ಆರೋಗ್ಯಕರ ಜೀವನಕ್ಕೆ ಯೋಗ ಅಗತ್ಯ - ಆರ್.ಆರ್. ಪಾಟೀಲ

 ಆರೋಗ್ಯಕರ ಜೀವನಕ್ಕೆ ಯೋಗ ಅಗತ್ಯ - ಆರ್.ಆರ್. ಪಾಟೀಲ International Yoga Day celebrated in Mahalingapuram:

ಮಹಾಲಿಂಗಪುರದಲ್ಲಿ ವಿಶ್ವ ಯೋಗ ದಿನಾಚರಣೆ ಆಚರಣೆ:

ಮಹಾಲಿಂಗಪುರ, ಜೂ. ೨೧: ಲಯನ್ಸ್ ಕ್ಲಬ್ ಮಹಾಲಿಂಗಪುರ, ಗ್ರೀನ್ ಬೇಸಿನ್ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ನಗರದ ಸುಕೂನ್ ಹೋಟೆಲ್ ಆವರಣದಲ್ಲಿ ಶನಿವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಯೋಗ ಗುರು ರಾಘವೇಂದ್ರ ನೀಲಣ್ಣವರ ಅವರ ನೇತೃತ್ವದಲ್ಲಿ ನಡೆದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ವಿವಿಧ ಯೋಗಾಸನಗಳು ಹಾಗೂ ಪ್ರಾಣಾಯಾಮಗಳ ಮೂಲಕ ಯೋಗದ ಮಹತ್ವವನ್ನು ತಿಳಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರ್ಕಲ್ ಇನ್ಸ್ಪೆಕ್ಟರ್ ಆರ್.ಆರ್. ಪಾಟೀಲ ಅವರು ಮಾತನಾಡಿ, ಇಂದಿನ ಒತ್ತಡದ ಜೀವನಶೈಲಿಯಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಂತ ಅವಶ್ಯಕವಾಗಿದೆ. ಪ್ರತಿಯೊಬ್ಬರೂ ಯೋಗವನ್ನು ತಮ್ಮ ದಿನನಿತ್ಯದ ಜೀವನದ ಭಾಗವನ್ನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದು ನಕಾತಿ ವಹಿಸಿದ್ದರು. ಈ ಸಂದರ್ಭದಲ್ಲಿ ಕ್ಲಬ್‌ನ ಖಜಾಂಚಿ ಪ್ರಶಾಂತ ಅಂಗಡಿ, ರಮೇಶ ಶೆಟ್ಟರ, ಪ್ರಕಾಶ ತಾಳಿಕೋಟಿ, ಹುಚ್ಚೇಶ ವಡ್ಡರ, ಕಿರಣ ಸಣ್ಣಕ್ಕಿ, ಮಹಾಲಿಂಗ ನರಗಟ್ಟಿ, ರವಿ ಬಗನಾಳ, ಶಶಿಧರ ಉಳ್ಳೆಗಡ್ಡಿ, ಶೈಲಾ ಶೆಟ್ಟರ, ಮಂಗಲಾ ತಾಳಿಕೋಟಿ, ಮಹಾನಂದಾ ತಾಳಿಕೋಟಿ, ರಾಜು ಡಾಂಗೆ, ಸಂತೋಷ ತಾಳಿಕೋಟಿ, ವಿಕಾಸ ಕೆರೂರ, ಅಲ್ಟ್ರಾಟೆಕ್ ಸಂಸ್ಥೆಯ ಚೌಗಲೇ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೆಳಗಲಿ ಯೋಗ ಬಳಗದ ಸದಸ್ಯರು ಹಾಗೂ ಬೆಳಗಲಿ ಶಾಲೆಯ ವಿದ್ಯಾರ್ಥಿನಿಯರು ಉತ್ಸಾಹದಿಂದ ಭಾಗವಹಿಸಿ ಯೋಗ ಪ್ರದರ್ಶನ ನೀಡಿದರು. ಯೋಗದ ಮೂಲಕ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.