ಜೆ.ಎಸ್‌.ಎಸ್ ನಲ್ಲಿ ಶಕ್ತಿ ಕೌಶಲ್ಯ ಕೇಂದ್ರ ಉದ್ಘಾಟನೆ

ಧಾರವಾಡ, 27: ವಿದ್ಯಾರ್ಥಿಗಳಿಗೆ ಪಠ್ಯ ಕಲಿಕೆಯ ಜೊತೆಗೆ ಇತರ ಕೌಶಲ್ಯಗಳು ಬೇಕಾಗುತ್ತವೆ. ಕೇವಲ ಪಠ್ಯ ಕಲಿಕೆಯಿಂದ ಗುರಿಯನ್ನು ಸಾಧಿಸಲಾಗದು ಎಂದು ಧಾರವಾಡ ವಿದ್ಯಾಗಿರಿಯ ಜೆ.ಎಸ್‌.ಎಸ್‌.ಕಾಲೇಜಿನ ಆವರಣದಲ್ಲಿ ಇತ್ತಿಚೆಗೆ ಪ್ರಾರಂಭಗೊಂಡ ಶಕ್ತಿ ಕೌಶಲ್ಯ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಮಾತನಾಡಿ ಈ ಶಕ್ತಿ ಕೌಶಲ್ಯ ಕೇಂದ್ರದಲ್ಲಿ ಸ್ಪೋಕನ್ ಇಂಗ್ಲೀಷ, ಸ್ಟಾಕ್ ಮಾರ್ಕೆಟ್ ಕೋರ್ಸಸ್, ಕಂಪ್ಯೂಟರ್ ಟ್ರೇನಿಂಗ್ ವಿವಿಧ ನೌಕರಿಗಳಿಗೆ ಸಂಬಂಧಿಸಿದ ಸರ್ಟಿಫಿಕೆಟ್ ಕೋರ್ಸಗಳ ತರಬೇತಿ ನೀಡಲಾಗುತ್ತದೆ. ಇಂಥಹ ವಿಶೇಷ ತರಬೇತಿಗಳನ್ನು ವಿದ್ಯಾರ್ಥಿಗಳು ಪಡೆದರೆ ಉಜ್ವಲ ಭವಿಷ್ಯ ಹೊಂದಲು ಸಹಕಾರಿಯಾಗುತ್ತದೆ ಎಂದರು. 

ಶಕ್ತಿ ಕೌಶಲ್ಯ ತರಬೇತಿ ಕೇಂದ್ರದ ಪ್ರೊ. ಅವಿನಾಶ ಹೊಳಿಹೊಸುರ ಸ್ವಾಗತಿಸಿದರು. ವಿದ್ಯಾರ್ಥಿ ಪೂನಂ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಹೇಮಾ ಅ. ಹೊಳಿಹೊಸುರ ವಂದಿಸಿದರು. ಡಾ. ಅಜಿತ ಪ್ರಸಾದ ದಂಪತಿಗಳು, ಡಾ. ಎಸ್‌.ಎನ್‌.ಹೊಳಿಹೊಸುರ, ಶ್ರೀಮತಿ ಶೋಭಾ ಹೊಳಿಹೊಸುರ, ಡಾ. ಸೂರಜ ಜೈನ, ಮಹಾವೀರ ಉಪಾಧ್ಯೆ, ಶ್ರೀಮತಿ ರೇಖಾ ಹೊಳಿಹೊಸುರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.