ಮಹಲಿಂಗಪುರ

ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ: ಶಿವಾನಂದ ಹುನ್ನೂರ

ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ: ಶಿವಾನಂದ ಹುನ್ನೂರ

ಮಹಾಲಿಂಗಪುರ 26: ಹಡಪದ ಅಪ್ಪಣ್ಣ ಸಮಾಜದ ಏಳಿಗೆ ಮತ್ತು ಸಂಘಟನೆ ಗಟ್ಟಿಗೊಳಿಸುವುದು ಅಷ್ಟೇ ಅಲ್ಲದೇ  ಬೆಳಗಾವಿ ಜಿಲ್ಲೆಯ ಜೊತೆಗೆ ರಾಜ್ಯದ ತುಂಬಾ ಪ್ರವಾಸ ಮಾಡಿ ಸಮಾಜದ ಕುಂದು-ಕೊರತೆ ಕಂಡು ಹಿಡಿದು ಸಮಾಜದ ಸಲುವಾಗಿ ಹಗಲಿರುಳು ದುಡಿಯುವೆ ಎಂದು ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಶಿವಾನಂದ ಹುನ್ನೂರ ಹೇಳಿದರು  

ರಬಕವಿ ನಗರದ ಪ್ರವಾಸಿ ರಂಗಮಂದಿರದಲ್ಲಿ ನೂತನ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ನಂತರ ಭಾರತೀಯ ಏರ್ ಫೋರ್ಸ್‌ ಗ್ರೇಡ್‌-1 ಅಧಿಕಾರಿಯಾಗಿ ಸೇವೆ ಕಾರ್ಯನಿರ್ವಹಿಸುತ್ತಿರುವ ಸುರೇಶ ನಾವಿ ಅವರನ್ನು ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಸಮಾಜ ಮುಖಂಡರಾದ ಬುದ್ಧಪ್ಪ ಕುಂದಗೋಳ, ಚಂದ್ರಶೇಖರ ಮಾಚಕನೂರ, ವಿನೋದ ಜಾಧವ,ಮಲ್ಲಪ್ಪ ನಾವಿ,ಅಶೋಕ ಹುನ್ನೂರು, ಶಂಕರ ಹಿಪ್ಪರಗಿ,ಶಿವಾನಂದ ನಾವಿ,ಮಹಾಂತೇಶ ಹಡಪದ,ಲಕ್ಕಪ್ಪ ನಾವಿ, ವಿಠ್ಠಲ ನಾವಿ,ಹಣಮಂತ ಉಮರಾಣಿ,ಮುತ್ತಪ್ಪ ಹಿಪ್ಪರಗಿ, ಬಸವರಾಜ ಹಾಲಹಳ್ಳಿ, ಜ್ಯೋತಿಬಾ ಜಾಧವ ಸೇರಿದಂತೆ ಅನೇಕರಿದ್ದರು.ಪತ್ರಕರ್ತ ಹಣಮಂತ ನಾವಿ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ