ಜಾನುವಾರುಗಳು ರೋಗಕ್ಕೀಡಾದರೆ-ಕಾಣೆಯಾದರೆ ತಕ್ಷಣ ಮಾಹಿತಿ ಲಭ್ಯವಾಗುವ ಚಿಪ್ ಅಳವಡಿ
ಯಲ್ಲಾಪುರ 24: ರೈತರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಎಲ್ಲ ಜಾನುವಾರುಗಳ ಕಿವಿಗೆ
ಚಿಪ್ ಅಳವಡಿಸಲಾಗುತ್ತಿದ್ದು, ಇದರಿಂದ ಯಾವುದೇ ಜಾನುವಾರುಗಳು ರೋಗಕ್ಕೀಡಾದರೆ ಅಥವಾ ಕಾಣೆಯಾದರೆ ತಕ್ಷಣ
ಮಾಹಿತಿ ಲಭ್ಯವಾಗುತ್ತದೆ. ಅಲ್ಲದೇ, ಅಕಾಲಿಕ ಮರಣವನ್ನಪ್ಪಿದರೆ ಸಕರ್ಾರದ ವಿಮೆ ಪಡೆಯಲು ಅನುಕೂಲವಾಗುತ್ತದೆ.
ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸಚಿವ ವೆಂಕಟರಾವ್ ನಾಡಗೌಡ
ಹೇಳಿದರು.
ಅವರು ಪಟ್ಟಣದ
ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ. 'ಜಿಲ್ಲೆಯಲ್ಲಿ 230 ಫಲಾನುಭವಿಗಳಿಗೆ ವಿಮೆ ಸೌಲಭ್ಯ ದೊರೆತಿಲ್ಲ
ಎನ್ನುವುದು ನನ್ನ ಗಮನಕ್ಕೆ ಬಂದಿದೆ.
ಈ ಕುರಿತಾಗಿಯೂ ತಕ್ಷಣ ಗಮನ ಹರಿಸಲಾಗುವದು ಎಂದರು.
ಜಾನುವಾರುಗಳ ಕಿವಿಗೆ ಚಿಪ್ ಅಳವಡಿಸುವ ಕಾರ್ಯ
ಜಿಲ್ಲೆಯಲ್ಲಿ ಶೇ 60ರಷ್ಟು ಮಾತ್ರ
ಕಾರ್ಯಗತವಾಗಿದೆ.
ಆದ್ದರಿಂದ ಇಂಥ ಉಪಯುಕ್ತ ಯೋಜನೆಯನ್ನು
ಎಲ್ಲ ಪ್ರದೇಶಗಳ ಹೈನುಗಾರರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ತ್ವರಿತ ಗಮನ ಹರಿಸಬೇಕು ಎಂದರು.ರಾಜ್ಯದಲ್ಲಿ 600 ಪಶುವೈದ್ಯರ ಹುದ್ದೆ ಖಾಲಿ ಇದ್ದು, ಇನ್ನು
2 ತಿಂಗಳ ಒಳಗೆ ಈ ಕುರಿತು
ನೂತನ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಕೇವಲ 31 ಪಶುವೈದ್ಯರು ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯಲ್ಲಿ ಖಾಲಿ ಇರುವ 114 ಹುದ್ದೆಗಳನ್ನೂ
ಶೀಘ್ರವಾಗಿ ಭತರ್ಿ ಮಾಡಲಾಗುವುದು ಎಂದು ಅವರು ಭರವಸೆ
ನೀಡಿದರು.ಇದೇ ಸಂದರ್ಭದಲ್ಲಿ ಸಚಿವ
ವೆಂಕಟರಾವ್ ನಾಡಗೌಡರನ್ನು ಶಾಸಕ
ಶಿವರಾಮ ಹೆಬ್ಬಾರ ಗೌರವಿಸಿದರು.
ಕೆಪಿಸಿಸಿ ಸದಸ್ಯ ವಿಜಯ ಮಿರಾಶಿ, ತಾ. ಪಂ. ಅಧ್ಯಕ್ಷೆ ಭವ್ಯಾ ಶೆಟ್ಟಿ, ಪಶು ಸಂಗೋಪನಾ ಇಲಾಖೆಯ ಜಿಲ್ಲಾ ಉಪನಿದರ್ೇಶಕ ಡಾ.ಸುಬ್ರಾಯ ಭಟ್ಟ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ, ನಾಗರಾಜ ನಾಯ್ಕ, ಅಮಿತ ಅಂಗಡಿ, ಶ್ರೀಧರ ಶೆಟ್ಟಿ, ಕಿರಣ ಗಾಂವ್ಕರ ಇದ್ದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 