ಮೂಡಲಗಿ ಯಲ್ಲಮ್ಮಾದೇವಿ ದೇವಸ್ಥಾನದ ಕಳಸಾರೋಹಣ

ಮೂಡಲಗಿ 25: ಪಟ್ಟಣದ ಶಿವಬೋಧರಂಗ ಮಠದ ರಸ್ತೆಯಲ್ಲಿರುವ ರೇಣುಕಾ ಯಲ್ಲಮ್ಮಾದೇವಿ ದೇವಸ್ಥಾನದ ಕಳಸಾರೋಹಣ ಹಾಗೂ ಗಣಪತಿ ಮತ್ತು ನಾಗದೇವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಸುಣಧೋಳಿಯ ಶಿವಾನಂದ ಸ್ವಾಮೀಜಿ ಮತ್ತು ಮುನ್ಯಾಳ-ರಂಗಾಪೂರದ ಡಾ.ಶಿವಲಿಂಗಮುರಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು.  

ಕಳಸಾರೋಹಣ ನಿಮಿತ್ಯ ದೇವಸ್ಥಾನದಲ್ಲಿ ಮುಂಜಾನೆ ಹೋಮ-ಹವನ ಮತ್ತು  ಗಣಪತಿ ಮತ್ತು ನಾಗದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ರೇಣುಕಾ ದೇವಿಗೆ ಮಹಾಭಿಷೇಕ ಜರುಗಿತು. ಗುರ್ಲಾಪೂರ ರಸ್ತೆಯಲ್ಲಿನ ವೆಂಕಣ್ಣ ಹಳಸಿ ಅವರ ಮನೆಯಿಂದ ಮಹಿಳೆಯರ ಕುಂಭಮೇಳ, ಆರತಿ ಮತ್ತು ವಾದ್ಯಮೇಳ ಹಾಗೂ ಆನೆಯ ಮೇರವಣಿಗೆಯೊಂದಿಗೆ ಕಳಸವನ್ನು ದೇವಸ್ಥಾನಕ್ಕೆ ಬರಮಾಡಿಕೊಂಡು ಶ್ರೀಗಳ ಅಮೃತ ಹಸ್ತದಿಂದ ಕಳಸಾರೋಹಣ ಜರುಗಿತು.   

ದೇವಸ್ಥಾನ ಕಮೀಟಿಯಿಂದ ಸತ್ಕಾರ ಸ್ವೀಕರಿಸಿದ ಮೂಡಲಗಿ-ಗೋಕಾಕ ತಾಲೂಕಾ ಕಾನಿಪ ಘಟಕ ಗೌರವಾಧ್ಯಕ್ಷ  ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ದೇವಿಯ ಆರಾಧನೆಯಿಂದ ದುಷ್ಟಶಕ್ತಿಗಳು ದೂರವಾಗಿ, ಶಾಂತಿ ಸಮೃದ್ಧಿ ನೆಲೆಸಲು ಸಾಧ್ಯ ಮೂಡಲಗಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಕಮೀಟಿಯವರು ಇಂತಹ ಧಾರ್ಮಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. 

ಯಲ್ಲಮ್ಮಗುಡ್ಡದ ರೇಣುಕಾ ಯಲ್ಲಮ್ಮ ದೇವಸ್ಥಾನದ ಅರ್ಚಕ ವಿರುಪಾಕ್ಷ ಬೇವಿನಗೀಡದ, ನಿಂಗನಗೌಡ ಸಾವಕ್ನವರ, ಮುರಡೇಶ್ವರ ಮ್ಯಾಗೇರಿ, ಕಮೀಟಿ ನಿರ್ದೇಶಕ ಯಲ್ಲಪ್ಪ ಕಾಳಪ್ಪನವರ ಹಾಗೂ ಮೂಡಲಗಿ ದೇವಸ್ಥಾನದ ರವಿ ನೇಸೂರ, ಬಾಳಯ್ಯಾ ಹಿರೇಮಠ, ವೆಂಕಣ್ಣ ಹಳಸಿ, ಸಂತೋಷ ಕಲಾಲ ಯಲ್ಲಪ್ಪ ಪೂಜೇರಿ, ಸುಭಾಸ ಅಮಾತೆ, ಮಲ್ಲಪ್ಪ ಕುಲಗೋಡ, ಕಿರಣ ಕುದರಿ, ಎಸ್‌.ಎಸ್‌.ರಾಜನಾಳ, ಗೋಪಾಲ ಪಿರೋಜಿ, ಕಲ್ಲಪ್ಪ ಹಳ್ಳೂರ, ಶಿವಬಸು ಕುದರಿ, ಡಾ.ಪ್ರಕಾಶ ನೇಸೂರ, ಆನಂದ ಕುರಣಗಿ, ಮಲ್ಲಪ್ಪ ಪೂಜೇರಿ, ಮಹಾಂತೇಶ ನೇಸೂರ, ರಮೇಶ ಹಡಪದ, ರಾಮಪ್ಪ ಪುಜೇರಿ ಮತ್ತಿತರರು ಇದ್ದರು.