ಕ್ರೀಡಾ ಚಟುವಟಿಕೆಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಿ
Incorporate sports activities into your daily life
ಬಳ್ಳಾರಿ 07: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗ ವತಿಯಿಂದ 2025-26 ನೇ ಶೈಕ್ಷಣಿಕ ಸಾಲಿನ ಅಂತರ ಮಹಾವಿದ್ಯಾಲಯ ಪುರುಷ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಗುಡ್ಡಗಾಡು ಓಟದ ಸ್ಪರ್ಧೆಗೆ ಗಣ್ಯರು ಚಾಲನೆ ನೀಡಿದರು.ಯುವ ಸಮುದಾಯ ಪ್ರತಿನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬಹುದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ್ರೊ.ತಿ್ೇರುದ್ರ್ಪ ಜೆ ಅವರು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇನ್ನೋರ್ವ ಅತಿಥಿ ಮುತ್ತೇಗೌಡ ಕೆ.ವಿ ಅವರು ಮಾತನಾಡಿ, ವರ್ಷದಿಂದ ವರ್ಷಕ್ಕೆ ಕ್ರೀಡಾಪಟಟುಗಳು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಭಾಗವಹಿಸುವಿಕೆಗೆ ಆದ್ಯತೆ ನೀಡಬೇಕು ಎಂದರು.ಪುರುಷರ ಗುಂಪು ವಿಭಾಗದಲ್ಲಿ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ತಂಡ 42 ಅಂಕಗಳೊಂದಿಗೆ 2025-26 ನೇ ಶೈಕ್ಷಣಿಕ ಸಾಲಿಗೆ ಚಾಂಪಿಯನ್ ಆದರು.ಮಹಿಳೆಯರ ವಿಭಾಗದಲ್ಲಿ 16 ಅಂಕಗಳೊಂದಿಗೆ ಸಂಡೂರಿನ ಸರ್ಕಾರಿ ಮಹಾವಿದ್ಯಾಲಯ ತಂಡ ಚಾಂಪಿಯನ್ ಆದರು.*ವಿಜೇತರ ಪಟ್ಟಿ:*
*ಪುರುಷರ ವಿಭಾಗ:*
ಪ್ರಥಮ ಸ್ಥಾನ- ಜಿ.ವಿನಯ (ಶ್ರೀ ಹಂಪಿ ವಿರುಪಾಕ್ಷೇಶ್ವರ ಮಹಾವಿದ್ಯಾಲಯ, ಕಮಲಾಪುರ).
ದ್ವಿತೀಯ ಸ್ಥಾನ- ಹೇಮಂತರಾಜ (ಸರ್ಕಾರಿ ವಾಣಿಜ್ಯ ಮಹಾವಿದ್ಯಾಲಯ, ಬಳ್ಳಾರಿ).ತೃತೀಯ ಸ್ಥಾನ- ಎನ್.ಗೋಣಿ ಬಸವರಾಜ(ಜಿ.ಬಿ.ಆರ್ ಮಹಾವಿದ್ಯಾಲಯ, ಹೂವಿನಹಡಗಲಿ).
*ಮಹಿಳೆಯರ ವಿಭಾಗ:*ಪ್ರಥಮ ಸ್ಥಾನ- ಜಿ.ಡಿ.ಹಂಪಮ್ಮ (ಸರ್ಕಾರಿ ಮಹಾವಿದ್ಯಾಲಯ, ಸಂಡೂರು).
ದ್ವೀತಿಯ ಸ್ಥಾನ- ಸಂಧ್ಯಾ ಜಿ.ಎಲ್ (ಎಸ್.ಎಸ್.ಎ ಸರ್ಕಾರಿ ಮಹಾವಿದ್ಯಾಲಯ, ಬಳ್ಳಾರಿ).ತೃತೀಯ ಸ್ಥಾನ- ಕಾವೇರಿ (ಸರ್ಕಾರಿ ಮಹಾವಿದ್ಯಾಲಯ, ಸಂಡೂರು).
ಈ ಸಂದರ್ಭದಲ್ಲಿ ವಿವಿಯ ಕ್ರೀಡಾ ವಿಭಾಗದ ನಿರ್ದೇಶಕ ಡಾ.ಶಶಿಧರ ಕೆಲ್ಲೂರ, ಡಾ.ಸಂಪತ ಕುಮಾರ, ಲಿಂಗನಾಯ್ಕ, ಬೀರ ಲಿಂಗಪ್ಪ, ರಾಜೇಶ, ಗೌತಮ, ದುಳ್ಳಯ್ಯ, ರಾಹುಲ, ರಮೇಶ ಕೆ.ಡಿ ಸೇರಿದಂತೆ ವಿವಿಧ ಮಹಾವಿದ್ಯಾಲಯಗಳ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಹಾಗೂ ದೈಹಿಕ ಶಿಕ್ಷಣ ವಿಭಾಗದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 