ಸಂಕ್ರಾಪುರ ಗ್ರಾಮದಲ್ಲಿ ದಿ ಕಿಡ್ಸ್‌ ಕ್ಲಬ್ ಶಾಲೆಯ ಉದ್ಘಾಟನಾ

ಹೊಸಪೇಟೆ 15: ಹೊಸಪೇಟೆ ನಗರದ ಸಂಕ್ರಾಪುರ ಗ್ರಾಮದಲ್ಲಿ ದಿ ಕಿಡ್ಸ್‌ ಕ್ಲಬ್ ಶಾಲೆಯ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.  

ಕಾರ್ಯಕ್ರಮದಲ್ಲಿ ಮುಖ್ಯ  ಉದ್ಘಾಟಕರಾಗಿ ಆಗಮಿಸಿದ ಹೊಸಪೇಟೆ ವಿಜಯನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಹೆಚ್‌. ಎನ್‌. ಎಫ್ ಮೊಹಮ್ಮದ್ ಇಮಾಮ್ ನಿಯಾಜಿರವರು ನೂತನ ಶಾಲೆಯ ಉದ್ಘಾಟನೆ ಮಾಡಿ ಮಾತನಾಡಿ ಒಂದು ಶಾಲೆಯಿಂದ ಭಾಗದ ಮಕ್ಕಳಿಗೆ ದೂರ ದೂರ ಹೋಗುವ ಓಡಾಡುವ ತೊಂದರೆಗಳು ತಪ್ಪುತ್ತದೆ ಎಂದರು. 

ಶಿಕ್ಷಣದ ಮಹತ್ವದ ಕುರಿತು ಮಾತನಾಡಿ ಶಿಕ್ಷಣವು ಜಗತ್ತನ್ನು ಬದಲಾಯಿಸುವ ಪ್ರಮುಖ ಅಸ್ತ್ರವಾಗಿದೆ. ಶಿಕ್ಷಣವು ವ್ಯಕ್ತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಅವನನ್ನು ಜ್ಞಾನವುಳ್ಳ ನಾಗರಿಕನನ್ನಾಗಿ ಮಾಡುತ್ತದೆ. ಶಿಕ್ಷಣವು ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ, ಸಾಮಾಜಿಕ ಅನಿಷ್ಟಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ ಮತ್ತು ಇಡೀ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. 

ಶಿಕ್ಷಣವು ಪ್ರಕೃತಿಯ ರಹಸ್ಯವನ್ನು ಬಿಚ್ಚಿಡಲು ಸಹಾಯ ಮಾಡುತ್ತದೆ. ಇದು ನಮ್ಮ ಸಮಾಜದ ಕೆಲಸವನ್ನು ಅರ್ಥಮಾಡಿಕೊಳ್ಳಲು ಮತ್ತು ಸುಧಾರಿಸಲು ನಮಗೆ ಅನುವು ಮಾಡಿಕೊಡುತ್ತದೆ. ಇದು ಉತ್ತಮ ಜೀವನಕ್ಕಾಗಿ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಶಿಕ್ಷಣವು ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊರತರುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಪಡೆಯುವ ಹಕ್ಕಿದೆ. 

ಶಿಕ್ಷಣವು ಜ್ಞಾನ, ಕೌಶಲ್ಯ, ತಂತ್ರ, ಮಾಹಿತಿಯನ್ನು ಒದಗಿಸುವ ಮಹತ್ವದ ಸಾಧನವಾಗಿದೆ ಮತ್ತು ಜನರು ತಮ್ಮ ಕುಟುಂಬ, ಸಮಾಜ ಮತ್ತು ರಾಷ್ಟ್ರದ ಕಡೆಗೆ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ನಮ್ಮ ಸುತ್ತಲಿನ ಪ್ರಪಂಚವನ್ನು ನೋಡಲು ನಿಮ್ಮ ದೃಷ್ಟಿ ಮತ್ತು ದೃಷ್ಟಿಕೋನವನ್ನು ನೀವು ವಿಸ್ತರಿಸಬಹುದು. ಕೊನೆಯಲ್ಲಿ ಶಾಲೆಯ ಸಾರ್ವಜನಿಕರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. 

ಈ ಒಂದು ಸಮಾರಂಭದಲ್ಲಿ ಶಾಲೆಯ ಸಂಸ್ಥಾಪಕ ಹಾಗೂ ನದೀಮ್ ಬೈ ಶಕ್ಷಾವಲಿ ಫಯಾಜ್ ಅನ್ಸಾರಿ ವೆಂಕಟೇಶ್ ಹಾಗೂ ಶಾಲೆಯ ಸಿಬ್ಬಂದಿಗಳು ಶಾಲೆಯ ಮಕ್ಕಳು ಪಾಲಕರು ಪೋಷಕರು ಉಪಸ್ಥಿತರಿದ್ದರು.