ಡಿ.29ರಂದು ಅಲ್ಪಸಂಖ್ಯಾತ ಒಕ್ಕೂಟದ ಘಟಕ ಉದ್ಘಾಟನೆ

ಲೋಕದರ್ಶನವರದಿ

ಶಿಗ್ಗಾವಿ : ಶಿಗ್ಗಾವಿ ತಾಲೂಕಾ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಒಕ್ಕೂಟದ ತಾಲೂಕಾ ಶಾಖಾ ಘಟಕದ ಉದ್ಘಾಟನೆಯು ಇದೇ ಡಿ. 29 ರಂದು ರವಿವಾರ ಬೆಳಿಗ್ಗೆ 11 ಘಂಟೆಗೆ ಪಟ್ಟಣದ ಎಪಿಎಂಸಿ ಆವರಣದ ಎಲಿ ಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಾ ಅಹಿಂದ ಒಕ್ಕೂಟದ ಅಧ್ಯಕ್ಷ ಕುಬೇರಪ್ಪ ರಾಮನಕೊಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭವ್ಯ ಭಾರತದಲ್ಲಿ ಮತ ಹಾಕುವುದೊಂದೆ ಹಿಂದುಳಿದ ಸಮುದಾಯಗಳ ಕೆಲಸವಾಗಿ ಬಿಟ್ಟಿದೆ, ಈ ವರ್ಗಗಳ ಮತ ಪಡೆದುಕೊಂಡು ಹಲವಾರು ಸಮುದಾಯಗಳು ತುಳಿತಕ್ಕೆ ಒಳಗಾಗಿವೆ ನಮ್ಮ ಅಹಿಂದ ಸಂಘಟನೆ ಯಾವುದೇ ಒಂದು ಜಾತಿ, ಧರ್ಮ, ಪಕ್ಷ ಮತ್ತು ವ್ಯಕ್ತಿಯ ವಿರುದ್ಧವಲ್ಲ ಹಿಂದುಳಿದ ಸಮುದಾಯದ ಏಳಿಗೆ ಮತ್ತು ವಂಚಿತಕ್ಕೆ ಒಳಗಾದದವರ ದ್ವನಿಯಾಗಿ ನಿಲ್ಲುವುದು ಮತ್ತು ನ್ಯಾಯ ದೊರಕಿಸಿ ಕೊಡುವುದೇ ಈ ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಸಣ್ಣ ಸಣ್ಣ ಸಮುದಾಯಗಳ ಮಧ್ಯ ವಿಷಬೀಜ ಬಿತ್ತಿ ಒಡೆದಾಳು ನೀತಿ ಪ್ರಾರಂಭವಾಗಿದೆ ಇದಕ್ಕೆ ಮುಖ್ಯ ಕಾರಣ ಸಂಘಟನೆಗಳ ಕೊರತೆ ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದಿರುವ ಅವರು ಸಂಘಟನೆ ಇಲ್ಲದೆ ಬಲವಿಲ್ಲ ಆದ್ದರಿಂದ ಒಗ್ಗಟ್ಟಿನೊಂದಿಗೆ ಈ ಪಟ್ಟಭದ್ರ ಹಿತಾಶಕ್ತಿಗಳ ವಿರುದ್ಧವೇ ನಮ್ಮ ಹೋರಾಟ ಎಂದರು.

 ಅಂದು ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ಅಹಿಂದಾ ಒಕ್ಕೂಟದ ಮುಖಂಡರುಗಳಾದ ಡಿ ಎಸ್ ಮಾಳಗಿ, ಗುರುನಗೌಡ ಪಾಟೀಲ, ಶಿವಾನಂದ ರಾಮಗೇರಿ, ಬಿ ಬಿ ಸಕ್ರಿ, ಕರಿಯಪ್ಪ ಕಟ್ಟಿಮನಿ, ಮಲ್ಲಿಕಾಜರ್ುನಗೌಡ ಪಾಟೀಲ, ಫಕ್ಕೀರಪ್ಪ ಕುಂದೂರ, ಎಂ ಎಸ್ ಹಳವಳ್ಳಿ, ಬಸಯ್ಯ ಗೋನಾಳ, ಡಾ. ಮಲ್ಲೇಶಪ್ಪ ಹರಿಜನ, ನಾಗರಾಜ ಹಾವೇರಿ, ಮುನ್ನಾ ಗುಲ್ಮಿ, ಯೂಸೂಬ್ಸಾಬ್ ಭಾವಿಕಟ್ಟಿ, ಪ್ರದೀಪಕುಮಾರ ಗಿರಡ್ಡಿ, ಡಾ. ಬಿಎಚ್ ವೀರಣ್ಣ ಜಿಲ್ಲಾ ಮತ್ತು ತಾಲೂಕಾ ಸಂಚಾಲಕರಾದ ಮಹದೇವಪ್ಪ ವಡ್ಡರ, ಯಲ್ಲಪ್ಪ ಹರಿಜನ ಸೇರಿದಂತೆ ತಾಲೂಕಿನ ನೂರಾರು ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.