ಎಂ.ಇ.ಎಸ್ ಪುಂಡರನ್ನ ಬಂಧಿಸಿ ಶಿಕ್ಷಿಸಲು ಆಗ್ರಹ


ಗುಳೇದಗುಡ್ಡ 22:  ನಾಡಪ್ರೇಮಿ, ಸ್ವಾತಂತ್ರ ಹೋರಾಟಗಾರ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನಗೊಳಿಸಿದ, ನಾಡದ್ವಜವನ್ನು ಸುಟ್ಟ ಎಂ.ಇ.ಎಸ್‌. ಪುಂಡರನ್ನು ಬಂಧಿಸಿ ಶಿಕ್ಷಿಸಬೇಕೆಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಆಸಂಗೆಪ್ಪ ನಕ್ಕರಗುಂದಿ ಆಗ್ರಹಿಸಿದರು. 

     ಅವರು ಮಂಗಳವಾರ ಕರ್ನಾಟಕ ಪ್ರದೇಶ ಕುರುಬರ ಸಂಘದ ಗುಳೇದಗುಡ್ಡ ಶಾಖೆ ಹಾಗೂ ಯುವ ಘಟಕ ಮತ್ತು ವಿವಿಧ ಸಂಘಟನೆಗಳಿಂದ ಇಲ್ಲಿನ ತಹಶೀಲ್ದಾರರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ನಮ್ಮ ನಾಡಿನಲ್ಲಿದ್ದು ನಮ್ಮ ಅನ್ನವನ್ನುಂಡು ನಮಗೆ ದ್ರೋಹ ಮಾಡುತ್ತಿರುವ ಇವರನ್ನು ನಮ್ಮ ನೆಲದಿಂದ ಓಡಿಸಿರಿ ಹಾಗೂ ಎಂ.ಇ.ಎಸ್ ಸಂಘಟನೆಯನ್ನು ರದ್ದುಗೊಳಿಸಬೇಕು ಎಂದು ಆಕ್ರೋಶದಿಂದ ಹೇಳಿದರು. 

      ಕರ್ನಾಟಕ ಪ್ರದೇಶ ಕುರುಬರ ಸಂಘದ ಗುಳೇದಗುಡ್ಡ ಶಾಖೆ ಯುವ ಘಟಕದ ಅಧ್ಯಕ್ಷರಾದ ಮಲ್ಲು ಹುನಗುಂಡಿ ಮಾತನಾಡಿ ನಾಡಿನ ಪೊಲೀಸರ ಮೇಲೆ ಹಲ್ಲೆ ಮಾಡಿ,ವಾಹನ ಸುಟ್ಟು ಪುಂಡಾಟಿಕೆ ಮೆರೆದ ಎಂ.ಇ.ಎಸ್ ಪುಂಡರನ್ನ ಬಂಧಿಸಿ ಅವರಿಗೆ ನೀಡಿದ ಸರ್ಕಾರ ಸೌಲಭ್ಯಗಳಾದ ರೇಶನ್ ಕಾರ್ಡ,ಆಧಾರ್‌ನ್ನು ಕಸಿದುಕೊಂಡು ಅವರ ರಾಜ್ಯಕ್ಕೆ ಅಟ್ಟಬೇಕು ಇದರಲ್ಲಿ ಯಾವುದೇ ಮುಲಾಜಿಗೆ ಸರ್ಕಾರ ಒಳಗಾಗಬಾರದು ಎಂದು ಹೇಳಿದರು. 

    ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಎಸ್‌.ಡಿ.ಜೋಗಿನ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ ಮೇಟಿ ಮಾತನಾಡಿದರು.ಶರಣು ಸಜ್ಜನ,ಬಸವರಾಜ ಗೋಡಿ,ಮಹಾಂತೇಶ ಕುರಿ,ಮಮಜುನಾತ ಜಡಿ,ಪರಸಪ್ಪ ಕೂಚಲ,ಸಂಗಪ್ಪ ಕುರಿ ಇದ್ದರು. 

   ತಹಶೀಲ್ದಾರರಿಗೆ ಕರವೇ ಮನವಿ : ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಕರವೇ ಅಧ್ಯಕ್ಷ ರವಿ ಅಂಗಡಿಯವರ ನೇತೃತ್ವದಲ್ಲಿ  ತಹಶೀಲ್ದಾರರಿಗೆ ಮನವಿಯನ್ನು ನೀಡಿದರು. ಕರವೇ ಅಧ್ಯಕ್ಷ ರವಿ ಅಂಗಡಿ ಮಾತನಾಡಿ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ ಗೋಳಿಸಿದ್ದಲ್ಲದೇ ಕನ್ನಡದ ನಾಡ ದ್ವಜವನ್ನು ಸುಟ್ಟು ಹಾಕಿ ಕೋಮು ಗಲಭೆಯನ್ನು ಸೃಷ್ಟಿಸಿದ್ದಾರೆ ಮುಖ್ಯಮಂತ್ರಿ ಗಳು  ಎಂ.ಇ.ಎಸ್ ಪುಂಡರನ್ನ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕೆಂದು ಅಗ್ರಹಿಸಿದರು. 

        ಶ್ರೀಕಾಂತ ಹುನಗುಂದ, ಕೆ.ಆರ್‌.ರಾಯಚೂರ, ಶಿವಾನಂದ ಯಣ್ಣಿ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.