ಛಲ, ಗುರಿ ಇದ್ದರೇ ಸಾಧನೆಯ ಶಿಖರ ಏರಬಹುದು: ಸೌಭಾಗ್ಯ ಬೀಳಗಿಮಠ

ಮುಂಡರಗಿ 26:  ಛಲ, ಗುರಿ ಇದ್ದರೇ ಸಾಧನೆಯ ಶಿಖರವನ್ನು ಏರಬಹುದು. ಶ್ರದ್ಧೆಯಿಂದ ಅಧ್ಯಯನ ಮಾಡಿದರೇ ಗುರಿಯನ್ನು ತಲುಪಬಹುದು ಎಂದು ಯುಪಿಎಸ್‌ಸಿ ಪರೀಕ್ಷೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಸೌಭಾಗ್ಯ ಬೀಳಗಿಮಠ ಅಭಿಪ್ರಾಯಪಟ್ಟರು. 

ಪಟ್ಟಣದ ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಜರುಗಿದ ಶಿವಾನುಭವ ಸೇವಾ ಸಮಿತಿ, ಅವ್ವ ಸೇವಾ ಟ್ರಷ್ಟ ಹುಬ್ಬಳ್ಳಿ ವತಿಯಿಂದ ಹಮ್ಮಿಕೊಂಡಿದ್ದ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ಜಯಂತಿ ಆಚರಣೆ, ವೆಂಕಟಾಪೂರ ಅಜ್ಜನವರ 57 ಪುಣ್ಯಸ್ಮರಣೋತ್ಸವ ವಿಶೇಷ ಶಿವಾನುಭವ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ತಂದೆ-ತಾಯಿಗಳ ಬೆಂಬಲದಿಂದಲೇ ಯುಪಿಎಸ್‌ಸಿ ಪರೀಕ್ಷೆಯನ್ನು ಎದುರಿಸಿ, ಪಾಸಾಗಲು ಸಾದ್ಯವಾಗಿದೆ.ಅಧ್ಯಯನ ಮಾಡುವಾಗ ಗುರುವಿನ ಗುಲಾಮನಾಗುವ ಪವೃತ್ತಿಯಿಂದ ಮಾತ್ರ ಸಾಧನೆಯ ಎತ್ತರವನ್ನು ಏರಲು ಸಾದ್ಯವಾಗಲಿದೆ.ಪ್ರತಿಯೊಬ್ಬರಲ್ಲಿ ಶಕ್ತಿಯು ಅಡಕವಾಗಿದ್ದು, ಆಶಕ್ತಿಯನ್ನು ಉಪಯೋಗಿಸಿಕೊಂಡು ಪರಿಶ್ರಮವನ್ನು ಪಟ್ಟರೇ ಯಾವದೇ ಪರೀಕ್ಷೆಯನ್ನು ಪಾಸಾಗಬಹುದಾಗಿದೆ ಎಂದು ಸೌಭಾಗ್ಯ ಬೀಳಗಿಮಠ ಹೇಳಿದರು. 

ಈ ವೇಳೆ ಅನ್ನದಾನೀಶ್ವರ ಮಹಾಶಿವಯೋಗಿಗಳು, ಮಹಾಲಿಂಗ ಮಹಾಸ್ವಾಮಿಗಳು, ಮರುಳರಾದ್ಯ ಶಿವಾಚಾರ್ಯರರು, ನಿರಂಜನ ದೇವರು, ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಹರಪನಹಳ್ಳಿ ಶಾಸಕಿ ಲತಾದೇವಿ ಮಲ್ಲಿಕಾರ್ಜುನ, ಬಸವರಾಜ ಧಾರವಾಡ, ಶಶಿ ಸಾಲಿ, ಶರಣಪ್ಪ ಬೀಳಗಿಮಠ, ಬಸಯ್ಯ ಗಿಂಡಿಮಠ, ಎಸ್‌.ಬಿ.ಕೆ.ಗೌಡರ ಸೇರಿದಂತೆ ಮತ್ತಿತರರು ಇದ್ದರು.