ಕೃಷ್ಣಾ ಮೇಲ್ದಂಡೆ ಸಂತ್ರಸ್ತರಿಗೆ ಅನ್ಯಾಯ: ಭಾರತೀಯ ಕಿಸಾನ್ ಸಂಘ ಆಕ್ರೋಶ
Injustice to the victims of the upper Krishna: Bharatiya Kisan Sangh outraged
ಬೀಳಗಿ 14: ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಆಲಮಟ್ಟಿ ಹಿನ್ನೀರಿನಿಂದ ಮುಳುಗಡೆ ಜಮೀನುಗಳ ಕಳೆದುಕೊಂಡ ರಾಷ್ಟ್ರಕ್ಕಾಗಿ ಸರ್ವಸ್ವವನ್ನೆ ದಾರೆ ಎರೆದ ಸಂತ್ರಸ್ತರಿಗೆ ಪ್ರತಿ ಎಕರೆಗೆ 30 ರಿಂದ 40 ಲಕ್ಷ ಪರಿಹಾರ ನೀಡಲು ಹಿಂದೇಟು ಹಾಕಿ ಈಗ ಬಿಡದಿ ಟೌನ್ಸಿಪ್ ಗೆ ಜಮೀನು ನೀಡುವ ಸಂತ್ರಸ್ತರಿಗೆ ಪ್ರತಿ ಎಕರೆಗೆ 2 ಕೋಟೆ 7 ಲಕ್ಷದಿಂದ 2.5 ಕೋಟೆಯವರಿಗೆ ಭೂ ಪರಿಹಾರ ನೀಡಲು ಮುಂದಾಗಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರವರು ಒಂದು ಕಣ್ಣಿಗೆ ಬೆಣ್ಣಿ ಇನ್ನೊಂದು ಕಣ್ಣಿಗೆ ಸುಣ್ಣ ಬಳಿದು ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತಳೆದಿರುವದು ಖಂಡನೀಯ ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಪ. ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದ ವಿಜಯಪೂರ ,ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಜನರು ಸಾವಿರಾರು ತಲೆಮಾರುಗಳು ಜನರಿಗೆ ಆಹಾರ ಉತ್ಪಾದಿಸುವ ಕೊಟ್ಯಾಂತರ ಬೆಲೆ ಬಾಳುವ ಫಲವತ್ತಾದ ಜಮೀನುಗಳ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯಧೋರಣೆಯಿಂದಾಗಿ ಇಲ್ಲಿಯ ಸಂತ್ರಸ್ತರಿಗೆ ಬಿಕ್ಷುಕರಿಗೆ ಬೀಕ್ಷೆ ನೀಡಿದಂತೆ ಬರಿ 30 ರಿಂದ 40 ಲಕ್ಷ ಪರಿಹಾರ ನೀಡಲು ಮುಂದೆ ಬಂದಿರುವದು ಸಂತ್ರಸ್ತರ ತ್ಯಾಗಕ್ಕೆ ಅನ್ಯಾಯ ಮಾಡಲು ಹೊರಟಿರುವದು ಖಂಡನೀಯ ಎಂದರು.
ಬಿಡದಿ ಟೌನ್ಸಿಪ್ ಗೆ 2.07 ಕೋಟೆ ಯಿಂದ 2.5 ಕೋಟೆ ಪ್ರತಿ ಎಕರೆ ಭೂ ದರ ಮಂಜೂರು ನೀಡಲು ಉತ್ತರ ಕರ್ನಾಟಕದ ಜನಪ್ರತಿ ನಿಧಿಗಳ ಒಪ್ಪಿಗೆ ಪಡೆಯದೆ ಏಕ ಪಕ್ಷಿಯವಾಗಿ ನಿರ್ಧಾರ ಮಾಡಿ ಒಪ್ಪಿಗೆ ಐ ತೀಪು9 ರಚಿಸಿದ್ದಾರೆ ಇಲ್ಲವೂ ತಮ್ಮ ಒಪ್ಪಿಗೆ ಪಡೆದು ಐ ತೀಪು ರಚಿಸಿದ್ದಾರೆ ಈ ಬಗ್ಗೆ ಉತ್ರರ ಕರ್ನಾಟಕದ ಜನಪ್ರತಿನಿಧಿಗಳು ಜನರಿಗೆ ತಿಳಿಸಬೇಕು.ಕೆಲವು ಜನಪ್ರತಿ ನಿಧಿಗಳು ಮುಳಗಡೆ ಸಂತ್ರಸ್ತರಿಗೆ ನಮ್ನ ಸರಕಾರ ಹೆಚ್ಚಿನ ಪರಿಹಾರ ಕೊಡಿಸಿದ್ದೆವೆ ಎಂದು ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಖುತ್ತಿದ್ದಾರೆ.
ನಾವು ಒಂದೇ ರೀತಿಯ ತೆರಿಗೆ ನೀಡಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಜನಪ್ರತಿನಿಧಿಗಳಿಗೆ ಎಲ್ಲರಿಗೂ ಒಂದೇ ರೀತಿಯ ಸಂಭಳ ಎಲ್ಲ ಮೂಲಭೂತ ಸೌಲಭ್ಯಗಳನ್ನು ನೀಡುತ್ತೆವೆ ಆದರೂ ವಿಧಾನ ಸೌಧದ ಅಧಿವೇಶನದಲ್ಲಿ ಯಾವುದೇ ರೀತಿಯ ಉತ್ತರ ಕರ್ನಾಟಕದ ಅಭಿವೃದ್ದಿ ಬಗ್ಗೆ ಗಮನ ಹರಿಸದೇ ಕಾಲಹರಣ ಮಾಡುತ್ತಾರೋ ಹೊರತು ಉತ್ತರ ಕರ್ನಾಟಕಕ್ಕೆ ಆಗುವ ಅನ್ಯಾಯದ ಬಗ್ಗೆ ಪ್ರಶ್ನೆ ಎತ್ತುವವರು ಯಾರಿಲ್ಲ ಎಂದು ಕಿಡಿಕಾರಿದರು.ಕೃ ಮೇ ಯೋಜನೆ ಸಂತ್ರಸ್ತರಿಗೆ ಪ್ರತಿ ಎಕರೆಗೆ ಬಿಡದಿ ಟೌನ್ಸಿಪ್ 2.07 ದಿಂದ 2.5 ಕೋಟಿ ನೀಡಬೇಕು ಎಂದು ಒತ್ತಾಯಿಸಿದರು ಈ ಹೋರಾಟ ಅನಿವಾರ್ಯವಾಗುವದು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 