ಕಾರ್ಯನಿರತ ಪತ್ರಕರ್ತರ ರಕ್ಷಣಾ ಸಂಘಟನೆ ಉದ್ಘಾಟನೆ
Inauguration of Defense Organization of Working Journalists
ಜಮಖಂಡಿ 02: ದೇಶ ಆಧ್ಯಾತ್ಮಿಕತೆಯಿಂದ ಹೊಂದಿರುವ ದೇಶವಾಗಿದೆ. ಜಾತಿ, ಮತ, ಪಂತ, ಭೇದ- ಭಾವ ಇಲ್ಲದೆ ಇರುವ ದೇಶ ನಮ್ಮದಾಗಿದೆ. ಇಂತಹ ನಾಡಿನಲ್ಲಿ ಭ್ರಷ್ಟಾಚಾರ ಸಹವು ಕೂಡಾ ತಾಂಡವಾಡುತ್ತಿದೆ. ಅದನ್ನು ತಿದ್ದುವ ಕೆಲಸ ಪತ್ರಕರ್ತರಿಂದ ಮಾತ್ರ ಸಾಧ್ಯ ಎಂದು ಮುತ್ತಿನಕಂತಿಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.
ನಗರದ ಎಸ್.ಆರ್.ಎ ಕ್ಲಬ್‌ನಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಕ್ಷಣಾ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಬರವಣಿಗೆ ಮೂಲಕ ಸಮಾಜದಲ್ಲಿನ ಅಂಕು, ಡೊಂಕುಗಳನ್ನು ತಿದ್ದುವ ಕೆಲಸ ಮಾಡುವದು ಮುಖ್ಯವಾಗಿದೆ ಎಂದರು.
ಇಂದಿನ ಕಾಲಘಟ್ಟದಲ್ಲಿ ಯಾವುದಾದರು ಒಂದು ಸುದ್ದಿಯನ್ನು ಸಂಗ್ರಹ ಮಾಡಲು ಹೋದ ಸಮಯದಲ್ಲಿ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಪತ್ರಕರ್ತರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಸಂಘಟನೆಯ ಶಕ್ತಿಯು ಹೊಂದಿರಬೇಕು. ಪತ್ರಕರ್ತರಿಗೆ ರಕ್ಷಣೆಯನ್ನು ನೀಡುವ ಕೆಲಸ ಸಂಘಟನೆ ಮಾಡಬೇಕು ಎಂದು ಆಶೀರ್ವಚನ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಕ್ಷಣಾ ಸಂಘಟನೆಯ ರಾಜ್ಯಾಧ್ಯಕ್ಷ ರವಿ ದೊಡಮನಿ, ದಲಿತ ಮುಖಂಡ ಯಮನಪ್ಪ ಗುಣದಾಳ, ನಗರಸಭೆ ಸದಸ್ಯ ಕುಶಾಲ ವಾಗಮೋರೆ, ಪ್ರದೀಪ ಮೆಟ್ಟಗುಡ್ಡ, ಹುನ್ನೂರ ಶಾಲೆಯ ಪ್ರಾಶುಪಾಲ ಸಂತೋಷ ತಳಕೇರಿ, ಪತ್ರಕರ್ತೆ ಸರೋಜನಿ ಮಾತನಾಡಿದರು. ವೇದಿಕೆಯಲ್ಲಿ ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು, ಕಿತ್ತೂರ ಕಲ್ಯಾಣ ಕರ್ನಾಟಕ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಸಮಾಜ ಸೇವಕರು ಪಂಡಿತ ಉಪಾಧ್ಯೆ, ಕನ್ನಡ ಜಾನಪದ ಸಂಘದ ಅಧ್ಯಕ್ಷ ಅಸ್ಕಿ, ಪತ್ರಕರ್ತರಾದ ಶಶಿಕಾಂತ ತೇರದಾಳ, ಅಶೋಕ ಗುರುಕೇರ, ಅಂಜುಮ್ ಕಲಮಡ್ಡಿ, ದಲಿತ ಮುಖಂಡ ಶಶಿಧರ ಮೀಶಿ ಉಪಸ್ಥಿತರಿದರು. ಪ್ರಶಾಂತ ಕಲಬುರ್ಗಿ ನಿರೂಪಿಸಿದರು. ಲಕ್ಷ್ಮಣ ಕಾಂಬಳೆ, ಶ್ರೀಕಾಂತ ಮಠಪತಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 