ಇನ್ಸ್‌ಪೆಕ್ಟರ್ ಜ್ಯೋತಿರ್ಲಿಂಗ ಹೊನ್ನಕಟ್ಟಿಗೆ ಆರಕ್ಷಕ ಸೇವಾ ಪುರಸ್ಕಾರ

ಇಂಡಿ 27: ತಾಲೂಕಿನ ಬೆನಕನಹಳ್ಳಿ ಗ್ರಾಮದ ಜಾನಪದ ವಿದ್ವಾಂಸ, ಇನ್ಸ್‌ಪೆಕ್ಟರ್ ಜ್ಯೋತಿರ್ಲಿಂಗ ಹೊನ್ನಕಟ್ಟಿ ಇವರಿಗೆ ಪೊಲೀಸ್ ಇಲಾಖೆ ಮತ್ತು ಜಾನಪದ ಸಾಹಿತ್ಯ ಸೇವೆಯನ್ನು ಗುರುತಿಸಿ  ಬೆಂಗಳೂರಿನ ಕೋರಮಂಗಲ ಮಂಗಳ ಕಲ್ಯಾಣ ಮಂಟಪದಲ್ಲಿ ನಬಿರೋಶನ ಪ್ರಕಾಶನ ಬೋರಗಿ ವತಿಯಿಂದ ಆರಕ್ಷಕ ಮೌಲಾಲಿ ಆಲಗೂರ ಇವರ ನಲುಗದಿರಲಿ ಪರಿಸರ ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರಕ್ಷಕ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.  

ಇದೇ ವೇಳೆ ವೇದಿಕೆಯ ಮೇಲೆ ಡಿಸಿಪಿ ಎಸ್‌.ಸಿದ್ಧರಾಜು, ಡಿವೈಎಸ್ಪಿ ವಿನೋದ ಕುಮಾರ, ಇನ್ಸ್‌ಪೆಕ್ಟರ ಎಂ.ರಮೇಶ, ಪಿಎಸ್‌ಐ ಟಿಪ್ಪು ನಾಯಕವಾಡಿ, ಹಾಸ್ಯ ಭಾಷಣಗಾರ್ತಿ ಇಂದುಮತಿ ಸಾಲಿಮಠ, ಕಾಮಿಡಿ ಕಿಲಾಡಿಯ  ಶಿವಾನಂದ ಕಾಳಿ, ಸಾಹಿತಿ  ಡಾ.ಸಮೀರ ಹಾದಿಮನಿ, ಮೌಲಾಲಿ ಕೆ.ಆಲಗೂರ ಡಾ.ರಾಜು ಆಲಗೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.