ಇಂಗಳಿ ಜೈ ಹನುಮಾನ ಕ್ರೆಡಿಟ್ ಸಹಕಾರಿಗೆ 1 ಕೋಟಿ ನಿವ್ಹಳ್ ಲಾಭ: ಅಧ್ಯಕ್ಷ ಅಪ್ಪಾಸಾಬ ಜತ್ರಾಟೆ ಮಾಹಿತಿ..!

ಇಂಗಳಿ ಜೈ ಹನುಮಾನ ಕ್ರೆಡಿಟ್ ಸಹಕಾರಿಗೆ 1 ಕೋಟಿ ನಿವ್ಹಳ್ ಲಾಭ: ಅಧ್ಯಕ್ಷ ಅಪ್ಪಾಸಾಬ ಜತ್ರಾಟೆ ಮಾಹಿತಿ..! Ingali Jai Hanumana Credit Cooperative earns 1 crore profit: President Appasabha Jatrate information

ಲೋಕದರ್ಶನ ವರದಿ 

ಕಾಗವಾಡ 30: ಸಮೀಪದ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಜೈ ಹುನಮಾನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಪ್ರಸಕ್ತ ಆರ್ಥಿಕ ವರ್ಷದ ಕೊನೆಯಲ್ಲಿ ರೂ. 1 ಕೋಟಿ 57 ಸಾವಿರದಾ 273 ನಿವ್ಹಳ ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ಅಪ್ಪಾಸಾಬ ಜತ್ರಾಟೆ ತಿಳಿಸಿದ್ದಾರೆ. 

ಅವರು ಬುಧವಾರ ದಿ. 29 ರಂದು ಇಂಗಳಿ ಗ್ರಾಮದ ಸಹಕಾರಿಯ ಮುಖ್ಯ ಶಾಖೆಯಲ್ಲಿ ಆಡಳಿತ ಮಂಡಳಿಯ ಸದಸ್ಯರ ಸಭೆಯಲ್ಲಿ ಮಾತನಾಡುತ್ತಿದ್ದರು. 

ಸಹಕಾರಿಯ ಸಿಇಓ ಜಿ.ಬಿ. ಪಾಟೀಲ್ ಮಾತನಾಡಿ, 31 ಮಾರ್ಚ 2026 ರ ಕೊನೆಗೆ ಸಹಕಾರಿಯಲ್ಲಿ ಒಟ್ಟು 1755 ಸದಸ್ಯರಿದ್ದು, 38 ಕೋಟಿ 88 ಲಕ್ಷ 74 ಸಾವಿರದಾ 561 ರೂಪಾಯಿ ಠೇವಣಿ ಸಂಗ್ರಹಿಸಿ, ಸಂಘದ ಸದಸ್ಯರಿಗೆ 28 ಕೋಟಿ 9 ಲಕ್ಷ 35 ಸಾವಿರದಾ 622 ರೂಪಾಯಿ ಸಾಲ ವಿತರಿಸಿದೆ. ಇನ್ನೂ ಸಂಘವು ಒಟ್ಟು 24 ಲಕ್ಷ 19 ಸಾವಿರದಾ 300 ರೂಪಾಯಿ ಶೇರ್ ಬಂಡವಾಳದೊಂದಿಗೆ 10 ಕೋಟಿ 22 ಲಕ್ಷ 16 ಸಾವಿರ ರೂಪಾಯಿ ಗುಂತಾವಣೆಗಳನ್ನು ಹೊಂದಿದೆ. ಅದರಂತೆ ಸಂಘವು 1 ಕೋಟಿ 40 ಲಕ್ಷ 82 ಸಾವಿರ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದೆ. ಈಗಾಗಲೇ ಸಹಕಾರಿಯು ಹೊಸ ಇಂಗಳಿ, ಶಿರಗುಪ್ಪಿ ಮತ್ತು ಅಥಣಿಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಕಾಗವಾಡ್ ತಾಲೂಕಿನ ಮಂಗಸೂಳಿಯಲ್ಲಿ ಮತ್ತು ರಾಯಬಾಗ್ ತಾಲೂಕಿನ ಜಲಾಲಪೂರ್ ಗ್ರಾಮಗಳಲ್ಲಿ ನೂತನ ಶಾಖೆಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. 

ಈ ಸಮಯದಲ್ಲಿ ಸಹಕಾರಿಯ ಉಪಾಧ್ಯಕ್ಷ ಅರುಣ ಪಾಟೋಳೆ, ಸದಸ್ಯರಾದ ಶ್ರೀಪತಿ ಜಾಧವ, ಶಂಕರ ಪವಾರ, ಮೋಹನ ಬಾಮನೆ, ಸುಕಮಾರ ಶಿಂಧೆ, ಸತೀಶ ಬನೆ, ಪರಶುರಾಮ ಮಾನೆ, ನಂದಕುಮಾರ ಘಾಟಗೆ, ಬಾಳಾಸಾಬ ಅವಟಿ, ರಾಮಗೊಂಡಾ ಅಲತಗೆ, ರವಿ ಶಿರಹಟ್ಟಿ, ಪುಷ್ಪಾ ಚೌಗುಲೆ, ಮಾಲುತಾಯಿ ಧಾಬಡೆ, ಕಲ್ಲಪ್ಪಾ ಕಾಂಬಳೆ ಸೇರಿದಂತೆ ಸಹಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.