ಶುದ್ಧ ತಂಪು ಕುಡಿಯುವ ನೀರಿನ ಅರವಟಿಕೆ ಘಟಕ ಉದ್ಘಾಟನೆ

ಮುದ್ದೇಬಿಹಾಳ 02: ಪಟ್ಟಣದ ಮುಖ್ಯ ಬಜಾರ ರಸ್ತೆಯಲ್ಲಿರುವ ಪಟೇಲ ಕಿರಾಣಾ ಸ್ಟೋರ​‍್ಸ‌ ಮಾಲಿಕ ಹಾಗೂ ಗಣ್ಯ ಉದ್ಯಮಿ ಉಮಾರಾವ ಪಟೇಲ ಅವರು ಬೇಸಿಗೆ ನಿಮಿತ್ಯ ಶುದ್ಧ ತಂಪು ಕುಡಿಯುವ ನೀರಿನ ಅರವಟಿಕೆ ಘಟಕವನ್ನು ಸೋಮವಾರ ಉದ್ಘಾಟಿಸಿದರು. 

ಈ ವೇಳೆ ಹಿರಿಯ ದಲಿತ ಸಾಹಿತಿ ಪರುಶುರಾಮ ಕೊಣ್ಣೂರ ಅವರು ಮಾತನಾಡಿ, ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಸಮರ​‍್ಕ ಸುರಿಯದೇ ಇರುವುದರಿಂದ ಕೆರೆ, ಭಾವಿಗಳು, ಬತ್ತಿ ಹೋಗಿ ಅಂತರ್ಜಲವಂತೂ ಸಂಪೂರ್ಣ ಕುಶಿತಗೊಂಡು  ಪ್ರತಿ ವರ್ಷಕ್ಕಿಂತ ಈ ಬಾರಿಯ ಬೇಸಿಗೆ ಭಾರಿ ತಾಪಮಾನಕ್ಕೆ ಜನರು ತತ್ತರಿಸಿ ಹೋಗುತ್ತಿದ್ದಾರೆ.  

ನೀರಿನ ದಾಹ, ನೀರಡಿಕೆ ನೀಗಿಸುವುದು ಪುಣ್ಯದ ಕೆಲಸ. ಕನಿಷ್ಠ ಪಕ್ಷ ಒಂದು ತಂಬಿಗೆ ನೀರನ್ನಾದರೂ ಕೊಟ್ಟು ಅವರ ದಣಿವು ದಾಹ ತಣಿಸಬಹುದು. ಸಂತೆ ವ್ಯಾಪಾರ ಸೇರಿದಂತೆ ನಾನಾ ಕೆಲಸಗಳ ನಿಮಿತ್ತ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬರುವ ರೈತರು, ಸಾರ್ವಜನಿಕರಿಗೆ ಬೇಸಿಗೆ ಹಿನ್ನೆಲೆಯಲ್ಲಿ ಉಚಿತ ನೀರಿನ ವ್ಯವಸ್ಥೆ ಕಲ್ಪಿಸಲು ಉಮಾರಾಮ ಪಟೇಲ ಅವರ ಸಾಮಾಜಿಕ ಕಳಕಳಿಯ ಜಾವಾಬ್ದಾರಿ ಕಾರ್ಯ ನಿಜಕ್ಕೂ ಶ್ಲಾಘನೀಯ. ಶುದ್ಧ ಕುಡಿಯುವ ನೀರು ಒದಗಿಸಲು ನಗರಸಭೆ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೇ ಜನಸಾಮಾನ್ಯರಿಗೆ ಶುದ್ಧ ಹಾಗೂ ತಂಪು ಕುಡಿಯುವ ನೀರು ಒದಗಿಸಲು ಅರವಟಿಕೆಗಳು ಇಲ್ಲದಿರುವುದು ಸಧ್ಯ ಬಿರು ಬೇಸಿಗೆಯಲ್ಲಿ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ ಎಂಬುದನ್ನು ಮನಗಂಡು ಹಳ್ಳಿಯಿಂದ ಬಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಕಾರ್ಯ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಇತರರಿಗೆ ಪ್ರೇರಣೆಯಾಗಿದೆ ಎಂದರು. 

ಈ ವೇಳೆ ಉಮಾರಾಮ ಪಟೇಲ, ಉಮೇಶ ಪೂರ​‍್ಪ ಲೇಬಗೇರಿ, ಶಿವಪ್ಪ ಗುರಿಕಾರ,  ಮುತ್ತು ಬಿರಾದಾರ, ಸುರೇಶ ಪಟೇಲ ಶ್ರೀಕಾಂತ ಹಿರೇಮಠ, ಅಶೋಕ ಪಟೇಲ ಸೇರಿದಂತೆ ಹಲವರು ಇದ್ದರು.