ಅಕ್ರಮವಾಗಿ ಸಂಗ್ರಹಿಸಿಟ್ಟ ಪಡಿತರ ಅಕ್ಕಿ ಪೊಲೀಸರಿಂದ ಜಪ್ತಿ

ಇಂಡಿ 31: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟ ಖಚಿತ ಮಾಹಿತಿ ಆಧರಿಸಿ ಆಹಾರ ನೀರೀಕ್ಷಿಕ ಪರಮಾನಂದ ಹೂಗಾರ ಹಾಗೂ ಇಂಡಿ ಗ್ರಾಮಾಂತರ ಸಿಪಿಐ ಎಂ.ಎಂ. ಡಪ್ಪಿನ್ ಹಾಗೂ ಪೊಲೀಸರು ದಾಳಿಗೈದು ಅಕ್ಕಿ ಜಪ್ತಿ ಮಾಡಿರುವ ಘಟನೆ ನಡೆದಿದೆ. 

ಹೋರ್ತಿ ಗ್ರಾಮದ ಮುರಾರ್ಜಿ ವಸತಿ ಶಾಲೆಯ ಸಮೀಪದ ತಾಂಡೆಗೆ ಹೊಂದಿಕೊಂಡಿರುವ ನಾರಾಯಣ ಮಾನಸಿಂಗ್ ನಾಯಕ್ ಅವರ ತೋಟದ ವಸತಿಯಲ್ಲಿ ಅಕ್ಕಿ ಸಂಗ್ರಹ ಮಾಡಿದ್ದ ಬಗ್ಗೆ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಆಧರಿಸಿ  ಅಧಿಕಾರಿಗಳು ದಾಳಿಗೈದಿದ್ದಾರೆ. 

ಮಂಜುನಾಥ ತಂದೆ ರೂಪಣ್ಣ ಅಳ್ಳೊಳ್ಳಿ (28) ಸಾಽಽ ಹೋರ್ತಿ ಬಂಧಿತ ಆರೋಪಿಯಾಗಿದ್ದು, 539 ಕೆ.ಜಿ. ತೂಕದ 11858 ರೂಪಾಯಿ ಮೌಲ್ಯದ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. 

ಆರೋಪಿತನಿಗೆ ವಿಚಾರಿಸಲಾಗಿ ಸಂಜು ಝಳಕಿ ಎಂಬಾತನ ಕೈಯಿಂದ ಅಕ್ಕಿ ಸಂಗ್ರಹಿಸಿ ವಿಜಯಪೂರದ ರಾಹುಲ್ ಪವಾರ್ ಎಂಬಾತನಿಗೆ ಅಕ್ಕಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. 

ಈ ಕುರಿತು ಹೋರ್ತಿ ಪೊಳೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.