ಇಷ್ಟಲಿಂಗ ಪೂಜೆಯಿಂದ ದೇಹ ಹಾಗೂ ಮನಸ್ಸಿಗೆ ಚೈತನ್ಯ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಇಷ್ಟಲಿಂಗ ಪೂಜೆಯಿಂದ ದೇಹ ಹಾಗೂ ಮನಸ್ಸಿಗೆ ಚೈತನ್ಯ: ಬಸವ ಜಯಮೃತ್ಯುಂಜಯ ಸ್ವಾಮೀಜಿ Ishtalinga worship brings vitality to the body and mind: Basava Jayamrutyunjaya Swamiji

 

ಚಡಚಣ, ಸೆ. 4: ನಿತ್ಯ ಜೀವನದಲ್ಲಿ ಇಷ್ಟಲಿಂಗ ಪೂಜೆ ಮಾಡುವುದರಿಂದ ದೇಹ ಹಾಗೂ ಮನಸ್ಸಿಗೆ ಚೈತನ್ಯ ದೊರೆಯುತ್ತದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.  

ಚಡಚಣ ತಾಲ್ಲೂಕಿನ ಏಳಗಿ (ಪಿ.ಎಚ್‌.) ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಶ್ರಾವಣ ಮಾಸದ ಪ್ರಯುಕ್ತ ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ಮನೆ ಮನದಲ್ಲಿ ಕೂಡಲಸಂಗಮ ಹಾಗೂ ಇಷ್ಟಲಿಂಗ  

ಜೀವನದಲ್ಲಿ ಅಳವಡಿಸಿಕೊಂಡು ಸಮಾಜವನ್ನು ಸಂಘಟಿಸಬೇಕು. ಮುಂದಿನ ಪೀಳಿಗೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.  

ನಮ್ಮ ಸಮಾಜ ಶ್ರಮಾಧಾರಿತ ಹಾಗೂ ಕಾಯಕಯೋಗಿ ಸಮಾಜವಾಗಿದೆ. ಸಮಾಜದಲ್ಲಿನ ಧಾರ್ಮಿಕ ಸಂಸ್ಕಾರದ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ರಾಜ್ಯಾದ್ಯಂತ ಇಷ್ಟಲಿಂಗ ಪೂಜೆ ಹಾಗೂ ಲಿಂಗಪೂಜೆ ಅಭಿಯಾನ ನಡೆಸಲಾಗುತ್ತಿದೆ. ಪ್ರತಿಯೊಬ್ಬರೂ ನಿತ್ಯ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಧಾರ್ಮಿಕ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದರು.  

ಮುಂದಿನ ಪೀಳಿಗೆಯ ಯುವಕರು ಉತ್ತಮ ಶಿಕ್ಷಣ ಪಡೆದು ಉದ್ಯೋಗಾವಕಾಶಗಳನ್ನು ಪಡೆಯಲು ಮೀಸಲಾತಿ ಅಗತ್ಯವಿದೆ. ಅದಕ್ಕಾಗಿ ಸಂಘಟಿತರಾಗಿ ಹೋರಾಟ ನಡೆಸಿ ಮೀಸಲಾತಿ ಪಡೆಯುವುದು ಅನಿವಾರ್ಯವಾಗಿದೆ ಎಂದು ಹೇಳಿದರು.  

ಇದೇ ಸಂದರ್ಭದಲ್ಲಿ ಚಡಚಣ ತಾಲ್ಲೂಕಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡವರನ್ನು ಅಭಿನಂದಿಸಲಾಯಿತು. ಡಿಸೆಂಬರ್ 10ರಂದು ‘ಕರಾಳ ದಿನ’ ಆಚರಿಸಬೇಕು ಹಾಗೂ ಅವತ್ತಿನ ದಿನ ಸಮಾಜದ ಬಾಂಧವರು ಉಪವಾಸ ಇರಬೇಕು ಎಂದು ಸ್ವಾಮೀಜಿ ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಚಡಚಣ ತಾಲ್ಲೂಕು ಪಂಚಮಸಾಲಿ ಅಧ್ಯಕ್ಷ ನಾಗನಾಥಗೌಡ ಬಿರಾದಾರ, ವಿವೇಕಾನಂದ ಹಿರೇಮಠ, ಮಹಾದೇವಗೌಡ ಪಾಟೀಲ, ಎಂ.ಬಿ. ಬಿರಾದಾರ, ಕಾಮಣ ಕರ್ಕಿ, ಸಿದ್ದರಾಮ ಬಗಲಿ, ಅಶೋಕ ಥಂಬ, ಬಸವರಾಜ ಹತ್ತರ್ಕಿ, ಶಾಂತಪ್ಪಗೌಡ ಬಿರಾದಾರ ಸೇರಿದಂತೆ ಸಮಾಜದ ವಿವಿಧ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.