ಹುಣಸಿಕಟ್ಟಿ ಗ್ರಾಮದಲ್ಲಿ ಅಮಾನವೀಯ ಘಟನೆ :ಜಾತ್ರೆಗೆ ಹಣ ನೀಡದ ಕಾರಣ 7 ಕುಟುಂಬಗಳಿಗೆ ಬಹಿಷ್ಕಾರ

ಹುಣಸಿಕಟ್ಟಿ ಗ್ರಾಮದಲ್ಲಿ ಅಮಾನವೀಯ ಘಟನೆ :ಜಾತ್ರೆಗೆ ಹಣ ನೀಡದ ಕಾರಣ 7 ಕುಟುಂಬಗಳಿಗೆ ಬಹಿಷ್ಕಾರ Inhumane incident in Hunasikatti village: 7 families boycotted for not paying for the fair

ಲೋಕದರ್ಶನ ವರದಿ, 

ಜಮಖಂಡಿ 02: ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಹನುಮಂತ ದೇವರ ಜಾತ್ರೆಗೆ 600 ರೂ. ಹಣ ನೀಡದ ಕಾರಣ 7 ಕುಟುಂಬಗಳಿಗೆ ಗ್ರಾಮದಿಂದಲೇ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. 

ಗ್ರಾಮದಲ್ಲಿ ಹನುಮಂತ ದೇವರ ಜಾತ್ರೆಗೆ 600 ರೂ, ಹಣವನ್ನು ನೀಡಲಿಲ್ಲ ಎಂಬ ಕಾರಣಕ್ಕೆ ಯಲಪ್ಪ ಛಗಣ್ಣವರ, ಅಣ್ಣಪ್ಪ ಕಡಪಟ್ಟಿ, ಸಿದ್ದಪ್ಪ ಎಣ್ಣಿ, ಕರೆಪ್ಪ ಎಣ್ಣಿ, ಯಲ್ಲಪ್ಪ ಕುಲ್ಲೋಳಿ, ಮಲ್ಲಪ್ಪ ಬಟಕುರ್ಕಿ, ರಾಮಪ್ಪ ಬಟಕುರ್ಕಿ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಸಾಲದ್ದಕ್ಕೆ ಈ 7 ಕುಟುಂಬಗಳನ್ನು ಸಮಾಜದಿಂದ (ದೈವದಿಂದ) ಹೊರಗೆ ಇಟ್ಟಿದ್ದೇವೆ ಎಂದು ಡಂಗುರ ಸಾರಿದ್ದಾರೆ. 

ಏ. 2ರಂದು ಹನುಮನ ಓಕುಳಿ ಜಾತ್ರೆ ಹಿನ್ನೆಲೆ ಹಣ ಸಂಗ್ರಹ ಕಾರ್ಯ ನಡೆದಿತ್ತು. ಆದರೆ ಈ 7 ಕುಟುಂಬಗಳು ದುಡ್ಡನ್ನು ನೀಡದ ಕಾರಣಕ್ಕೆ ಏ. 5ರಂದು ಬಹಿಷ್ಕಾರದ ಬಗ್ಗೆ ಹಾಗೂ ಇವರ ಮನೆಗೆ ಸ್ವಾಮಿಗಳು, ಪೂಜಾರಿಗಳು ಹೋಗುವ ಹಾಗಿಲ್ಲ. ಇವರ ಮನೆ ಕಾರ್ಯಗಳಿಗೆ ಯಾರೂ ಹೋಗಬಾರದು. ಕಿರಾಣಿ ಅಂಗಡಿಯವರು ಈ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ಏನು ಕೊಡುವ ಹಾಗಿಲ್ಲ ಎಂದು ಡಂಗುರ ಸಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆೆ. 

ಇನ್ನು ಬಹಿಷ್ಕಾರಕ್ಕೆ ಒಳಗಾಗಿರುವ 7 ಕುಟುಂಬಗಳ ಸದಸ್ಯರ ಪೈಕಿ ರೇಲ್ವೆ ಇಲಾಖೆಯ ನೌಕರರಾಗಿರುವ ಯಲ್ಲಪ್ಪ ಛಗಣ್ಣವರ ಈ ನಿರ್ಧಾರವನ್ನು ಪ್ರಶ್ನೆ ಮಾಡಿದ್ದಾರೆ. ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವವರ ಮೇಲೆ ಕ್ರಮಕ್ಕೆ ಆಗ್ರಹಿಸಿ ನಮಗೆ ಊರಲ್ಲಿ ಬಹಿಷ್ಕಾರ ಹಾಕಿದ ಹಿನ್ನೆಲೆ ಅಪಮಾನವಾಗಿದೆ, ಗೌರವಕ್ಕೆ ಧಕ್ಕೆಯಾಗಿದೆ. ಡಂಗುರ ಸಾರಿದವರು ಮತ್ತು ಸಾರಿಸಿದವರ ಮೇಲೆ ಕಾನೂನು ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ. 

ಪ್ರಕರಣ ದಾಖಲಿಸಿದ ತಹಶೀಲ್ದಾರ:  

(ಜಮಖಂಡಿ ತಹಶೀಲ್ದಾರ ಅನೀಲ ಬಡಿಗೇರ,)  

ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಬಹಿಷ್ಕಾರಗೊಂಡ ಕುಟುಂಬದವರು ಅಧಿಕಾರಿಗಳು ಕರೆದ ಸಭೆಯಲ್ಲಿ ಭಾಗವಹಿಸದ ಕಾರಣ ಮತ್ತು ಬಹಿಷ್ಕಾರ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೇ, 2 ರಂದು ಬೆಳಗೆ ಮತ್ತೇ ಗ್ರಾಮಕ್ಕೆ ಭೇಟಿ ನೀಡಿ. ಗ್ರಾಮಸ್ಥರ ಶಾಂತಿ ಸಭೆಯನ್ನು ಸಹ ನಡೆಸಲಾಗುತ್ತದೆ. ಸಭೆಯಲ್ಲಿ ಪೊಲೀಸ್ ಸಿಬಂಧಿಗಳು ಇರುತ್ತಾರೆ ಎಂದು ತಿಳಿಸಿದಾರೆ.