ಇಷ್ಟಲಿಂಗ ಪೂಜೆಯಿಂದ ದೇಹ ಮನಸ್ಸಿಗೆ ಚೈತನ್ಯ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Ishtalinga worship brings vitality to body and mind: Basava Jayamrutyunjaya Swamiji
ಚಡಚಣ, ಸೆ. 4: ನಿತ್ಯ ಜೀವನದಲ್ಲಿ ಇಷ್ಟಲಿಂಗ ಪೂಜೆ ಮಾಡುವುದರಿಂದ ದೇಹ ಹಾಗೂ ಮನಸ್ಸಿಗೆ ಚೈತನ್ಯ ದೊರೆಯುತ್ತದೆ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಚಡಚಣ ತಾಲೂಕಿನ ಏಳಗಿ (ಪಿ.ಎಚ್.) ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಶ್ರಾವಣ ಮಾಸದ ಪ್ರಯುಕ್ತ ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ಮನೆ ಮನದಲ್ಲಿ ಕೂಡಲ ಸಂಗಮ ಹಾಗೂ ಇಷ್ಟಲಿಂಗ ಅಭಿಯಾನ’ಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಯ ಯುವಕರು ಉತ್ತಮ ಶಿಕ್ಷಣ ಪಡೆದು ಉದ್ಯೋಗಾವಕಾಶಗಳನ್ನು ಪಡೆಯಲು ಮೀಸಲಾತಿ ಅಗತ್ಯವಾಗಿದೆ. ಇದಕ್ಕಾಗಿ ಹೋರಾಟ ನಡೆಸಿ ಮೀಸಲಾತಿ ಪಡೆಯುವುದು ಅನಿವಾರ್ಯ. ಕರೆ ನೀಡಿದಾಗ ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಸಂಘಟಿತರಾಗಿ ತಮ್ಮ ಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಸ್ವಾಮೀಜಿ ಹೇಳಿದರು.
ಏಳಗಿ ಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮನ ವೃತ್ತ ನಿರ್ಮಿಸಿರುವುದು ಸಂತಸ ತಂದಿದೆ ಎಂದರು. ಡಿಸೆಂಬರ್ 10ರಂದು ‘ಕರಾಳ ದಿನ’ ಆಚರಿಸಬೇಕು ಹಾಗೂ ಅವತ್ತಿನ ದಿನ ಸಮಾಜದ ಬಾಂಧವರು ಉಪವಾಸ ಆಚರಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಹಿರೇಮಠ (ಶಾಸ್ತ್ರಿಗಳು), ಚಡಚಣ ತಾಲೂಕು ಪಂಚಮಸಾಲಿ ಅಧ್ಯಕ್ಷ ನಾಗನಾಥ ಗೌಡ ಬಿರಾದಾರ, ಮಹಾದೇವಗೌಡ ಪಾಟೀಲ, ಎಂ.ಬಿ. ಬಿರಾದಾರ, ಕಾಮಣ ಕರ್ಕಿ, ಸಿದ್ದರಾಮ ಬಗಲಿ, ಅಶೋಕ ಥಂಬ, ಬಸವರಾಜ ಹತ್ತರಕಿ, ಶಾಂತಪ್ಪಗೌಡ ಬಿರಾದಾರ, ಸಿದ್ದರಾಮ ಬಿರಾದಾರ (ಜೇವೂರ), ಧನ್ಯಾಳ ಗ್ರಾಮದ ಶೋಭಾ ಅತ್ತಿ, ಚಿದಾನಂದ ಪಾಟೀಲ,
ರಾಜು ಪಾಟೀಲ, ಈರಣ ಪಾಟೀಲ (ಮುಳಕಿ ಗೌಡರು), ಕಿರಣ ಬಿರಾದಾರ (ಗ್ರಾಮದ ಅಳಿಯ), ಕಲ್ಯಾಣಗೌಡ ಬಿರಾದಾರ (ಹಲಸಂಗಿ ಹಾದಿ), ರುದ್ರನಗೌಡ ಬಿರಾದಾರ, ಈರ್ಪ ಗೊಟ್ಯಾಳ, ಭೀಮಣ ಕರ್ಕಿ, ಬಸವರಾಜ ಬಿರಾದಾರ, ನಾಗಯ್ಯ ಅಷ್ಟಗಿ, ಮಾರೋಳಿ ಗ್ರಾಮದ ಅರ್ಥವ ಪಾಟೀಲ ಸೇರಿದಂತೆ ಚಡಚಣ ಮತ್ತು ಇಂಡಿ ತಾಲೂಕುಗಳ ಪಂಚಮಸಾಲಿ ಸಮಾಜದ ವಿವಿಧ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 