ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನಲ್ಲಿ ಆಂತರಿಕ ಹ್ಯಾಕಥಾನ್
Internal Hackathon at Government First Grade Women's College
ಲೋಕದರ್ಶನ ವರದಿ,
ಜಮಖಂಡಿ 09: ಹ್ಯಾಕಥಾನ್‌ಗಳು ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಕೌಶಲ್ಯ, ನಾವೀನ್ಯಪೂರ್ಣ ಚಿಂತನೆ ಮತ್ತು ಉದ್ಯಮ ಸನ್ನದ್ಧತೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪ್ರಯೋಗಿಸುವ ಮತ್ತು ವೈಫಲ್ಯದಿಂದ ಕಲಿಯುವ ಮನೋಭಾವವೇ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೊದಲ ಹೆಜ್ಜೆ ಎಂದು ಬಿಸಿಎ ವಿಭಾಗದ ಮುಖ್ಯಸ್ಥ ಹಾಗೂ ಸಂಶೋಧನಾ ಸಮಿತಿ ಕಾರ್ಯಾಧ್ಯಕ್ಷ ಡಾ. ಮುತ್ತಪ್ಪ ಮಂಟೂರ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಬಿಸಿಎ ವಿಭಾಗದ ವತಿಯಿಂದ ಐಕ್ಯೂಎಸಿ ಹಾಗೂ ಸಂಶೋಧನಾ ಕೋಶದ ಸಹಯೋಗದಲ್ಲಿ ಆಂತರಿಕ ಹ್ಯಾಕಥಾನ್‌ಹಿ2026 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐಕ್ಯೂಎಸಿ ಸಂಯೋಜಕ ಡಾ. ವಿ.ಆರ್. ದಳವಾಯಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಸಂಸ್ಥೆಯಲ್ಲಿ ಗುಣಮಟ್ಟ ಹಾಗೂ ನಿರಂತರ ಸುಧಾರಣೆಯ ಸಂಸ್ಕೃತಿಯನ್ನು ಬಲಪಡಿಸುತ್ತವೆ. ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಮತ್ತು ತಾಂತ್ರಿಕ ಸಾಮರ್ಥ್ಯ ಪ್ರದರ್ಶಿಸಲು ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಸುನಂದಾ ಎಸ್. ಶಿರೂರ ಮಾತನಾಡಿ, ಹ್ಯಾಕಥಾನ್ ಆಯೋಜಿಸಿದ ಬಿಸಿಎ ವಿಭಾಗ, ಐಕ್ಯೂಎಸಿ ಹಾಗೂ ಸಂಶೋಧನಾ ಕೋಶವನ್ನು ಅಭಿನಂದಿಸಿದರು. ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಕೌಶಲಾಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲು ಕಾಲೇಜು ಬದ್ಧವಾಗಿದೆ ಎಂದರು.
ತೀರ್ುಗಾರ ಡಾ. ಎಸ್.ಎನ್. ಭಜಂತ್ರಿ, ಶಿವಲೀಲಾ ಎಚ್., ಎಸ್.ಪಿ. ಸಜ್ಜನ್, ಪ್ರಭು ವೈ. ಅವರಾದಿ ಅವರು ತಂಡಗಳ ಯೋಜನೆಗಳನ್ನು ಮೌಲ್ಯಮಾಪನ ಮಾಡಿದರು. ಯೋಜನೆಗಳ ಪ್ರಾಯೋಗಿಕತೆ, ವಿಸ್ತರಣಾ ಸಾಮರ್ಥ್ಯ ಹಾಗೂ ಬಳಕೆದಾರ ಸ್ನೇಹಿ ವಿನ್ಯಾಸಕ್ಕೆ ಆದ್ಯತೆ ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಆಲೋಚನೆಗಳನ್ನು ಸ್ಪಷ್ಟತೆ ಹಾಗೂ ಆತ್ಮವಿಶ್ವಾಸದಿಂದ ಮಂಡಿಸುವಂತೆ ಸೂಚಿಸಿದರು.
ವಿದ್ಯಾರ್ಥಿನಿ ಶ್ರೇಯಾ ಎ. ಗಣಾಚಾರಿ ಸ್ವಾಗತಿಸಿದರು. ಕಾವ್ಯಾ ಎಸ್. ಉಪ್ಪಿನ ನಿರೂಪಿಸಿದರು, ಸರಸ್ವತಿ ಎಂ. ಕಳ್ಳಿಮಠ ವಂದಿಸಿದರು, ಕಾಲೇಜಿನ ಸಿಬ್ಬಂದಿ ಕಾರ್ಯದರ್ಶಿ ಡಾ. ಬಂಡೆನವಾಜ್ ಕೊರಬು, ಗಣಕ ವಿಜ್ಞಾನ ವಿಭಾಗದ ಬೋಧಕ ವರ್ಗದ ಕಲಾವತಿ ಎಸ್. ಬಿಸನಾಳ, ರೇಖಾ ದಾಸರ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 