ಹೊಸಳ್ಳಿಯಲ್ಲಿ ಗುಡಿ ಗಣಪತಿ ಪ್ರತಿಷ್ಠಾಪನೆ

ಹೊಸಳ್ಳಿಯಲ್ಲಿ ಗುಡಿ ಗಣಪತಿ ಪ್ರತಿಷ್ಠಾಪನೆ  Installation of Gudi Ganapathi in Hosahalli


ಯಲ್ಲಾಪುರ 19: ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಗುಡಿ ಗಣಪತಿ ಟ್ರಸ್ಟ್‌ ವತಿಯಿಂದ 44ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿಭಾವದಿಂದ ಪೂಜಿಸಲಾಯಿತು. ಗ್ರಾಮಸ್ಥರು ಹಾಗೂ ಭಕ್ತರು ಗಣೇಶನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.