‘ಎಲವೂ ಭಗವಂತನ ಕರುಣೆ ಎಂದು ತಿಳಿದರೆ ದುಃಖವೇ ಇಲ’್ಲ
If one realizes that everything is God's grace, there is no sorrow
ಲೋಕದರ್ಶನ ವರದಿ,
ಜಮಖಂಡಿ 25: ಆಸ್ತಿ, ಸಂಪತ್ತು, ಸಂಸಾರ ಇವು ಯಾವುವೂ ನಮ್ಮವು ಅಲ್ಲ. ಇವೆಲ್ಲವು ಭಗವಂತನ ಸೃಷ್ಟಿ. ಆದರೆ, ಎಲ್ಲವನ್ನು ಸೃಷ್ಟಿಸಿದ ಭಗವಂತನನ್ನು ಮರೆತು ಭೌತಿಕ ಸುಖಕ್ಕಾಗಿ ಹಾತೊರೆದು ನಾವು ದುಃಖಿಗಳಾಗಿದ್ದೇವೆ ಎಂದು ತಿಕೋಟಾ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದ ಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಹಮ್ಮಿಕೊಳ್ಳುವ ಗುರುದೇವ ಸತ್ಸಂಗದ ಮಾಸಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ನಾವೇಕೆ ದುಃಖಿಗಳಾದೆವು ಎಂಬ ವಿಷಯ ಕುರಿತು ಅನುಭಾವ ಹಂಚಿಕೊಂಡರು.
ಅವರು ಬೇರೆ, ಇವರು ಬೇರೆ ಎಂಬ ಭೇದವೇ ದುಃಖಕ್ಕೆ ಕಾರಣವಾಗಿದೆ. ಅತಿಯಾಸೆ ಮಾಡಿದರೆ ಮೃತ್ಯುವಿನ ಬಾಯಿಗೆ ತುತ್ತಾಗುತ್ತೇವೆ. ಬಯಕೆಗಳನ್ನು ಕಡಿಮೆ ಮಾಡಿಕೊಂಡು ಗಳಿಕೆ ಮಾಡಿ ಎಲ್ಲವನ್ನು ಭಗವಂತನೆ ಕರುಣಿಸಿದ್ದಾನೆಂದು ತಿಳಿದರೆ ದುಃಖವೇ ಇಲ್ಲ ಎಂದರು.
ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಅತಿಯಾದ ನೀರೀಕ್ಷೆ, ಅತಿಯಾದ ಆಸೆ ಮತ್ತು ಮೋಹ, ಸೋಲು ಮತ್ತು ನಷ್ಟ ಹಾಗೂ ಹಿಂದಿನ ಕಹಿ ಘಟನೆಗಳನ್ನು ನೆನಪಿಸಿಕೊಳ್ಳುವುದು ನಾವು ದುಃಖಿಗಳಾಗಲು ಕಾರಣಗಳಾಗಿವೆ ಎಂದು ಆಶೀರ್ವಚನ ನೀಡಿದರು.
ಯಲ್ಲಪ್ಪ ಶಿವಾಪುರ ಮಾತನಾಡಿದರು. ಮಹಾಪ್ರಸಾದದ ದಾಸೋಹ ಸೇವೆಗೈದ ಮುಧೋಳ ತಾಲ್ಲೂಕಿನ ಮಾಲಾಪುರ ಗ್ರಾಮದ ಶ್ರೀಶೈಲಗೌಡ ಬಾಳಪ್ಪಗೌಡ ಪಾಟೀಲ ದಂಪತಿಯನ್ನು ಸನ್ಮಾನಿಸಲಾಯಿತು.
ಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸಗೌಡ ಪಾಟೀಲ, ಪರಮೇಶ್ವರ ತೇಲಿ, ಶಿವಾಜಿ ಜಾಧವ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿದರು. ಉಪನ್ಯಾಸಕ ಸಂಗಮೇಶ ತೆಲಸಂಗ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 