೆ ಚೇತನ ಪ್ರಶಸ್ತಿಗೆ ಈಶ್ವರ ಹನಗಂಡಿ ಆಯ್ಕೆ

ಸುದ್ದಿಮನೆ ಚೇತನ ಪ್ರಶಸ್ತಿಗೆ ಈಶ್ವರ ಹನಗಂಡಿ ಆಯ್ಕೆ

ಮಹಾಲಿಂಗಪುರ 18: ಕಾರ್ಯನಿರತ ಪತ್ರಕರ್ತರ ಸಂಘ ಸ್ಥಳೀಯ ಘಟಕ ಹಾಗೂ ಮಧುರಾ ಪ್ರಕಾಶನ ವತಿಯಿಂದ ದಿ.ಶಾಂತವೀರಯ್ಯ ಮನ್ನಯ್ಯನವರಮಠ ಅವರ ಸ್ಮರಣಾರ್ಥ ಸುದ್ದಿಮನೆಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಕೊಡಮಾಡುವ ಸುದ್ದಿಮನೆ ಚೇತನ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಈಶ್ವರ ಹನಗಂಡಿ ಆಯ್ಕೆಯಾಗಿದ್ದಾರೆ. 

ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ಆ.19 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್‌.ಐ.ಕುಂದಗೋಳ ವಹಿಸುವರು. ಅನುಸೂಯಾ ಮನ್ನಯ್ಯನವರಮಠ ಗೌರವ ಉಪಸ್ಥಿತರಿರುವರು. ಅತಿಥಿಗಳಾಗಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ಧಲಬಂಜನ, ಸದಸ್ಯ ಎಸ್‌.ಎಸ್‌. ಈಶ್ವರ​‍್ಪಗೋಳ, ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಸಂತೋಷ ಹುದ್ದಾರ, ಶ್ರೀಶೈಲ ವಜ್ಜರಮಟ್ಟಿ ಆಗಮಿಸುವರು ಎಂದು ಸಂಘದ ಕಾರ್ಯದರ್ಶಿ ಹಣಮಂತ ನಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ